'ಪಾವಗಡ ತಾಲೂಕಿಗೆ ಆಂಧ್ರ ಮಾದರಿ ಸೌಲಭ್ಯ ಕಲ್ಪಿಸಿ'
ಪಾವಗಡ: ಸದಾ ಬರಕ್ಕೆ ತುತ್ತಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪಾವಗಡ ತಾಲೂಕನ್ನು ಪ್ರತೇಕವಾಗಿ ಪರಿಗಣಿಸಿ ಆಂಧ್ರ ಮಾದರಿಯ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.
ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಮೀಸಲು ಕ್ಷೇತ್ರ ಪಾವಗಡ ತಾಲೂಕನ್ನು ನಿರ್ಲಕ್ಷಿಸಿದ್ದು ಅಸ್ಪೃಶ್ಯತೆಯಿಂದ ನೋಡುತ್ತಿದೆ ಎಂದು ದೂರಿದರು.
ಪಾವಗಡ ತಾಲೂಕಿಗೆ ನದಿ ಮೂಲದ ಶುದ್ಧ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಹಿನ್ನಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ಜಾರಿ ಮಾಡಿ 2 ತಿಂಗಳು ಕಳೆದರೂ ಇದಕ್ಕೆ ಪ್ರತಿಯಾಗಿ ಸರ್ಕಾರ ಯೋಜನೆ ರೂಪಿಸುವಲ್ಲಿ ನಿರ್ಲಕ್ಷ್ಯವಹಿಸಿ ಜನತೆಗೆ ಅನ್ಯಾಯ ಮಾಡುತ್ತಿದೆ. ಗಣಕೀಕೃತ ಯಂತ್ರ ಜಾರಿ ಸೇರಿದಂತೆ ಕಂಪ್ಯೂಟರ್ ಆನ್ಲೈನ್ ಪಡಿತರ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಿಮ್ಮಾರೆಡ್ಡಿ ಇದರಿಂದ ವಿಳಂಬ ಸೇರಿದಂತೆ ಬಡವರಿಗೆ ಸಮರ್ಪಕ ಪಡಿತರ ಚೀಟಿಗಳು ದೊರೆಯುತ್ತಿಲ್ಲ, ಬಡವರು ಪಡಿತರ ಕಾರ್ಡ್ಗಳು ಪಡೆಯಲು ವರ್ಷಗಟ್ಟಲೇ ಇಲಾಖೆಗಳ ಬಳಿ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದದರು.
ಹೆಚ್ಚಿನ ಬಸ್ ನಿಯೋಜಿಸಿಲ್ಲ: ಜೆಡಿಎಸ್ ಹೋರಾಟದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಈಗ ಸಾರಿಗೆ ಘಟಕ ಸ್ಥಾಪಿತವಾಗಿದ್ದು ತಾ.ಗಡಿ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯ ಹಿನ್ನಲೆಯಲ್ಲಿ ಗ್ರಾಮಾಂತರ ಪ್ರದೇಶಗಳ ಸಾರಿಗೆ ವ್ಯವಸ್ಥೆ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಘಟಕಕ್ಕೆ ಸರ್ಕಾರ ಹೆಚ್ಚಿನ ಬಸ್ ನಿಯೋಜಿಸಿಲ್ಲ ಎಂದು ಆರೋಪಿಸಿದರು.
ತಾಲೂಕನ್ನು ರಾಯಲಸೀಮೆ ಪ್ರದೇಶವೆಂದು ಪರಿಗಣಿಸುವ ಮೂಲಕ ಜ್ವಲಂತ ಸಮಸ್ಯೆಗಳ ನಿವಾರಣೆಯ ಬಗ್ಗೆ ಸರ್ಕಾರಕ್ಕೆ ಅವರು ಮನವಿ ಮಾಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಸ್.ವಿ.ಗೋವಿಂದಪ,್ಪ ಹಿರಿಯ ಮುಖಂಡ ವಾಲ್ಯನಾಯ್ಕ್ ಮಾತನಾಡಿ ರೈತರ ಬೆಳೆ ವಿಮೆ ಹಾಗೂ ಇತರೆ ಸೌಲಭ್ಯಗಳು ಕಲ್ಪಿಸುವಲ್ಲಿ ಇಲ್ಲಿನ ಕೆಲ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಭ್ರಷ್ಟಾಚಾರದಲ್ಲಿ ನಿರತವಾಗಿವೆ. ಈ ಬಗ್ಗೆ ರೈತರು ದೂರು ನೀಡಿದರೂ ತನಿಖೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಮುಖಂಡರಾದ ಕೆ.ಆರ್. ಸುರೇಶ್, ವಿ.ಚಿಂತಲರೆಡ್ಡಿ, ಅಕ್ಕಲಪ್ಪನಾಯ್ಡು, ರಾಜಶೇಖರ್, ವಕೀಲ ರವಿ ಪೊನ್ನಸಮುದ್ರ, ಸ್ವಾಮಿ, ಪುರಸಭೆ ಸದಸ್ಯರಾದ ವಸಂತಕುಮಾರ್, ಬಾಲು, ಯುವ ಮುಖಂಡ ಪ್ರಭಾಕರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

