ತುಮಕೂರು

ಒಡೆಯರ್ ಅಕಾಲಿಕ ನಿಧನದಿಂದ ರಾಜ್ಯಕ್ಕೆ ಆಘಾತ: ಪ್ರೊ.ಮ.ಲ.ನ ಮೂರ್ತಿ ಅಭಿಮತ

Published On :

ಮಧುಗಿರಿ: ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಕಾಲಿಕ ನಿಧನದಿಂದ ರಾಜ್ಯ ಬಡವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಒಡೆಯರ್‌ಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಡೆಯರ್ ಸಮಾಜಮುಖಿಯಾಗಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ, ಜನಪರ ಕಾಳಜಿ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿದ್ದವು.
ಹಿರಿಯರು ಹಾಕಿ ಕೊಟ್ಟ ಹಾದಿಯಲ್ಲಿ ಯದು ವಂಶದ ಕೊನೆ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕೂಡ ಶಿಕ್ಷಣ, ಸಾಹಿತ್ಯ, ಕ್ರೀಡೆ, ಸಂಗೀತ ಹೀಗೆ ಹತ್ತು ಹಲವು ರಂಗಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾಡಿದ ಅಪಾರ ಜನಪರ ಕಾಳಜಿ ಸೇವೇಗಳು ನಾಡಿಗೆ ಮಾದರಿಯಾಗಿವೆ. ಆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ರಾಜ್ಯಕ್ಕೆ ಕಳಶಪ್ರಾಯದಂತಿದ್ದ ನಾಡಿನ ಸಾಂಸ್ಕೃತಿಕ  ಸಂಕೇತವಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ರಾಜ ವಂಶಸ್ಥರಿಲ್ಲದ  ಮೈಸೂರನ್ನು ನೋಡಲು ಹೇಗೆ ಸಾಧ್ಯ ಎಂದು ಕಂಬನಿ ಮಿಡಿದರು. ನಾಡಿನ ಹಿತಕ್ಕಾಗಿ ಹತ್ತು ಹಲವು ರೀತಿಯ ಕೊಡುಗೆ ನೀಡಿದ್ದ ಅವರು ರಾಜ್ಯದ ಅಭಿವೃದ್ಧಿಗೆ ಅಪಾರವಾಗಿ ಶ್ರಮಸಿದ್ದರು ಎಂದು ಕೊಂಡಾಡಿದರು.
ಶಿಕ್ಷಕ ತೋಟದ ಮೋ.ನ.ಕೃಷ್ಣಮೂರ್ತಿ, ಪ್ರೊ.ಸಿ.ಕೃಷ್ಣಪ್ಪ, ಪ.ವಿ.ಸುಬ್ರಹ್ಮಣ್ಯ, ಅಮರಾವತಿ ದ್ರೇಹಚಾರ್, ರಂಗರಾಜು, ಬಿ.ಪಿ.ನಾರಾಯಣ್, ಬಂಡಿಚೌಡಯ್ಯ, ಸುರೇಶ್, ಶಕುಂತಲಾ ಗುಂಡುರಾವ್ ಮೊದಲಾದವರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.