ನಿವೃತ್ತರ ಲವಲವಿಕೆ ಯುವಕರಿಗೆ ಪ್ರೇರಣೆಯಾಗಲಿ: ಶಾಸಕ ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ: ನಿವೃತ್ತ ನೌಕರರು ಎಂದು ನಿರುಪಯೋಗಿಗಳಲ್ಲ, ಅವರ ಅನುಭವದ ಪ್ರಯೋಜನವನ್ನು ಇಂದಿನ ಯುವಪೀಳಿಗೆ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದು ಶಾಸಕ ಸಿ.ಬಿ. ಸುರೇಶ್ಬಾಬು ನುಡಿದರು.
ಮಂಗಳವಾರ ಅವರು ಪಟ್ಟಣದ ನಿವೃತ್ತ ನೌಕರರ ಸಂಘದ ಕಚೇರಿ ಆವರಣದಲ್ಲಿ ನಡೆದ ನಕರ ಮತ್ತು ನಿವೃತ್ತ ನೌಕರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರದ ನಿಯಮಪಾಲನೆ ಕಟ್ಟುಪಾಡಿನಿಂದ ನಿವೃತ್ತಿಯೆಂಬ ಪ್ರಕ್ರಿಯೆಗೊಳಪಡುತ್ತಾರೆ. ಆದರೆ ಜೀವನದ ಅನುಭವ ಪಕ್ವವಾಗಿರುವ ಕಾಲದಲ್ಲಿ ಅವರು ನಿವೃತ್ತಿಹೊಂದಿ ಸುಮ್ಮನಿರದೆ, ಇಂದಿನ ಯುವಜನೆಗೆ ಉತ್ತಮ ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ತೊಡಗಿಕೊಳ್ಳುವುದು ಅಗತ್ಯವಾಗಿದೆ. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಅವರು ಬತ್ತದ ಜ್ಞಾನಭಂಡಾರಗಳಿದ್ದಂತೆ. ಆದ್ದರಿಂದ ವೇದಿಕೆಯಲ್ಲಿರುವ ಕ್ಷೇತ್ರಶಿಕ್ಷಣಾಧಿಕಾರಿಗಳೆ ನಿವೃತ್ತಿ ಶಿಕ್ಷಕರು ಕಚೇರಿಗೆ ಬಂದರೆ ಅವರನ್ನು ಕೂರಿಸಿ ತಕ್ಷಣ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದರು. ನಕರ ಎಂಬ ಅಜ್ಞಾತ ವ್ಯಕ್ತಿ ನಿಮ್ಮ ನ್ಯಾಯಯುತ ಪಾಲಿಗೆ ಹೋರಾಡಿದ ವ್ಯಕ್ತಿಯನ್ನು ಸ್ಮರಿಸುತ್ತಿರುವುದು ತುಂಬಾ ಶ್ಲಾಘನೀಯ. ಸಂಘದ ಕಾರ್ಯಾಲಯದಲ್ಲಿ ಧ್ಯಾನ, ಯೋಗದಂತಹ ಆರೋಗ್ಯಕರ ಚಟುವಟಿಕೆಗಳು ನಡೆಯುತ್ತಿದ್ದು, ಇದು ಆರೋಗ್ಯ ತುಂಬುವ ತಾಣವಾಗಿ ಕಾರ್ಯನಿರ್ವಹಿಸಲಿದೆ. ನಿಮ್ಮ ಲವಲವಿಕೆ ನಮಗೆ ಉತ್ತೇಜನವಾಗಲಿ. ಇದರಿಂದ ನಿಮ್ಮ ಮಾನಸಿಕ, ದೈಹಿಕ ಆರೋಗ್ಯಕ್ಕೂ ಸಹಕಾರಿ. ವೃದ್ಧಾಪ್ಯದಲ್ಲಿ ಕುಟುಂಬದ ಮಕ್ಕಳಿಂದ ದೂರಾದ ನೋವನ್ನು ನಿವಾರಿಸುವ ಚಿಕಿತ್ಸಾ ಕೇಂದ್ರವಾಗಲಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

