ತುಮಕೂರು

ಮಾನವೀಯ ಮೌಲ್ಯ ಮರೆತು ಸ್ವಾರ್ಥ ಸಾಧನೆ

Published On :

ಕ.ಪ್ರ.ವಾರ್ತೆ ಕುಣಿಗಲ್ ಡಿ. 19
ಕೆಲ ಮನುಷ್ಯರು ಸ್ವಾರ್ಥ ಜೀವಿಗಳಾಗುತ್ತಾ, ಮಾನವೀಯ ಮೌಲ್ಯ ಮರೆತು, ಸ್ವಾರ್ಥ ಸಾಧನೆಗೆ ಮಾಡಬಾರದ್ದೆನ್ನೆಲ್ಲಾ ಮಾಡುತ್ತಿರುವುದರಿಂದ ಅಶಾಂತ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿದೆ ಎಂದು ನ್ಯಾಯಾಧೀಶ ಮುನಿರಾಜು ತಿಳಿಸಿದರು.
ಗುರುವಾರ, ನ್ಯಾಯಾಲಯ ಅವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಮಾನವಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹಿರಿಯರು, ಬುದ್ಧಿಜೀವಿಗಳು ಹೇಳಿರುವಂತೆ ಏನಾದರೂ ಆಗಲಿ ಮನುಷ್ಯ ಮೊದಲು ಮಾನವನಾಗಲಿ ಎಂದಿದ್ದಾರೆ. ಆದರೆ ಉತ್ತಮ ಆಲೋಚನೆ, ಚಿಂತನೆಗಳನ್ನು ಮೈಗೂಡಿಸಿಕೊಂಡು, ತಾನು ಬದುಕಿ, ತನ್ನ ನೆರೆಹೊರೆಯವರನ್ನು ತನ್ನಂತೆ ಸರಿಸಮಾನವಾಗಿ ಬದಕಲು ಬಿಡದೆ, ಸ್ವಾರ್ಥ ಸಾಧನೆಗಾಗಿ ಮತ್ತೊಬ್ಬರಿಗೆ ತೊಂದರೆ ನೀಡಿದಲ್ಲಿ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಎಲ್ಲರೂ ಈ ಭೂಮಿಯ ಮೇಲೆ ಬದುಕಿ, ಬಾಳುವ ಸಮಾನ ಹಕ್ಕನ್ನು ಹೊಂದಿದ್ದಾರೆ. ಮಾನವಹಕ್ಕುಗಳು ಹಲವು ವಿಷಯಗಳನ್ನು ಹೊಂದಿದೆ ಎಂದರು.
ಪರಸ್ಪರ ಗೌರವ: ಉತ್ತಮ ಪರಿಸರ,ಉತ್ತಮ ಆರೋಗ್ಯ ಹಾಗೂ ನೆಮ್ಮದಿಯುತವಾಗಿ ಬದುಕುವ ಹಕ್ಕು ಎಲ್ಲರೂ ಹೊಂದಿದ್ದು,ದ್ವೇಷ, ಅಸೂಯೆ, ಕ್ಲೇಶಗಳನ್ನು ಬಿಟ್ಟು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಗೌರವಿಸಿ, ಆದರಿಸಿ ಪರಸ್ಪರ ಸಹಕಾರದಿಂದ ಬಾಳ್ವೆ ನಡೆಸಿದಾಗ ಶಾಂತಯುತ ಸಮಾಜನಿರ್ಮಾಣ ಸಾಧ್ಯವಾಗುತ್ತದೆ. ಮಾನವಹಕ್ಕುಗಳನ್ನು ಗೌರವಿಸಿ, ಸಂರಕ್ಷಿಸಲು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾನವಹಕ್ಕುಗಳ ಆಯೋಗ ಕಾರ್ಯನಿರ್ವಹಿಸುತ್ತಿದ್ದು, ಮಾನವಹಕ್ಕುಗಳಿಗೆ ಚ್ಯುತಿ ಬಂದಾಗ ಆಯೋಗದ ನೆರವನ್ನು ಪಡೆಯಬಹುದಾಗಿದೆ ಎಂದರು.
ಸದುಪಯೋಗ ಪಡೆದುಕೊಳ್ಳಿ: ನ್ಯಾಯಾಧೀಶೆ ಆರ್.ಶಾರದ ಕಾರ್ಯಕ್ರಮ ಉದ್ಘಾಟಿಸಿ,ಮೆಗಾ ಲೋಕಅದಾಲತ್ ಕಾರ್ಯಕ್ರಮದಿಂದ ಐಒಬಿ ಬ್ಯಾಂಕಿನ ಬಹಳಷ್ಯು ಸುಸ್ತಿದಾರರಿಗೆ ಸಾಕಷ್ಟು ರಿಯಾಯಿತಿ ಮೂಲಕ ಸಾಲ ಮರುಪಾವತಿಗೆ ಅನುವು ಮಾಡಿಕೊಟ್ಟಿದ್ದು, ಇದೇ ತಿಂಗಳ ಕೊನೆವಾರದಲ್ಲಿ ಎಸ್‌ಬಿಎಂ, ಕೆನರಾ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳ ಸುಮಾರು 2250 ಸುಸ್ತಿದಾರರಿಗೆ ರಾಜೀಸಂಧಾನದ ಮೂಲಕ ಒಂದೆಕಂತಿನ ಮರುಪಾವತಿ ಯೋಜನೆ ಹಮ್ಮಿಕೊಂಡಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನ್ಯಾಯಾಧೀಶೆ ದಾಕ್ಷಾಯಿಣಿ, ಎಪಿಪಿ ಸುರೇಖಾ ಹಿರೇಮಠ, ಹಿರಿಯ ವಕೀಲ ಬಿ.ಕೆ. ವೆಂಕಟಕೃಷ್ಣರಾವ್, ರಾಮಚಂದ್ರಪ್ಪ, ರಂಗಸ್ವಾಮಿ ಮಾನವಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ವಕೀಲ ಸಂಘದ ಅಧ್ಯಕ್ಷ ದಯಾನಂದ್, ಕಾರ್ಯದರ್ಶಿ ಚಂದ್ರಶೇಖರ್, ಪದಾದಿಕಾರಿಗಳಾದ ರೆಹಮಾನ್, ಮುಮ್ತಾಜ್ ಅಹಮದ್, ಸುರೇಶ್, ಸತೀಶ್ ಇತರರು ಉಪಸ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.