ತುಮಕೂರು

ಪ್ರವಾಸಕ್ಕೆ ತೆರಳಿದ್ದ ಬಸ್ ಮಗುಚಿ ಕೆಲವರಿಗೆ ಗಾಯ

Published On :

ಕುಣಿಗಲ್:  ತಾಲೂಕಿನ ಹೊಳಲಗುಂದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಪ್ರವಾಸದಿಂದ ಕರೆತರುತ್ತಿದ್ದ ಖಾಸಗಿ ಬಸ್ ಮಗುಚಿ ಬಿದ್ದು ಶಿಕ್ಷಕರು, ವಿದ್ಯಾರ್ಥಿಗಳು ಗಾಯಗೊಡ ಘಟನೆ ಹಿರಿಯೂರಿನ ಬಳಿ ನಡೆದಿದೆ. ವಿದ್ಯಾರ್ಥಿಗಳಾದ ರಂಜಿತ, ಗೋವಿಂದರಾಜು, ಹೇಮಂತ್, ತೀವ್ರ ಗಾಯಗೊಂಡಿದ್ದು, ಚಾಲಕನ ನಿರ್ಲಕ್ಷ್ಯದಿಂದ ಬಸ್ಸು ಮುಗುಚಿ ಬಿದ್ದ ಕೂಡಲೇ ಚಾಲಕ ಪರಾರಿಯಾಗಿದ್ದಾನೆ.  ಜೊತೆಗಿದ್ದ ಶಿಕ್ಷಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಗಾಯಾಳುಗಳಿಗೆ, ಸಮೀಪದ  ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಕುಣಿಗಲ್ಗೆ ಕರೆತಂದರು. ಅಪಘಾತದ ಬಗ್ಗೆ ಪೋಷಕರಿಗೆ ಸೂಕ್ತ ಮಾಹಿತಿ ಕೊಡಲು, ಶಿಕ್ಷಕರು, ನಿರ್ಲಕ್ಷ್ಯ ತೋರಿದ್ದರಿಂದ, ವಿದ್ಯಾರ್ಥಿಗಳ ಸ್ಥಿತಿ ಅರಿಯದೆ  ಪೋಷಕರು, ಶಾಲೆಯ ಬಳಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದ ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಬಿ.ಎನ್.ರವಿ,  ಅಕ್ಷರ ದಾಸೋಹ ಯೋಜನಾಧಿಕಾರಿ ಡಿ. ಕೃಷ್ಣ ಮಧ್ಯಪ್ರವೇಶಿಸಿ, ಗ್ರಾಮಸ್ಥರನ್ನು ಸಮಾಧಾನಗೊಳಿಸಿದ ಮೇರೆಗೆ, ಪರಿಸ್ಥಿತಿ ತಿಳಿಗೊಂಡಿತು.
ಉಚಿತ ತರಬೇತಿ
ಹುಳಿಯಾರು: ಇಲ್ಲಿನ ಕಿಯೋನಿಕ್ ಯುವ ಡಾಟ್ ಕಾಮ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ  ಚಿ.ನಾ.ಹಳ್ಳಿ ತಾಲೂಕಿನ 18 ರಿಂದ 35 ವರ್ಷ ವಯೋವುತಿಯ  ಯುವತಿಯರಿಗಾಗಿ ಬ್ಯೂಟಿಪಾರ್ಲರ್ ತರಬೇತಿ, ಹ್ಯಾಂಡ್ ಎಮ್ರಾಯಿಡರಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಮಾಹಿತಿಗಾಗಿ  ಮೊ. 9141689595 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.