ಭಾಸ್ಕರ್ಗೆ ಕರ್ನಾಟಕ ಭೂಷಣ ಪ್ರಶಸ್ತಿ
ತಿಪಟೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಅಕಾಡೆಮಿ ಹಾಗೂ ವಿಶ್ವ ವೀರಶೈವ ಸಾಂಸ್ಕೃತಿಕ ಪ್ರತಿಷ್ಠಾನ ರಾಜಕೀಯ ಶಿಕ್ಷಣ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ತಿಪಟೂರು ಭಾಸ್ಕರ ಪತ್ರಿಕೆ ಸಂಪಾದಕರಾದ ಭಾಸ್ಕರ್ ಅವರಿಗೆ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಸಮಾರಂಭದಲ್ಲಿ ಲಯನ್ ಜಿ.ಬಿ.ರಾಜು, ಸಂಘಟನಾಕಾರರು, ರಾಜಕೀಯ ವ್ಯಕ್ತಿಗಳು, ಚಿತ್ರನಟರು ಇದ್ದರು.
ಕ್ಲಸ್ಟರ್ ಮಟ್ಟದ ಶಾಲಾ ಕಲಿಕೋತ್ಸವ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಗುಂಗುರಮೆಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಶಾಲಾ ಕಲಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಜಿ.ಪಂ.ಸದಸ್ಯೆ ರಾಧಾನಾರಾಯಣ ಗೌಡ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿ.ಆರ್.ಪಿ. ಸೋಮಶೇಖರ್, ಗ್ರಾ.ಪಂ.ಸದಸ್ಯ ಪದ್ಮರಾಜು, ಗ್ರಾಮಸ್ಥರಾದ ಜಿ.ಎನ್.ಕೃಷ್ಣೇಗೌಡ, ಪರಿಸರ ಪ್ರೇಮಿ ಗುಂಗುರಮೆಳೆ ಮುರುಳೀಧರ್ ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು ಭಾಗವಹಿಸಿದ್ದರು.
ತೋಟದ ಮನೆಗೆ ಬೆಂಕಿ, ಕೊಬ್ಬರಿ ಭಸ್ಮ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಗುಂಗರಮಳೆ ಗ್ರಾಮದ ಹೊಂಗಪ್ಪನವರ ತೋಟದ ಮನೆಗೆ ನಿನ್ನೆ ರಾತ್ರಿ ಬೆಂಕಿ ಬಿದ್ದ ಪರಿಣಾಮ 10 ಸಾವಿರ ಕೊಬ್ಬರಿ, 60 ಗ್ರಾಂಗೂ ಹೆಚ್ಚು ಒಡವೆಗಳು, ರಾಗಿ ಸೇರಿದಂತೆ ಆಹಾರ ಪದಾರ್ಥಗಳು, ಟಿ.ವಿ ಮತ್ತಿತರೆ ಲಕ್ಷಾಂತರ ರು.ಗಳ ಪದಾರ್ಥಗಳು ಸುಟ್ಟು ಕರಕಲಾಗಿ ನಷ್ಟವುಂಟಾಗಿದ್ದು ಪ್ರಕರಣ ನೊಣವಿನಕೆರೆ ಠಾಣೆಯಲ್ಲಿ ದಾಖಲಾಗಿದೆ.
ಸಾರ್ವಜನಿಕ ಸಮಾಲೋಚನಾ ಸಭೆ
ತಿಪಟೂರು: ನಗರಸಭೆಯ 2014-15ನೇ ಸಾಲಿನ ಆಯ-ವ್ಯಯ ಪಟ್ಟಿ ತಯಾರಿಸುವ ಸಂಬಂಧ ಡಿ.26ರಂದು ಬೆಳಿಗ್ಗೆ 11ಗಂಟೆಗೆ ಮೊದಲನೇ ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಗರಸಭೆಯ ಆಡಳಿತಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದೆ. ಆದ್ದರಿಂದ ಪಟ್ಟಣದ ಹಿರಿಯ ನಾಗರಿಕರು, ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಇತರೆ ಸಂಘ ಸಂಸ್ಥೆಯವರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪೌರಾಯುಕ್ತರು ಮನವಿ ಮಾಡಿದ್ದಾರೆ.
ರಾಮಾಂಜಿನೇಯ ಆಯ್ಕೆ
ಪಾವಗಡ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ರಾಮ್ ಸಂಘ, ಸೋಮವಾರ ತಾಲೂಕಿನಲ್ಲಿ ಆಸ್ತಿತ್ವಕ್ಕೆ ಬಂದಿದ್ದು ಸಂಘದ ಅಧ್ಯಕ್ಷರಾಗಿ ವಕೀಲ ಬೊಮ್ಮತನಹಳ್ಳಿ ರಾಮಾಂಜಿನೇಯ ನೇಮಕಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

