ಅಂಗವಿಕಲರ ಬೇಡಿಕೆಗಳ ಈಡೇರಿಕೆಗೆ ಬದ್ಧ: ಶಾಸಕ
ಪಾವಗಡ: ಅಂಗವಿಕಲರ ಬೇಡಿಕೆಗಳ ಈಡೇರಿಕೆಗೆ ಬದ್ಧರಾಗುವುದಾಗಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಿಳಿಸಿದರು.
ವಿವೇಕಾನಂದ ಅಂಗವಿಕಲರ ಒಕ್ಕೂಟ, ತಾ.ಅಂಗವಿಕಲರ ಅನುಷ್ಠಾನ ಸಮಿತಿ, ತಾಪಂನ ಅಂಗವಿಕಲ ಪುನರ್ ವಸತಿ ಕಾರ್ಯಕ್ರಮ ತಾ.ಆಡಳಿತ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲಕರ ಕಲ್ಯಾಣಕ್ಕೆ ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಮರ್ಪಕ ಮೀಸಲು ಸೌಲಭ್ಯ ಅನುಷ್ಠಾನಕ್ಕೆ ತಾವು ಬದ್ಧರಾಗಿದ್ದು ಅಂಗವಿಕಲರ ಅಭಿವೃದ್ಧಿಯ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಿದರೆ ಈ ಕೂಡಲೇ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿಕಲಾಂಗರಿಗೆ ಮೀಸಲಿದ್ದ 6 ಲಕ್ಷ ಅನುದಾನ ಈ ಕೂಡಲೇ ನೀಡುವ ಭರವಸೆ ನೀಡಿದರು. ವಿವೇಕಾನಂದ ಅಂಗವಿಕಲ ಒಕ್ಕೂಟ ರಾಜಣ್ಣ ಮಾರ್ಗದರ್ಶನದಲ್ಲಿ ಸಂಘಟಿತವಾಗಿ ಮಾದರಿಯಾಗಿದೆ ಎಂದರು. ತಾಲೂಕಿನಲ್ಲಿ ಒಟ್ಟು 7,500 ಮಂದಿ ಅಂಗವಿಕಲರಿದ್ದು ಇಷ್ಟೊಂದು ಪ್ರಮಾಣದ ಅಂಗವಿಕಲತೆಗೆ ಫ್ಲೋರೈಡ್ಯುಕ್ತ ನೀರಿನ ಸೇವನೆ ಕಾರಣವೆಂದರು. ನದಿ ಮೂಲದ ಶುದ್ಧ ನೀರಿನ ಪೂರೈಕೆಗೆ ಈಗಾಗಲೇ ಸರ್ಕಾರದ ಜೊತೆ ಚರ್ಚಿಸಿದ್ದು ಸಮಸ್ಯೆ ನಿವಾರಣೆಗೆ ಬದ್ಧರಾಗಿರುವುದಾಗಿ ಅವರು ತಿಳಿಸಿದರು. ವಿವೇಕಾನಂದ ಅಂಗವಿಕಲ ಒಕ್ಕೂಟದ ತಾ.ಅಧ್ಯಕ್ಷ ಸುಧೀಂದ್ರ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಅಂಗವಿಕಲರ ಸಂಪನ್ಮೂಲ ಕೇಂದ್ರ, ಧ್ವನಿವರ್ಧಕಗಳು, ನಿವೇಶನ,ಮಾದರಿ ಅಂಗವಿಕಲರ ಕಟ್ಟಡ ನಿರ್ಮಾಣ ಮತ್ತು ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಶೇ.3ರ ಮೀಸಲು ಅನುದಾನ, ಸಮರ್ಪಕ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.
ಸನ್ಮಾನ: ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಪಾವಗಡ ಸೂಲಗಿತ್ತಿ ನರಸಮ್ಮ ಅವರನ್ನು ಒಕ್ಕೂಟದ ಪದಾಧಿಕಾರಿಗಳು ಸನ್ಮಾನಿಸಿದರು. ತಾ.ಜೆಡಿಎಸ್ ಅಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜಿಪಂ ಸದಸ್ಯ ಆರ್.ಸಿ. ಅಂಜಿನಪ್ಪ, ತಾಪಂ ಇಒ ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ತಾಪಂ ಅಧ್ಯಕ್ಷೆ ರಾಧರಾಜ್ ಗೋಪಾಲ್, ಉಪಾಧ್ಯಕ್ಷೆ ಶೈಲಾಪುರ ಪಾರ್ವತಮ್ಮ, ತಾಪಂ ಸದಸ್ಯೆ ವಿನೋದ ರಾಮಾಂಜಿನಪ್ಪ, ಪುರಸಭೆ ಸದಸ್ಯ ಮನುಮಹೇಶ್, ಯುವ ಮುಖಂಡ ಕೃಷ್ಣಾಪುರ ರಾಮಕೃಷ್ಣ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

