ತುಮಕೂರು

ಸಮರ್ಪಕ ದಾಖಲೆ ನಿರ್ವಹಿಸದೆ ಗೊಂದಲ

Published On :

ಕ.ಪ್ರ. ವಾರ್ತೆ   ಕುಣಿಗಲ್   ಡಿ. 26
ಪುರಸಭೆ ಅಧಿಕಾರಿಗಳು ಸಮರ್ಪಕ ದಾಖಲೆ ನಿರ್ವಹಿಸದ ಕಾರಣ, ಪಟ್ಟಣದಲ್ಲಿ ಅಶಾಂತ ವಾತಾವರಣ ನಿರ್ಮಾಣವಾಗಿದೆ. ಮನಬಂದಂತೆ ದಾಖಲೆಗಳನ್ನು ನೀಡಿದ ಕಾರಣ ಇಂದು ಹಲವು ಗೊಂದಲ ಸ್ಥಿತಿಗೆ ಕಾರಣವಾಗಿದೆ ಎಂದು ತಹಸೀಲ್ದಾರ್ ಮುಂದೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ 13ನೇ ವಾರ್ಡ್ನ ಮಹಾವೀರ ನಗರ ಬಡಾವಣೆಯಲ್ಲಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ, ಕಟ್ಟಡ ಮಾಲೀಕರೊಬ್ಬರು ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ, ಬುಧವಾರ ಸರ್ಕಾರಿ ರಜೆಯ ಕಾರಣ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಇದನ್ನು ಖಂಡಿಸಿದ ನಾಗರಿಕರು, ಪುರಸಭೆ ಅಧಿಕಾರಿಗಳು ಅಕ್ರಮ ಕಟ್ಟಡ ನಿರ್ಮಾಣ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ, ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಭೇಟಿ: ಈ ಹಿನ್ನೆಲೆಯಲ್ಲಿ, ಗುರುವಾರ ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿದ್ದ ಪ್ರದೇಶಕ್ಕೆ ತಹಸೀಲ್ದಾರ್ ಪುಟ್ಟನರಸಯ್ಯ ಮತ್ತು ಪುರಸಭೆ ಮುಖ್ಯಾಧಿಕಾರಿ ಅನ್ನದಾನಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಲು ಆಗಮಿಸಿದರು. ನಾಗರಿಕರಾದ ಅಶ್ವತ್ಥ, ಕೃಷ್ಣಪ್ಪ, ಇತರರು ಪುರಸಭೆ ಪ್ರದೇಶದ ಬಗ್ಗೆಯೆ ಸಮರ್ಪಕ ದಾಖಲೆ ಇಟ್ಟಿಲ್ಲ, ಪುರಸಭೆಗೆ ಸೇರಿದೆ ಬಾವಿಯನ್ನೇ ಖಾಸಗಿಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಇನ್ನು ರಸ್ತೆಗಳನ್ನು ಸಹ ಸಮರ್ಪಕವಾಗಿ ದಾಖಲೆ ನಿರ್ವಹಿಸದೆ, ಮನಬಂದಂತೆ ಪುರಸಭೆಯ ಕಂದಾಯದಾಖಲೆ ನಿರ್ವಹಿಸಿರುವ ಕಾರಣ, ಪಟ್ಟಣದಲ್ಲಿ ನಾಗರಿಕರು ದಿನಬೆಳಗಾದರೆ ತಾವು ಓಡಾಡುವ ರಸ್ತೆ ಬಿಡಿಸಿಕೊಳ್ಳಲು ನ್ಯಾಯಾಲಯ ಮೆಟ್ಟಿಲೇರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.  
ವಾಗ್ವಾದ: ಪುರಸಭೆಯ ಅಸಮರ್ಪಕ ಖಾತೆ, ಕಂದಾಯ ದಾಖಲೆ ನಿರ್ವಹಣೆ ವ್ಯವಸ್ಥೆಯಿಂದಾಗಿ ಅಕ್ಕಪಕ್ಕದ ಮನೆಯವರು ಬಡಿದಾಡಿಕೊಂಡು ದಿನಬೆಳಗಾದರೆ ಪೊಲೀಸ್ ಠಾಣೆ, ಕಚೇರಿಗಳಿಗೆ ಎಡತಾಕುವಂತಾಗಿದೆ, ಸಮರ್ಪಕ ದಾಖಲೆ ನಿರ್ವಹಿಸುವಂತೆ ಆಗ್ರಹಿಸಿ, ಕಟ್ಟಡ ಮಾಲೀಕರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದಾಗ, ಕಟ್ಟಡ ಮಾಲೀಕರು ಹಾಗೂ ನಾಗರಿಕರ ನಡುವೆ, ಅಧಿಕಾರಿಗಳ ಮುಂದೇಯೇ ವಾಗ್ವಾದ ನಡೆಯಿತು. ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ ಎರಡೂ ಕಡೆಯವರನ್ನು ಸಮಾಧಾನ ಗೊಳಿಸಿದರು. ತಹಸೀಲ್ದಾರ್ ಪುಟ್ಟನರಸಯ್ಯ, ದಾಖಲೆಗಳನ್ನು ಪರಿಶೀಲಿಸಿ ಪ್ರಕರಣ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ಕಾರಣ ಮುಂದಿನ ಆದೇಶ ಬರುವತನಕ  ಯಥಾಸ್ಥಿತಿ ಕಾಪಾಡಿಕೊಂಡು, ಶಾಂತಿ, ನೆಮ್ಮದಿಗೆ ಭಂಗ ತರದಂತೆ  ಸೂಚಿಸಿದರು.
ಕಂದಾಯ ಇಲಾಖೆ ಸಿಬ್ಬಂದಿಗಳಾದ ಕೃಷ್ಣಪ್ಪ, ಪ್ರಕಾಶ್, ನಟರಾಜ್, ಪುರಸಭೆಯ ರಾಜಸ್ವನಿರೀಕ್ಷಕ ರಮೇಶ್, ಸಿಬ್ಬಂದಿಗಳಾದ ರಫೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.