ಇಂದು ಶಾರದಾಂಬ ಭಜನಾ ಮಂಡಳಿ ಉದ್ಘಾಟನೆ
ಹುಳಿಯಾರು: ಇಲ್ಲಿನ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಭಾನುವಾರ ಸಂಜೆ ಶಾರದಾಂಬ ಭಜನಾ ಮಂಡಳಿ ಉದ್ಘಾಟನೆ ಹಾಗೂ ಶಂಕರಭಗವತ್ಪಾದ ವಿರಚಿತ ಆನಂದಲಹರಿಯ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ. ಕೆ.ಜಯಲಕ್ಷ್ಮಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವೇದಾಂತ ಭಾರತಿ ಸಂಚಾಲಕರಾದ ಹೆಚ್.ಕೆ.ವಿಶ್ವನಾಥ್, ಎಂ.ಎ.ಲೋಕೇಶ್, ಜಿಲ್ಲಾ ಸಂಚಾಲಕರಾದ ರಾಜೀವಲೋಚನ, ಶ್ರೀಧರ್ ಲಕ್ಕವಳ್ಳಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗಾಯಕ ಚೇತನ್ ಚಕ್ರವರ್ತಿ ಅವರು ಶಂಕರಭಗವತ್ಪಾದ ವಿರಚಿತ ಆನಂದಲಹರಿಯನ್ನು ವಾಚಿಸಲಿದ್ದು, ಸಂಸ್ಕೃತ ವಿದ್ವಾಂಸೆ ತುರುವೇಕೆರೆಯ ಟಿ.ಎನ್.ಸರಸ್ವತಿ ಆನಂದಲಹರಿಯ ವ್ಯಾಖ್ಯಾನ ತಿಳಿಸಲಿದ್ದಾರೆ. ಸಮಾಜ ಬಾಮ್ಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
ಶಿವರುದ್ರಪ್ಪ, ಕುವೆಂಪು ಗೀತೆಗಳ ಗಾಯನ ಇಂದು
ಶಿರಾ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವರಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆ ತುಮಕೂರು ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಮತ್ತು ಕುವೆಂಪು ಗೀತೆಗಳ ಗಾಯನ ಕಾರ್ಯಕ್ರಮವನ್ನು ಶ್ರೀನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಡಿ.29 ರ ಭಾನುವಾರ ಸಂಜೆ 6-30 ಕ್ಕೆ ಏರ್ಪಡಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ. ನರೇಶ್ ಬಾಬು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೆರವೇರಿಸುವರು. ಅಧ್ಯಕ್ಷತೆಯನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ.ಸೋ.ಮು. ಭಾಸ್ಕರಚಾರ್ ವಹಿಸುವರು. ಪ್ರಾಸ್ತಾವಿಕ ನುಡಿಯನ್ನು ತಾಲೂಕು ಕಸಾಪ ಅಧ್ಯಕ್ಷ ವೈ.ನರೇಶ್ ಬಾಬು ನೆರವೇರಿಸುವರು. ಗಾಯಕರಾದ ಮಲ್ಲಿಕಾರ್ಜುನ ಕೆಂಕೆರೆ, ಪ್ರಾಧ್ಯಾಪಕ ಡಾ. ವೇಣುಗೋಪಾಲ್, ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಎಂ.ಚಿದಾನಂದ್ ಮತ್ತಿತರರು ಹಾಜರಿರುವರು.
ಇಂದಿನಿಂದ ಕಲ್ಯಾಣೋತ್ಸವ
ತಿಪಟೂರು: ತಾಲೂಕಿನ ಕಸಬಾ ಹೋಬಳಿ ಹೊಸಹಳ್ಳಿಯ ದುಂಡದ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಉತ್ಸವವು ಇಂದಿನಿಂದ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಇಂದು ಶ್ರೀ ಸ್ವಾಮಿಯವರಿಗೆ ರುದ್ರಾಭಿಷೇಕ, ಗಂಗಾಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಡಿ.30ರ ಸೋಮವಾರ ಗಂಗಾಪೂಜೆ, ಕಲಶ ಸ್ಥಾಪನೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

