ತುಮಕೂರು

ಈ ನಾಡಿನ ಋಣ ತೀರಿಸುವ ಕೆಲಸ ಮಾಡುವೆ

Published On :

ಶಿರಾ: ಡಾ.ರಾಜ್ ಅವರ ಪುತ್ರನಾಗಿ ಈ ನಾಡಿನ ಋಣ ತೀರಿಸುವ ಕೆಲಸವನ್ನು ಚಿತ್ರರಂಗದಲ್ಲಿ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ನಟ ಶಿವರಾಜ್ಕುಮಾರ್ ಭಾವುಕರಾಗಿ ನುಡಿದರು.
ಅವರು ನಗರದ ಬರಗೂರು ರಾಮಚಂದ್ರಪ್ಪ ಬಯಲುರಂಗಮಂದಿರ ಆವರಣದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಏರ್ಪಡಿಸಲಾಗಿದ್ದ ವೈಭವದ ಕನ್ನಡ ರಾಜ್ಯೋತ್ಸವ ಮತ್ತು ಶಿವರಾಜ್ ದಂಪತಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಜನರ ಪ್ರೀತಿ ವಿಶ್ವಾಸಗಳೇ ನಟನೆಗೆ ಸ್ಫೂರ್ತಿ, ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ, ಅಭಿಮಾನಿಗಳನ್ನು ಭೇಟಿಯಾಗುವುದು ನಮಗೆ ಅತ್ಯಂತ ಸಂತೋಷ ಕೊಡುವ ವಿಷಯ. ಪ್ರತಿ ಊರಿನಲ್ಲೂ ಅಭಿಮಾನಿಗಳು ತೋರಿಸುತ್ತಿರುವ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಇಂದು ನಮ್ಮೊಡನೆ ವರನಟ ಡಾ.ರಾಜಕುಮಾರ್ ಇಲ್ಲದೇ ಇರಬಹುದು. ಆದರೆ ಅವರಂತೇ ಅಭಿನಯಿಸಬಲ್ಲ ಅವರದೇ ಕುಡಿಯಾದ ಶಿವರಾಜ್ ಕುಮಾರ್ ನಮ್ಮೊಡನಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ ಎಂದು
 ಪ್ರೇಕ್ಷಕರ ಒತ್ತಾಯದ ಮೇರೆಗೆ ಶಿವರಾಜ್ಕುಮಾರ್ ನೃತ್ಯ ಮಾಡಿದರು.
ಸನ್ಮಾನ: ಸಚಿವ ಜಯಚಂದ್ರ, ಶಿವಣ್ಣನಿಗೆ ಮೈಸೂರು ಪೇಟತೊಡಿಸಿದರೆ ಆಯೋಜಕರು ಬೃಹತ್ ಹೂವಿನಹಾರ ಹಾಕಿ ಸಂಭ್ರಮಿಸಿದರು. ಚಿತ್ರ ನಿರ್ದೇಶಕ ಎ. ಹರ್ಷ, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ ವಿವಿಧ ಕಲಾವಿದರನ್ನು ರಾಜ್ ಅಭಿಮಾನಿ ಸಂಘದ ಸದಸ್ಯರು ಗೌರವಿಸಿದರು. ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಜಯಚಂದ್ರ ಮತ್ತು ಪುಟಾಣಿ ಪಂಟ ಮಧುವನ್ನು ಸ್ವತಃ ಶಿವರಾಜ್ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಒಂದು ವಿಕಲಚೇತನ ಮಗುವಿಗೆ ನಗದು ಹಣ ಸಹಾಯ ನೀಡಲಾಯಿತು. ಶಿವರಾಜ್ ಕೂಡಾ ತಮ್ಮ ಸ್ವಂತ ಹಣದ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಲಾಯಿತು. ಹಿರಿಯ ನಟ ಚಂದ್ರಶೇಖರ್, ಗೀತಾಶಿವರಾಜಕುಮಾರ್ ಸೇರಿದಂತೆ ಹಲವು ಕಲಾವಿದರು, ಜನಪ್ರತಿನಿಧಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.