ಜಕಣಾಚಾರಿ ಅಸ್ಥಿತ್ವದ ಹೇಳಿಕೆ: ವಿಶ್ವಕರ್ಮ ಸಮಾಜ ಖಂಡನೆ
ಬೇಲೂರು: ಅಮರಶಿಲ್ಪಿ ಜಕಣಾಚಾರ್ಯರ ಅಸ್ಥಿತ್ವವನ್ನು ಪ್ರಶ್ನಿಸುತ್ತಾ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಕೆಲವು ಬಿಂಬಿಸುವರ ಮೂಲಕ, ಇಲ್ಲಸಲ್ಲದ ಹಾಗೂ ಗೊಂದಲಮಯ ಹೇಳಿಕೆಯನ್ನು ನೀಡುತ್ತಿರುವ ಬಗ್ಗೆ ತಾಲೂಕು ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಪುರುಷೋತ್ತಮಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮುದಾಯದವರಿಗೆ ನೋವು: ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪುರುಷೋತ್ತಮಚಾರ್ಯ ಅವರ ಅಧ್ಯಕ್ಷತೆಯಲ್ಲಿ ಸಂಘದಲ್ಲಿ ಶನಿವಾರ ತುರ್ತು ಸಭೆ ಕರೆದಿದ್ದು, ಈ ಸಂದರ್ಭದಲ್ಲಿ ಅಮರ ಶಿಲ್ಪಿ ಜಕಣಾಚಾರ್ಯ ಅಸ್ತಿತ್ವ ಕುರಿತಂತೆ ಖಾಸಗಿ ಚಾನಲ್ ಒಂದರಲ್ಲಿ ಸ್ವಯಂ ಘೋಷಿತ ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವ ಕೆಲವು ಲೇಖಕರು, ಸಾಹಿತಿಗಳು ಬೇಕಾಬಿಟ್ಟಿ ಹೇಳಿಕೆಯನ್ನು ನೀಡಿದ್ದಾರೆ. ನಮ್ಮ ಸಮುದಾಯದ ಮೇಲೆ 1970ರಿಂದಲೂ ರಾಜ್ಯದ ಹಲವು ಜಾತಿವಾದಿ ಸಂಶೋಧಕರು, ಬುದ್ದಿಜೀವಿಗಳು ಜಕಣಾಚಾರಿ ಅಸ್ತಿತ್ವನ್ನು ಪ್ರಶ್ನಿಸುತ್ತಾ, ಆತ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಬಿಂಬಿಸುತ್ತಾ ಬಂದಿದ್ದಾರೆ. ಇಡೀ ವಿಶ್ವಕರ್ಮ ಸಮುದಾಯ ಆರಾಧ್ಯ ದೈವಶಿಲ್ಪಿ ಜಕಣಾಚಾರ್ಯ ಬಗೆಗೆ ಇಲ್ಲಸಲ್ಲದ ವಿರೋಧಾಭಾಸ ಹೇಳಿಕೆ ನೀಡುತ್ತಿರುವುದು ಸಮುದಾಯದವರಿಗೆ ನೋವಾಗುತ್ತಿದೆ. 1972ರಲ್ಲೇ ಬೇಲೂರಿನಲ್ಲಿ ಅಮರ ಶಿಲ್ಪಿ ಜಕಣಾಚಾರ್ಯ ವೇದಿಕೆಯನ್ನು ಹುಟ್ಟುಹಾಕಿದ್ದು ಪರಿವಾರದ ಪರವಾಗಿ ಸಂಘಟನೆ ಮಾಡುತ್ತಾ ಬರಲಾಗುತ್ತಿದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ಜಕಣರು ಡಂಕಣರು ಕಟ್ಟಿದ ನಾಡು ಎಂದು ಸಾದರಪಡಿಸಿದ್ದಾರೆ. ರಾಜ್ಯ ಸರ್ಕಾರ ಕೂಡ ಜಕಾಣಾಚಾರ್ಯರ ಹೆಸರಿನಲ್ಲಿ 1990ರಿಂದ ರಜತ ಪ್ರಶಸ್ತಿ ಹಾಗೂ ರು. 1 ಲಕ್ಷ ಬಹುಮಾನ ನೀಡುತ್ತಾ ಬಂದಿದೆ ಎಂದರು.
ಹೋರಾಟ: ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ವಾಸುದೇವ್ ಮಾತನಾಡಿ, ಜಕಣಾಚಾರ್ಯರ ವ್ಯಕ್ತಿತ್ವಕ್ಕೆ ಪದೇ ಪದೇ ಗಧಾ ಪ್ರಹಾರ ಇತರರಿಂದ ನಡೆಯುತ್ತಲೇ ಇದ್ದು ಇದು ನಿಲ್ಲದಿದ್ದರೆ ಕುಖ್ಯಾತ ಸಂಶೋಧಕರ ವಿರುದ್ಧ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಉಪಾಧ್ಯಕ್ಷ ನಾರಾಯಣಚಾರ್ಯ, ಜಯಣ್ಣಚಾರ್ಯ, ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಹೊನ್ನೆಲಗಾಚಾರ್ಯ, ಪ್ರಕಾಶ್, ವಿಶ್ವನಾಥಾಚಾರ್ಯ ಮಾತನಾಡಿದರು. ಕಾರ್ಯದರ್ಶಿ ಉಮೇಶಾಚಾರ್, ಖಂಜಾಂಚಿ ಹಿತೇಶ್ ಇದ್ದರು. ಅಮರಶಿಲ್ಪಿ ಜಕಣಾಚಾರ್ಯ ವೇದಿಕೆ ಅಧ್ಯಕ್ಷ ಅರುಣಾಚಲಂ ಆಚಾರ್ಯರೊಂದಿಗೆ ನಿಯೋಗ ಹೊರಟು ಮುಖ್ಯಮಂತ್ರಿಯನ್ನು ಬೇಟಿ ಮಾಡಿ ಮನವಿ ಸಲ್ಲಿಸುವುದು ಮತ್ತು ಜಕಣಾಚಾರ್ಯ ವೇದಿಕೆಯ ಮಹಾಸಮ್ಮೇಳನವನ್ನು ಮಾರ್ಚ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

