ರಂಗಭೂಮಿ ಕಲಾವಿದ ಓರ್ವ ವಿಶ್ವಸಂಸಾರಿ'
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.31
ಕಾವ್ಯಗಳಲ್ಲಿ ನಾಟಕ ಪ್ರಕಾರ ಬಹು ರಮ್ಯ, ಅದರ ಆರಾಧಕನಾದ ರಂಗಭೂಮಿ ಕಲಾವಿದ ಓರ್ವ ವಿಶ್ವಸಂಸಾರಿ ಎಂದು ಕವಿ, ನಾಟಕಕಾರ, ರಂಗತಜ್ಞ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ನಗರದ ಕ್ಯಾತಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಜರುಗಿದ ಆರು ಮಂದಿ ರಂಗಭೂಮಿ ಹಿರಿಯ ಕಲಾವಿದರ ಸನ್ಮಾನ ಹಾಗೂ ಕಲಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಹಳ್ಳಿಗಳು ಯಕ್ಷಗಾನ ಕಲೆಯ ನೆಲಮನೆಗಳಾಗಿದ್ದವು. ಅನಕ್ಷರಸ್ಥ ಕಲಾವಿದರು ಸಾಧನೆ ಪರಿಶ್ರಮಗಳಿಂದ ಶ್ರೇಷ್ಠ ಕಲಾವಿದರುಗಳಾಗಿದ್ದರು. ನಂತರ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳು ಜನಪ್ರಿಯವಾದವು. ಹಿಂದೆ ನಾಟಕಕಲೆಯು ಜನರಲ್ಲಿ ಜಾತಿಯತೆ, ಅಜ್ಞಾನ ಅಳಿಸುವಲ್ಲಿ ಹೃದಯವಂತಿಕೆ ಬೆಳೆಸುವಲ್ಲಿ ಸಹಕಾರಿಯಾಗಿತ್ತು. ಇಂದು ಕೀಳು ಅಭಿರುಚಿಯ ಚಿತ್ರಗಳಿಂದ, ಕಿರುತೆರೆಯಿಂದ ನಾಟಕ ಕಲೆಗೆ ಪೆಟ್ಟಾಗಿದೆ. ಪುನರುದ್ಧಾರಕ್ಕೆ ಜನ ಮುಂದಾಗಬೇಕಿದೆ ಎಂದರು.
ಕ್ಯಾತಸಂದ್ರದ ಸತ್ಯಗಣಪತಿ ಕಲಾಸಂಘ ಅನನ್ಯ ಸಾಧನೆ ಮಾಡಿದೆ. ನಾಟಕ ಕಲೆ ಉಳಿಸಿ, ಬೆಳೆಸಲು ಯುವಕರು ಮುಂದಾಗಬೇಕೆಂದು ಕವಿತಾ ಕೃಷ್ಣ ಕರೆ ನೀಡಿದರು.
ಹಿರಿಯ ಕಲಾವಿದ ದಿ. ಕೆ.ಜಿ. ಲಿಂಗಣ್ಣ ಅವರ ಭಾವಚಿತ್ರವನ್ನು ಕೆ.ಬಿ.ಜಯಣ್ಣ, ಜಿ.ಪಂ. ಮಾಜಿ ಸದಸ್ಯ
ಎನ್.ಆರ್. ಜಯರಾಂ ಹಾಗೂ ಡಾ. ಇಂತಿಯಾಜ್ ಅಹಮದ್ ಅವರು ಅನಾವರಣ ಮಾಡಿದರು. ಖ್ಯಾತ ವಿದುಷಿ ದೇವಕಿ ರಾಮನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಪ್ರಖ್ಯಾತ ಕಲಾವಿದರಾದ ಕೆ.ವಿ. ವೆಂಕಟಾಚಲಯ್ಯ, ಕೆ.ಎಚ್. ಜಯರಾಂ, ಕೆ.ಜಿ. ಅಡವೀಶ್, ಕೆ.ಎಚ್. ಗಂಗಹನುಮಯ್ಯ, ಕೆ.ಎನ್. ಮೂರ್ತಿ ಮತ್ತು ಎಂ.ಎ. ಷರೀಫ್ ಅವರಿಗೆ ಜಿಲ್ಲಾ ಜೆ.ಡಿ.ಯು, ಅಧ್ಯಕ್ಷ ಕೆ.ಜಿ.ಎಲ್. ರವಿ, ಕವಿ ಪೌಳಿ ಶಂಕರಾನಂದಪ್ಪ ಮೈಸೂರು ಪೇಟ ತೊಡಸಿ, ಶಾಲು ಹೊದಿಸಿ ಸನ್ಮಾನಿಸಿದರು. ಅಮರೇಶ್ವರ ವಿಜಯ ನಾಟಕ ಮಂಡಲಿ ಒಡೆಯ ಚನ್ನಬಸಯ್ಯ ಗುಬ್ಬಿ ಅವರು ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಮಹಿಳಾ ಮಕ್ಕಳ ಸಾಹಿತ್ಯ ಕೂಟದ ಅಧ್ಯಕ್ಷೆ ಕಮಲ ಬಡ್ಡಿಹಳ್ಳಿ ಆಶಯ ನುಡಿಗಳನ್ನಾಡಿದರು.
ಖ್ಯಾತ ಚಲನಚಿತ್ರ, ರಂಗಭೂಮಿನಟ ಎಂ. ಶ್ರೀನಿವಾಸ್ ಅಭಿನಂದನ ನುಡಿಗಳನ್ನಾಡಿದರೆ, ಕೆ.ಜಿ.ಎಲ್.ರವಿ ಮಾತನಾಡಿದರು.
ಸನ್ಮಾನಿತರ ಪರವಾಗಿ ಕೆ.ಎಚ್. ಜಯರಾಂ, ಕೆ.ಎನ್. ಮೂರ್ತಿ, ಕೆ.ಎಚ್. ಗಂಗಹನುಮಯ್ಯ, ಡಾ. ಷರೀಫ್ ಅಹಮದ್ ಅವರು ಕೃತಜ್ಞತೆ ಸಲ್ಲಿಸಿ, ಕವಿತಾಕೃಷ್ಣರಂತವರನ್ನು ಕಲಾಗುರುಗಳಾಗಿ ಪಡೆದು ಧನ್ಯರಾದೆವು ಎಂದರು.
ಎಂ. ಶ್ರೀನಿವಾಸ್ ಪ್ರಾರ್ಥಿಸಿದರು. ನರಸಿಂಹಯ್ಯ ಸಿದ್ದಾಪುರ ಸ್ವಾಗತಿಸಿದರು, ಮಲ್ಲೇಶ್ ವಂದಿಸಿದರು, ಎಂ.ಪಿ. ಉಷಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

