14 ಮಂದಿಗೆ ಜೀವಾವಧಿ ಶಿಕ್ಷೆ
ತುಮಕೂರು: ತುಮಕೂರು ನಗರಸಭಾ ಸದಸ್ಯರಾಗಿದ್ದ ಆಂಜಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಸೇರಿ 14 ಆರೋಪಿಗಳಿಗೆ ಇಲ್ಲಿನ ಒಂದನೇ ತ್ವರಿತ ವಿಲೇವಾರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
1 ರಿಂದ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದು, ತಲಾ 16 ಸಾವಿರ ದಂಡ ವಿಧಿಸಲಾಗಿದೆ. 15 ನೇ ಆರೋಪಿ ಭೂತಯ್ಯನನ್ನು ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕೊಲೆ ನಡೆದ ವೇಳೆ ಬಾಲಾಜಿ ಹಾಗೂ ಅಭಿಷೇಕ್ನನ್ನು ಹೊರತುಪಡಿಸಿ ಮಿಕ್ಕ ಅಪರಾಧಿಗಳೆಲ್ಲಾ 20 ರಿಂದ 26 ರ ವಯೋವಾನದವರಾಗಿದ್ದರು.
2010 ಸೆ.10 ರಂದು ಬೆ.7-45 ರಲ್ಲಿ ನಗರಸಭಾ ಸದಸ್ಯರಾಗಿದ್ದ ಆಂಜಿನಿಯವರನ್ನು ಗೋಕುಲ ಬಡಾವಣೆ ರೇಲ್ವೆ ಗೇಟ್ ಬಳಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಮೇಲಿನ ಆರೋಪಿಗಳ ವಿರುದ್ಧ 20 ಸೆ. 2010 ರಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಭೂ ಮಾಫಿಯಾದ ಹಿನ್ನೆಲೆಯಲ್ಲಿ ಆಂಜಿನಿ ಕೊಲೆ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ತುಮಕೂರಿನ ಹೊಟೇಲ್ ಒಂದರಲ್ಲಿ ಕೊಲೆಗೆ ಸ್ಕೆಚ್ ರೂಪಿಸಲಾಗಿತ್ತು.
ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲು: ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 250/10, ಕಲಂ 107,120 (ಬಿ) 143, 147,148, 427, 302, 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ವಸೂಲಿಯಾದ ದಂಡದ ಹಣವನ್ನು ಕೊಲೆಯಾದ ಆಂಜಿನಿ ಅವರ ಪತ್ನಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಕರಣದ ತನಿಖೆಯ ನೇತೃತ್ವವನ್ನು ತುಮಕೂರು ನಗರ ಡಿವೈಎಸ್ಪಿ ಎಲ್. ಜಗದೀಶ್ ವಹಿಸಿದ್ದರು. ಸರ್ಕಾರದ ಪರ ಜಿಲ್ಲಾ ಪ್ರಧಾನ ಅಭಿಯೋಜಕರಾದ ಆರ್.ಕೆ. ಭಟ್ ವಾದ ಮಂಡಿಸಿದ್ದರು. ಆರೋಪಿಗಳ ಪರ ವಕೀಲರಾದ ಎಸ್.ಕೆ. ಮಲ್ಲಿಕಾರ್ಜುನ್, ರಂಗರಾಜು ವಾದ ಮಂಡಿಸಿದ್ದರು. ಜ. 23 ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿ, 29 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ವಿದ್ಯುತ್ ಸಮಸ್ಯೆ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣದ ಪ್ರಕಟಣೆಯನ್ನು ಫೆ.1 ಕ್ಕೆ ಮುಂದೂಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

