ಅನಿಯಮಿತ ವಿದ್ಯುತ್ ಕಡಿತ: ಬೆಸ್ಕಾಂ ವಿರುದ್ಧ ಆಕ್ರೋಶ
ಪಾವಗಡ: ಕಳೆದ 15ದಿನಗಳಿಂದ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಈ ಸಂಬಂಧ ತಾಳ್ಮೆ ಕೆಡಿಸಿಕೊಂಡ ಸಾರ್ವಜನಿಕರು ಬೆಸ್ಕಾಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಿಂದ ಬೆಸ್ಕಾಂ ಅಧಿಕಾರಿಗಳು ಪದೇ ಪದೇ ವಿದ್ಯುತ್ ಕಡಿತಗೊಳಿಸಿ, ಪ್ರತಿದಿನ ಕೇವಲ 2 ಗಂಟೆ ಕರೆಂಟ್ ನೀಡುವುದರಿಂದ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ವಿದ್ಯುತ್ ನಂಬಿ ಬೆಳೆ ಇಟ್ಟ ನೀರಾವರಿ ಹೊಂದಿದ ರೈತಾಪಿ ವರ್ಗದ ಗೋಳು ಮುಗಿಲು ಮುಟ್ಟಿರುವುದಲ್ಲದೆ, ಪರೀಕ್ಷೆ ಸಮೀಪವಾಗುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳೂ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರಂತರ ವಿದ್ಯುತ್ ತೆಗೆಯುವ ಕಾರಣ, ಈ ಅವಕಾಶ ಬಳಿಸಿಕೊಂಡ ದರೋಡೆಕೋರರು ಕಳೆದ 10 ದಿನಗಳಿಂದ ಪಟ್ಟಣದಲ್ಲಿ ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕುಗಳಲ್ಲಿನ ಪೆಟ್ರೋಲ್ ಕದಿಯುವುದು ಮಾತ್ರವಲ್ಲದೆ, ಈಗಾಗಲೇ 8 ಬೈಕುಗಳು ಕಳವಾಗಿರುವ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಜೊತೆಗೆ ಮನೆಗಳಲ್ಲಿನ ಟಿವಿಗಳು ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳವು ಆಗುವುದರಿಂದ ಸಾರ್ವಜನಿಕರು ಆತಂಕಕೀಡಾಗಿದ್ದಾರೆಂದು ದೂರಿದ್ದಾರೆ.
ಸಂಬಂಧಪಟ್ಟವರು ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಸಮರ್ಪಕ ವಿದ್ಯುತ್ ಸರಬರಾಜ್ ಮಾಡಿ ಎಂದು ಒತ್ತಾಯಿಸಿ ಇದೇ ರೀತಿ ಮುಂದುವರಿದರೆ ಬೆಸ್ಕಾಂ ವಿರುದ್ದ ವಿವಿಧ ರೈತಸಂಘಗಳು ಸೇರಿದಂತೆ, ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

