ತುಮಕೂರು

ಅಸಮರ್ಪಕ ವಿದ್ಯುತ್: ಮುಂದುವರೆದ ರೈತರ ಪ್ರತಿಭಟನೆ

Published On :

ಕುಣಿಗಲ್: ತಾಲೂಕಿನ ಸಂತೇಮಾವತ್ತೂರು ಬಳಿಯ, 66 11ಕೆವಿ ವಿದ್ಯುತ್ ಉಪಸ್ಥಾವರ ಕೇಂದ್ರದ ವ್ಯಾಪ್ತಿಯಲ್ಲಿ, ತಿಂಗಳಿನಿಂದಲೂ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ನೂರಾರು ರೈತರು, ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ, ಕೇಂದ್ರದ ಮುಂಭಾಗದ ರಾಜ್ಯ ಹೆದ್ದಾರಿ 33ರಲ್ಲಿ ಶಾಸಕ, ತಹಸೀಲ್ದಾರ್ ಅವರನ್ನು ಅಡ್ಡಗಟ್ಟಿ, ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಂತೇಮಾವತ್ತೂರು ಸಮೀಪದ ವಾಜರಪಾಳ್ಯ ಗ್ರಾಮದಲ್ಲಿನ ವಿದ್ಯುತ್ ಉಪಸ್ಥಾವರ ಕೇಂದ್ರದಿಂದ ಕಸಬಾ, ಹುಲಿಯೂರುದುರ್ಗ, ಹುತ್ರಿದುರ್ಗ ಹೋಬಳಿಯ ಎಂಟು ಫೀಡರ್‌ಗಳ ಎಪ್ಪತ್ತಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಕಳೆದೊಂದು ತಿಂಗಳಿನಿಂದ ನಿಗದಿಗೊಳಿಸಿದಂತೆ  ವಿದ್ಯುತ್ ಪೂರೈಕೆ ಮಾಡಬೇಕಿತ್ತು, ಕೇಂದ್ರದಲ್ಲಿನ ದಾಖಲೆಗಳಲ್ಲಿ ನಿಗದಿತ ವಿದ್ಯುತ್ ಪೂರೈಕೆ ಮಾಡಿರುವುದಾಗಿ ರಿಜಿಸ್ಟರ್ ನಿರ್ವಹಣೆ ಮಾಡಲಾಗಿದೆ.
ವಾಸ್ತವವಾಗಿ ಎಪ್ಪತ್ತೂ ಗ್ರಾಮಗಳ ವ್ಯಾಪ್ತಿಯಲ್ಲಿ ದಿನವೂಂದಕ್ಕೆ ಕೇವಲ ಒಂದು ಗಂಟೆ ತ್ರಿಫೇಸ್, ಸಿಂಗಲ್ ಫೇಸ್ ವಿದ್ಯುತ್‌ನ್ನು ಒಂದುವರೆ ಗಂಟೆ ಕಾಲ ಪೂರೈಸಲಾಗಿತ್ತು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೇಸತ್ತ ಸಂತೇಮಾವತ್ತೂರು, ಟಿ.ಹೊಸಹಳ್ಳಿ, ಮೊದೂರು, ವಾಜರಪಾಳ್ಯ, ಗೊಲ್ಲರಹಟ್ಟಿ, ಕಿತ್ತನಾಗಮಂಗಲ, ಹೊಸೂರು, ಕದಾರಪುರ, ನಂಜೇಗೌಡನಪಾಳ್ಯ, ಕೆಂಪನಹಳ್ಳಿ,  ಹನುಮಾಪುರ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳ ನೂರಾರು ಗ್ರಾಮಸ್ಥರು. ತಮ್ಮಯ್ಯ, ಕೃಷ್ಣಯ್ಯ, ಜಯರಾಮಯ್ಯ, ಕೃಷ್ಣೇಗೌಡ, ಶಿವಣ್ಣ, ಕುಮಾರ ಇತರರ ನೇತೃತ್ವದಲ್ಲಿ, ವಿದ್ಯುತ್ ವಿತರಣಾ ಕೇಂದ್ರಕ್ಕೆ ನುಗ್ಗಿ, ಸಿಬ್ಬಂದಿಯಿಂದ ಸೂಕ್ತ ಉತ್ತರಕ್ಕೆ ಆಗ್ರಹಿಸಲಾಗಿದೆ. ಆದರೆ, ಅಲ್ಲಿ ಸಮರ್ಪಕ ಉತ್ತರ ದೊರೆಯದ ಕೇಂದ್ರದ ಮುಂಭಾಗದ ರಾಜ್ಯ ಹೆದ್ದಾರಿ 33ರಲ್ಲಿ ಮರದ ದಿಮ್ಮಿ, ಕಲ್ಲುಗಳನ್ನಿಟ್ಟು ಮೇಲಾಧಿಕಾರಿ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆಗೆ ಮುಂದಾದರು.
ತಹಸೀಲ್ದಾರ್ ಜಗದೀಶ್ ಹುಲಿಯೂರು ದುರ್ಗಕ್ಕೆ ತೆರಳಲು ಆಗಮಿಸಿದ್ದು, ಅವರನ್ನು ಅಡ್‌ಡಗಟ್ಟಿದ, ನಂತರ ಇದೆ ಮಾರ್ಗದಲ್ಲಿ ಬಂದ, ಶಾಸಕರ ಕಾರನ್ನು ಅಡ್ಡಗಟ್ಟಿದ ರೈತರು, ಶಾಸಕ ಬಿ.ಬಿ.ರಾಮಸ್ವಾಮಿಗೌಡರೊಂದಿಗೆ ವಾಗ್ವಾದ ನಡೆಸಿ, ದಿನಕ್ಕೆ ಕೇವಲ ಒಂದು ಗಂಟೆ ಕರೆಂಟ್ ಕೊಡಲ್ಲಾ, ಬರೋ ಕರೆಂಟನ್ನು ಕ್ರಶರ್,ಕೈಗಾರಿಕೆಗೆ ಕೊಡ್ತಾರೆ, ಕಡಿಮೆ ನೀರಿದೆ ಅದನ್ನು ಮೇಲತ್ತಲು ಕರೆಂಟ್ ಕೊಡಲ್ಲಾ, ಇದರಿಂದ ಜನ, ಜಾನುವಾರಿಗೆ ನೀರಿಲ್ಲವಾಗಿದೆ.  ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಾರದೆ ಪರದಾಡುತ್ತಿದ್ದೇವೆ. ಸಂಜೆ ಕರೆಂಟ್ ಇಲ್ಲದೆ ಮಕ್ಕಳು ಒದಲಾಗದೆ ತೊಂದರೆ ಪಡುವಂತಾಗಿದೆ.
ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ರೈತರ ಜೀವನದೊಂದಿಗೆ ಚೆಲ್ಲಾಟವಾಡ್ತಾರೆ.  
ಜನಪ್ರತಿನಿಧಿಗಳಾದ ನೀವು ಎನು ಮಾಡ್ತಾ ಇದ್ದೀರಾ ಎಂದು ವಾಗ್ವಾದ ನಡೆಸಿದಾಗ ಶಾಸಕರು, ಕಾರಣ ಉಡುಪಿ ಸಮೀಪದ ಸ್ಥಾವರದಿಂದ ಪೂರೈಕೆಯಾಗುತ್ತಿದ್ದ ಎರಡು ಸಾವಿರ ಮೆಗಾವ್ಯಾಟ್ ಪೂರೈಕೆಯಾಗದೆ ತೊಂದರೆಯಾಗಿದ್ದು, ವಾರದ ನಂತರ ಪರಿಸ್ಥಿತಿ ಸುಧಾರಣೆಗೊಳ್ಳಿದೆ ಅಲ್ಲಿಯವರೆಗೂ ಸಹಕರಿಸುವಂತೆ ಮನವಿ ಮಾಡಿದರು.
ಸತತ ಒಂದು ಮುಕ್ಕಾಲು ಗಂಟೆ ರಸ್ತೆತಡೆ ಪ್ರತಿಭಟನೆಯಿಂದಾಗಿ ರಾಜ್ಯ ಹೆದ್ದಾರಿ ಕೊಳ್ಳಗಾಲ-ಕೊರಟಗೆರೆ ರಸ್ತೆಯಲ್ಲಿ ವಾಹನಗಳು ಎರಡು ಕಿಮಿ ಸಾಲುಗಟ್ಟಿ ನಿಂತು, ಪ್ರಯಾಣಿಕರು  ಪ್ರಯಾಣಿಕರು, ರೈತರು ವಾಗ್ವಾದಕ್ಕೆ ಇಳಿದರು. ಪಿಎಸೈ ಗುರುಪ್ರಸಾದ್, ಶಾಸಕರು, ಮದ್ಯಪ್ರವೇಶಿಸಿ,ಇಲಾಖೆಯ ಸೂಪರಿಂಟೆಂಡ್ ಇಂಜಿನಿಯರ್‌ರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ರೈತರು ರಸ್ತೆತಡೆ ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.