ತುಮಕೂರು

'ಜಲಾನಯನ ಯೋಜನೆ ಸದುಪಯೋಗವಾಗಲಿ'

Published On :

ತುರುವೇಕೆರೆ: ತಾಲೂಕಿನಲ್ಲಿ ಜಾರಿಗೆ ತರಲಾಗಿರುವ ಜಲಾನಯನದ ಪ್ರಯೋಜನ ಸದುಪಯೋಗಿಸಿಕೊಳ್ಳಬೇಕು ಎಂದು ಮಾಯಸಂದ್ರ ಜಿಪಂ ಸದಸ್ಯ ಶ್ರೀನಿವಾಸಯ್ಯ ರೈತರಿಗೆ ಕರೆ ನೀಡಿದರು.
ತಾಲೂಕಿನ ಮಣಿಚೆಂಡೂರು ವ್ಯಾಪ್ತಿಯಲ್ಲಿ ತಾಲೂಕು ಜಲಾನಯನ ಇಲಾಖಾ ವತಿಯಿಂದ ನಡೆದ ಪಶುಪಾಲನಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಲೆಂಕನಹಳ್ಳಿ ಉಪ ಜಲಾನಯನ ವ್ಯಾಪ್ತಿಯ ರೈತಾಪಿ ವರ್ಗದ ಜಮೀನುಗಳಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ರೈತಾಪಿ ವರ್ಗ ನೀರಿನ ಉಪಯೋಗ ನಿರಂತರವಾಗಿ ಪಡೆಯಲು ಮುಂದಾಗಬೇಕು ಎಂದು ಹೇಳಿದರು. ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನಯ್ಯ ರೈತಾಪಿಗಳಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿ ನೀಡಿದರು. ಪಶುವೈದ್ಯರಾದ ಡಾ. ಮಹೇಶ್ ಪಶುಪಾಲನೆ ಬಗ್ಗೆ ರೈತರಿಗೆ ಮಾಹಿತಿ ನೀಡಿ, ಕ್ಷೀರ ಕ್ರಾಂತಿ ಮಾಡುವುದರಿಂದ ರೈತರ ಬಾಳು ಹಸನಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಮೇವಿನ ಜೋಳ ವಿತರಿಸಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವ ರೈತರ ಬಾಳು ದುಸ್ತರವಾಗಿದೆ. ಜಾನುವಾರುಗಳ ಪೋಷಣೆ ದಿನದಿಂದ ದಿನಕ್ಕೆ ಕಷ್ಟದಾಯಕವಾಗಿದೆ. ಅಧಿಕಾರಿಗಳು ನೀರಿನ ಸದ್ಬಳಕೆ ಬಗ್ಗೆ ಮಾಹಿತಿ ನೀಡುತ್ತಿರುವುದು ಸಾರ್ಥಕ ಕಾರ್ಯವಾಗಿದೆ ಎಂದರು. ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ದಿಲೀಪ್, ಗ್ರಾಪಂ ಸದಸ್ಯರಾದ ಮುರುಳಿ, ಗೋವಿಂದಯ್ಯ, ಶ್ರೀನಿವಾಸ್, ಜಲಾನಯನ ಉಪ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಹಾಯಕ ಕೃಷಿ ಅಧಿಕಾರಿ ಬಿ.ಜೆ.ರಮೇಶ್ ನಿರೂಪಿಸಿ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.