ತುಮಕೂರು

ಮಕ್ಕಳನ್ನು ಅನಧಿಕೃತವಾಗಿ ಸಾಕಿಕೊಂಡಿದ್ದ ಎಸ್ಟೇಟ್ ಮಾಲೀಕರಿಗೆ ನೋಟಿಸ್

Published On :

ತುಮಕೂರು: ತಂದೆ-ತಾಯಿ ಇಲ್ಲದೆ ಶಾಲೆಗೆ ನಿಗದಿತವಾಗಿ ಹೋಗದೆ ವಂಚಿತರಾಗಿದ್ದ ಮಕ್ಕಳನ್ನು ರಕ್ಷಿಸಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳನ್ನು ಅನಧಿಕೃತವಾಗಿ ಸಾಕಿಕೊಂಡಿದ್ದ ಎಸ್ಟೇಟ್ ಮಾಲೀಕರಿಗೆ ನೋಟಿಸ್ ಜಾರಿಮಾಡಿರುವ ಘಟನೆ ಶನಿವಾರದಂದು ನಡೆದಿದೆ.
ಕೊರಟಗೆರೆ ತಾಲೂಕು ಚೀಲೇನಹಳ್ಳಿ, ಗ್ರಾಮದ ಸಮೀಪ ವಿಜಯ ಎಸ್ಟೇಟ್ ಇದ್ದು ಇಲ್ಲಿನ ಆನಂದ್ (7) ಹಾಗೂ ಬೀರೇಶ್ (8) ಎಂಬ ಬಾಲಕರಿದ್ದು ಇವರ ತಂದೆ ತಾಯಿಗಳು ಯಾರು, ಎಲ್ಲಿದ್ದಾರೆ ಎಂಬುದು ಈವರೆವಿಗೂ ಪತ್ತೆಯಾಗಿರುವುದಿಲ್ಲ. ಈ ಮಕ್ಕಳನ್ನು ಸಾಕಿಕೊಂಡಿರುವ ಎಸ್ಟೇಟ್ ಮಾಲೀಕರು ಸಮೀಪದ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದಾರೆ. ಆದರೆ ಈ ಮಕ್ಕಳು ಶಾಲೆಗೂ ನಿಗದಿತವಾಗಿ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ದೂರು ಬಂದ ಹಿನ್ನೆಲೆಯಲ್ಲಿ: ಈ ಮಕ್ಕಳು ಎಸ್ಟೇಟ್‌ನಲ್ಲಿ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸ್ಥಳೀಯರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಘಟಕವು ಈ ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿಗೆ ವರ್ಗಾಯಿಸಿ ಮುಂದಿನ ಕ್ರಮಕ್ಕೆ ಕೋರಿತ್ತು.
ಸ್ಥಳೀಯವಾಗಿ ವಿಚಾರಿಸಿದಾಗ ಮಕ್ಕಳು ಶಾಲೆಗೆ ಸರಿಯಾಗಿ ಹೋಗದೆ ಇರುವುದು, ಅವರ ಆರೈಕೆ ಬಗ್ಗೆ ಸ್ಪಂದನ ಇಲ್ಲದೆ ಇರುವುದು ಇವೆಲ್ಲವನ್ನೂ ಮಾಹಿತಿ ಪಡೆದುಕೊಂಡ ಮಕ್ಕಳ ಕಲ್ಯಾಣ ಸಮಿತಿಯು ಈ ಸ್ಥಳಕ್ಕೆ ದಾಳಿ ನಡೆಸಿ ಇಬ್ಬರು ಬಾಲಕರನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್, ಸದಸ್ಯರಾದ ಸಾ.ಚಿ. ರಾಜಕುಮಾರ್, ಈರಣ್ಣ, ಜಿಲ್ಲಾ ವಿಶೇಷ ಮಕ್ಕಳ ಪೊಲೀಸ್ ಘಟಕದ ಅಧಿಕಾರಿ ರವಿಕುಮಾರ್ ಹಾಗೂ ಕೊರಟಗೆರೆಯ ಪೊಲೀಸರು ಭಾಗವಹಿಸಿದ್ದರು.
ನೋಟೀಸ್ ಜಾರಿ: ರಕ್ಷಿತ ಮಕ್ಕಳನ್ನು ಪಾಲನೆ ಪೋಷಣೆಗಾಗಿ ತುಮಕೂರಿನ ಬಾಲಮಂದಿರಕ್ಕೆ ಕರೆತರಲಾಗಿದ್ದು ಯಾವ ಆಧಾರದ ಮೇಲೆ ಮಕ್ಕಳನ್ನು ಇಟ್ಟುಕೊಂಡಿರುತ್ತೀರಿ ಹಾಗೂ ಮಕ್ಕಳ ಪೋಷಕತ್ವ ಎಂತದ್ದು ಎಂಬ ಬಗ್ಗೆ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಎಸ್ಟೇಟ್ ಮಾಲೀಕರಿಗೆ ಸಮಿತಿಯು ನೋಟಿಸ್ ಜಾರಿಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.