ಬಾಲಗಂಗಾಧರ ಶ್ರೀಗಳದ್ದು ಮಾತೃ ಹೃದಯ
ತುರುವೇಕೆರೆ: ಕಾಲಭೈರವನ ಸನ್ನಿಧಿಗೆ ಸೇರಿದ ಡಾ.ಬಾಲಗಂಗಾಧರನಾಥ ಸ್ವಾಮಿಗಳದ್ದು ಮಾತೃ ಹೃದಯ. ಸಮಾಜದಲ್ಲಿ ತುಳಿತಕ್ಕೊಳಗಾದವರ, ಗ್ರಾಮಾಂತರ ಪ್ರದೇಶದಲ್ಲಿನ ರೈತಾಪಿಗಳ, ವಿದ್ಯಾರ್ಥಿಗಳ, ಜಾತಿ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡಿ ಎಲ್ಲರಿಗೂ ಸಮಬಾಳು ಕಲ್ಪಿಸಿದ ಮಹಾನ್ ಚೇತನ ಎಂದು ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮಿಗಳ ಗುಣಗಾನ ಮಾಡಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಡೆದ ಭಕ್ತಿ ಪೂರ್ವಕ ನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು. ಬಾಲಗಂಗಾಧನಾಥ ಸ್ವಾಮೀಜಿಯವರಿಂದ ಪ್ರಪ್ರಥಮವಾಗಿ ದೀಕ್ಷೆ ಪಡೆದ ತಮಗೆ ಶ್ರೀಗಳೊಂದಿಗೆ ಕಳೆದ ದಿನಗಳು ಹಾಗೂ ಅವರಿಂದ ಕಲಿತ ಸಮಾಜದ ಪರಿವರ್ತನೆಯ ಹಾದಿಯನ್ನು ನೆನಪಿಸಿಕೊಂಡರು. ಬಾಲಗಂಗಾಧರನಾಥ ಸ್ವಾಮಿಗಳು ಸರ್ವ ಧರ್ಮಗಳನ್ನೂ, ಸರ್ವ ಜಾತಿಯನ್ನೂ ಸಮಾನವಾಗಿ ಕಂಡಿದ್ದರು. ಸಮಾಜದಲ್ಲಿ ಅತ್ಯಂತ ಹಿಂದುಳಿದಿದ್ದ ಜನಾಂಗಕ್ಕೂ ತಮ್ಮದೇ ಆದ ಅಸ್ಥಿತ್ವವನ್ನು ಕಲ್ಪಸಿಕೊಟ್ಟರು. ಮಠ ಮಂದಿರಗಳನ್ನು ನಿರ್ಮಾಣ ಮಾಡಿಸಿ ಸಮಾಜ ಮುಖಿಗಳನ್ನಾಗಿಸಿದ ಕೀರ್ತಿ ಅವರಿಗಿದೆ ಎಂದರು.
ದೈವಸಂಭೂತ: ಆದಿಚುಂಚನಗಿರಿ ಸಂಸ್ಥಾನದಡಿ ಸುಮಾರು 30 ಶಾಖಾ ಮಠಗಳು ಇದ್ದರೂ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿದವರು ಬಾಲಗಂಗಾಧರನಾಥ ಶ್ರೀಗಳು. ಕೇವಲ ಗುಡ್ಡ ಬೆಟ್ಟಗಳಿಂದ ಇದ್ದ ನಾಡನ್ನು ಚಿನ್ನದ ಗಿರಿಯನ್ನಾಗಿಸಿ ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ ಭಕ್ತಾದಿಗಳಿಗೆ ಹೊಸ ದಾರಿ ಕಲ್ಪಿಸಿದ ಶ್ರೀಗಳು ಕಾಲಭೈರವೇಶ್ವರನ ಅವತಾರ ದೈವಸಂಭೂತರು ಎಂದು ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮಿಗಳು ಹೇಳಿದರು.
ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಸ್.ರುದ್ರಪ್ಪ, ನಂಜೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ, ವಕೀಲರಾದ ಧನಪಾಲ್, ಕಾಂಗ್ರೆಸ್ ಮುಖಂಡರಾದ ಚೌದ್ರಿ ರಂಗಪ್ಪ, ವೆಂಕಟೇಶ್ ಮೂರ್ತಿ, ಗೀತಾ ರಾಜಣ್ಣ, ಬಿಎಸ್ಆರ್ ಪಕ್ಷದ ಮುಖಂಡ ಎಚ್.ಆರ್.ರಾಮೇಗೌಡ, ಎಪಿಎಂಸಿ ಅಧ್ಯಕ್ಷ ದಂಡಿನಶಿವರ ಶಂಕರೇಗೌಡ, ಕೊಂಡಜ್ಜಿ ವಿಶ್ವನಾಥ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಟಿ.ಎಸ್. ದಾನೀಗೌಡ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಅಪ್ಪಾಜಿ ಗೌಡ, ಪ.ಪಂ.ಸದಸ್ಯ ಮಲ್ಲಿಕಾರ್ಜುನಯ್ಯ, ಚಿತ್ರ ನಿರ್ಮಾಪಕ ಕೆ.ಮಂಜು, ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಜಿ.ಪಂ.ಸದಸ್ಯ ಎ.ಬಿ.ಜಗದೀಶ್, ಜವರೇಗೌಡ, ಎಂ.ಎನ್.ಚಂದ್ರೇಗೌಡ, ಡಿ.ಜಿ. ರಂಗಸ್ವಾಮಿ, ಬಿ.ಎಸ್.ದೇವರಾಜು, ಮೊದಲಾದವರು ಭಾಗವಹಿಸಿದ್ದರು.
ಪ್ರೊ.ಪುಟ್ಟರಂಗಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ವಕೀಲ ಮುದ್ದೇಗೌಡ ಸ್ವಾಗತಿಸಿದರು. ನಂಜುಂಡಯ್ಯ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

