ತುಮಕೂರು

ಕಳವು : ಚನ್ನಗಿರಿ ವ್ಯಕ್ತಿ ಬಂಧನ

Published On :

ಶಿರಾ:  ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಜನರನ್ನು ವಂಚಿಸಿ ಅಸಲಿ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪದ ಮೇಲೆ ನಗರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಮಾರುತಿ, ಸಂತೇ ಬೆನ್ನೂರು ಗ್ರಾಮದ ಹನುಮಕ್ಕ ಬಂಧಿತ ಆರೋಪಿಗಳು.
ಪ್ರತಿ ಮಂಗಳವಾರ ನಗರದಲ್ಲಿ ಸಂತೆ ವಹಿವಾಟು ನಡೆಯುತ್ತದೆ. ಅಪಾರ ಜನಸಂಖ್ಯೆಯಲ್ಲಿ ಜನರು ಸಂತೆ ವ್ಯಾಪಾರಕ್ಕೆ ತರಕಾರಿ ಅಂಗಡಿ ದಿನಸಿ ಕೊಳ್ಳಲು ಹಳ್ಳಿಗಳಿಂದ ಆಗಮಿಸುತ್ತಾರೆ. ಇಂಥ ದಿನಗಳನ್ನೇ ಅಕ್ರಮ ಎಸಗಲು ಹಲವರು ತಿಂಗಳುಗಳಿಂದ ಹೊಂಚು ಹಾಕುತ್ತಾರೆ.  ಜನಸಾಮಾನ್ಯರನ್ನು ಯಾಮಾರಿಸಿ ಅಸಲಿ ವಡವೆಗಳೊಂದಿಗೆ ಪರಾರಿಯಾಗುತ್ತಿದ್ದ ಇಂಥ ಪ್ರಕರಣಗಳ ಬಗ್ಗೆ ನಗರ ಠಾಣಾ ಪಿಎಸ್‌ಐ ಪ್ರಹ್ಲಾದ್ ಹಾಗೂ ಪಿಎಸ್‌ಐ ಕೃಷ್ಣಕುಮಾರ್ ತನಿಖೆ ಆರಂಭಿಸಿದ್ದರು.
ಬಂಧಿತರಿಂದ 105 ಗ್ರಾಂ ತೂಕದ 3.15 ಲಕ್ಷ ಬೆಲೆಯ ವಡವೆ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಶಾಮೀಲಾದವರನ್ನು ಬಂಧಿಸುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಕಸ್ಮಿಕ ಬೆಂಕಿ: ವ್ಯಕ್ತಿ ಸಾವು
ನ್ಯಾಮತಿ: ಸಮೀಪದ ಸುರಹೊನ್ನೆ ಬನಶಂಕರಿ ನರ್ಸರಿ ಫಾರಂನಲ್ಲಿ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ ಜಗನ್ನಾಥ್ ಪೂಜಾರಿ (30)ಎಂಬಾತ ವಾಸಿಸುತ್ತಿದ್ದ ಗುಡಿಸಲಿನಲ್ಲಿ ಅಕಸ್ಮಿಕ ಬೆಂಕಿ ಹತ್ತಿಕೊಂಡು ಸಾವಿಗೀಡಾಗಿದ್ದಾನೆ.
ಫಾರಂನಲ್ಲಿಯೇ ಪ್ಲಾಸ್ಟಿಕ್ ಮತ್ತು ತೆಂಗಿನ ಗರಿಗಳಿಂದ ನಿರ್ಮಿಸಿಕೊಂಡಿದ್ದ ಗುಡಿಸಲಲ್ಲಿ ಬೆಂಕಿ ಹಾಕಿಕೊಂಡು  ಮಲಗಿದ್ದಾನೆ. ಕುಡಿತದ ಅಭ್ಯಾಸವನ್ನಿಟ್ಟುಕೊಂಡಿದ್ದ ಅವನು ರಾತ್ರಿ ಮಲಗಿಕೊಂಡಿದ್ದಾನೆ. ನಿದ್ದೆಹೋದ ನಂತರ ಬೆಂಕಿ ವ್ಯಾಪಿಸಿದ ಕಾರಣ ಸಾವಿಗೀಡಾಗಿದ್ದಾನೆ.
ಒಳಗಡೆ ಇದ್ದ 5 ಕೆ.ಜಿ ಸಿಲಿಂಡರ್ ಸಹ ಸ್ಫೋಟಗೊಂಡಿದೆ. ಗುಡಿಸಲು ಭಸ್ಮವಾಗಿದೆ. ಮೃತ ಜಗನ್ನಾಥ್ ಪೂಜಾರಿ  ಗುಲ್ಬರ್ಗ ಜಿಲ್ಲೆಯ ಚಿಂಚೋಳಿ (ತಾ) ರಥಕಲ್ ಗ್ರಾಮದವನೆಂದು ತಿಳಿದಿದೆ. ಪತ್ನಿ ನಾಗಮ್ಮ ಹಾಗೂ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ನ್ಯಾಮತಿ ಠಾಣೆ ಎಸ್.ಐ ದೇವರಾಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.