ತುಮಕೂರು

ಎಲೆಕ್ಟ್ರಿಕ್ ರೈಲಿಗೆ ಸಂಸದರ ಮನವಿ

Published On :

ತುಮಕೂರು:  ತುಮಕೂರು-ಚಿಕ್ಕಬಾಣಾವರ ನಡುವಿನ ರೇಲ್ವೆ ಮಾರ್ಗ ವಿದ್ಯುದೀಕರಣ ಯೋಜನೆಗೆ ಈ ಬಾರಿಯ ರೇಲ್ವೆ ಮುಂಗಡ ಪತ್ರದಲ್ಲಿ ಅಸ್ತು ನೀಡಬೇಕೆಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ಕೇಂದ್ರ ರೇಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ಯಶವಂತಪುರ-ಚಿಕ್ಕಬಾಣಾವರ ಮಾರ್ಗ ನಡುವಿನ ರೇಲ್ವೆ ಮಾರ್ಗ ವಿದ್ಯುದೀಕರಣ ಯೋಜನೆ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕಾಮಗಾರಿ ಆರಂಭವಾಗಿದೆ. ಹಾಗಾಗಿ ಚಿಕ್ಕಬಾಣಾವರದಿಂದ ತುಮಕೂರಿನವರೆಗೆ ಈ ಯೋಜನೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.
ಯೋಜನೆ ಜಾರಿಯಾದರೆ ತುಮಕೂರು, ಬೆಂಗಳೂರು ನಡುವೆ ಕೈಗಾರಿಕಾ ವಸಾಹತುಗಳಾದ ಗೊಲ್ಲಹಳ್ಳಿ, ನೆಲಮಂಗಲ, ಡಾಬಸಪೇಟೆ, ನಿಡುವಂದ, ಹಿರೇಹಳ್ಳಿ ಮತ್ತು ತುಮಕೂರಿಗೆ ವೇಗದ ಸಮೂಹ ಸಾರಿಗೆ ವ್ಯವಸ್ಥೆ ಆಗಲಿದೆ.
ಇದಲ್ಲದೆ, ನಿಮ್ಜ್ ಯೋಜನೆ ತುಮಕೂರಿಗೆ ಮಂಜೂರಾಗುವ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗ ಸಂಚಾರಕ್ಕೆ ಅನುಕೂಲಕರ ಹಾಗೂ ರೇಲ್ವೆ ಇಲಾಖೆಯ ಏರಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.