ತುಮಕೂರು

ನನ್ನ ಆಯ್ಕೆ ಮೋದಿ: ಸೊಗಡು (ಸುದ್ದಿ ಸಂಕ್ಷೇಪ)

Published On :

ತುಮಕೂರು: ಪ್ರಧಾನಿ ಅಭ್ಯರ್ಥಿಯಾಗಿ ನನ್ನ ಆಯ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸ್ಪಷ್ಟಪಡಿಸಿದರು. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದಾದ್ದಲ್ಲಿ ನನ್ನ ವೈಯಕ್ತಿಕ ಆಯ್ಕೆ ನರೇಂದ್ರ ಮೋದಿ ಎಂದು ತಿಳಿಸಿದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಡಿರುವ ಆರೋಪದ ಬಗ್ಗೆ ತಮಗೇನೂ ಗೊತ್ತಿಲ್ಲ. ಬೇಕಾದರೆ ಅವರ ಕಾಲಾವಧಿಯಲ್ಲಿ ಏನೆಲ್ಲಾ ನಡೆದಿದೆ ಎಲ್ಲವನ್ನು ಸಹ ತನಿಖೆ ನಡೆಸಲಿ. ನನ್ನ ವಿಚಾರದಲ್ಲೂ ಕೂಡ ಬೇಕಾದರೆ ತನಿಖೆಯಾಗಲಿ ಎಂದರು. ಕಾಂಗ್ರೆಸ್ನವರು ರಾಜ್ಯ ಸರ್ಕಾರದ ಬಗ್ಗೆ ಟೀಕೆ ಮಾಡುವ ಮುನ್ನ ಕೇಂದ್ರ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಚಿಂತಿಸಲಿ. ವಿದೇಶಗಳಲ್ಲಿರುವ ಕಪ್ಪು ಹಣವನ್ನು  ಭಾರತಕ್ಕೆ ತರುವ ಕುರಿತು ಯೋಚಿಸಲಿ ಎಂದರು. ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ತಜ್ಞರು ನೀಡಿರುವ ವರದಿಗಳ ಬಗ್ಗೆ ತಮಗೆ ಗೌರವವಿದೆ. ವರದಿ ಜಾರಿ ಸರ್ಕಾರಕ್ಕೆ ಬಿಟ್ಟದ್ದು. ಸಂಸದ ಜಿ.ಎಸ್. ಬಸವರಾಜು ಅವರನ್ನು ಬಿಜೆಪಿಗೆ ಕರೆ ತಂದು ಅವರಿಂದ ಟೀಕಿಸಿಕೊಳ್ಳುವ ಸಂದರ್ಭ  ಬಂದಿದೆ ಎಂದರು.

ಪದಾಧಿಕಾರಿಗಳ ನೇಮಕ
ತುಮಕೂರು: ತುಮಕೂರು ನಗರ ಕರ್ನಾಟಕ ಜನತಾ ಪಕ್ಷದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ. ಅಧ್ಯಕ್ಷರಾಗಿ ಕೊಪ್ಪಳ್ ನಾಗರಾಜ್, ಉಪಾಧ್ಯಕ್ಷರಾಗಿ ಜಿ.ಹೆಚ್. ಪರಮಶಿವಯ್ಯ, ಗಂಗಹನುಮಯ್ಯ, ಸಿದ್ದಪ್ಪ, ಅನುಸೂಯಮ್ಮ, ರಾಜಣ್ಣ, ನರಸಿಂಹರಾಜು, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ್ ಟಿ.ವಿ., ಸಿರಾಜ್ ಅಹಮದ್ ಬೇಗ್, ತೀರ್ಥೇಶ್ ಬಂಡೆಪಾಳ್ಯ, ಕಾರ್ಯದರ್ಶಿಯಾಗಿ ಮುನಿಸ್ವಾಮಿ ಗೌಡ, ಕೆ.ವಿ. ಪ್ರಕಾಶ್, ಬಿ.ಬಿ. ಮಹದೇವಯ್ಯ, ವಿನಯ್ಕುಮಾರ್ ಜೈನ್, ಕರಣ್ ಆರಾಧ್ಯ, ತಿಪ್ಪೂರು ಸಿದ್ದರಾಮಯ್ಯ, ಖಜಾಂಚಿಯಾಗಿ  ಮಹೇಶ್ವರಪ್ಪ ಹಾಗೂ ನಗರ ವಕ್ತಾರರಾಗಿ ಟಿ.ಎಸ್. ಗಟ್ಟಿ ಅವರನ್ನು ನೇಮಿಸಲಾಗಿದೆ.

ಇಂದು ಮಾದಿಗ ಯುವಕರ ಸಭೆ
ತುಮಕೂರು: ಇಲ್ಲಿಗೆ ಸಮೀಪದ ಗೂಳೂರು ಹೊರವಲಯದ ಶೂಲದ ಹನುಮಂತರಾಯಸ್ವಾಮಿ ದೇವಸ್ಥಾನದಲ್ಲಿ ಜ. 10 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಮಾದಿಗ ಜನಾಂಗದ ಸ್ವಾಭಿಮಾನಿ ರಾಜಕಾರಣಿಗಳ, ಮಾದಿಗ ಪರ ದಲಿತ ಸಂಘಟನೆಗಳ ಮುಖಂಡರ ಮತ್ತು ಸ್ವಾಭಿಮಾನಿ ಮಾದಿಗ ಯುವಕರ ಸಭೆ ಕರೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.