ತುಮಕೂರು

60 ಕ್ಕೂ ಹೆಚ್ಚು ಬತ್ತದ ತಳಿ ಪ್ರದರ್ಶನ

Published On :

ತುಮಕೂರು:  ಸಮೀಪದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ತಳಿ ರಕ್ಷಣೆ ಹಾಗೂ ರೈತರ ಹಕ್ಕು ಕಾಯ್ದೆ ವಿಷಯ ಕುರಿತ ಜನಜಾಗೃತಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ 60 ಕ್ಕೂ ಹೆಚ್ಚು ಬತ್ತದ ತಳಿಯನ್ನು ಪ್ರದರ್ಶಿಸಲಾಯಿತು.
ಭೈರಸಂದ್ರದ ಚಿದಂಬರಯ್ಯ ಅವರೇ 60 ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಪ್ರದರ್ಶಿಸಿದ ರೈತ. ಅಲ್ಲದೇ ಇತರೆ ತಳಿಗಳಾದ ಮರ ಬೆಂಡೆ, ಹಲಸಂದೆ, ಉದ್ದು, ರಾಗಿ, ಬೇಸಿಗೆಯಲ್ಲಿ ಬೆಳೆಯುವ ಬಟಾಣೆಯನ್ನು ಸಹ ಇಡಲಾಗಿತ್ತು.
ತುಮಕೂರು ಜಿಲ್ಲೆ ರೈತರಲ್ಲದೇ ಅಕ್ಕ ಪಕ್ಕದ ಜಿಲ್ಲೆಯ ರೈತರು ಸಹ ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಲ್.ಬಿ. ನಾಯ್ಕ,  ಪ್ರಧಾನ ವಿಜ್ಞಾನಿ ಡಾ. ವಸಂತಕುಮಾರ, ಡಾ. ಚಿತ್ರ್ಯ ಚಲುವನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಧಾನ ವಿಜ್ಞಾನಿ ಡಾ. ಅರ್.ಎಸ್.  ಕುಲ್ಕರ್ಶಿ ಅವರು ಸಸ್ಯ ತಳಿ ರಕ್ಷಣೆ ಹಾಗೂ ರೈತರ ಹಕ್ಕು ಕಾಯ್ದೆ 2000 ಬಗ್ಗೆ ವಿವರವಾಗಿ  ತಿಳಿಸಿದರು.
ವಿಶೇಷ ಮಾಹಿತಿ: ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ಎಸ್.ವಿ. ಹಿತ್ತಲಮನಿ ಭೌಗೋಳಿಕವಾಗಿ ಗುರುತಿಸಿದ ತಳಿಗಳಾದ ದೇವನಳ್ಳಿ ಚಕೋತ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಕಮಲಪುರ ಕೆಂಪು ಬಾಳೆ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಅಲ್ಲದೇ ಇಂತಹ ತಳಿಗಳನ್ನು ಉಳಿಸಿ ಬೆಳೆಸಬೇಕೆಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ಬೆಂಗಳೂರು ಕೃ.ವಿ.ವಿ. ಡಾ. ರವಿಶಂಕರ ಅವರು ಕಿರುಧಾನ್ಯ ತಳಿಗಳ ಬಗ್ಗೆ ನಿರ್ದಿಷ್ಟ ಗುಣಗಳನ್ನು ಅಭ್ಯಾಸ ಮಾಡುವ ಬಗ್ಗೆ ತಿಳಿಸಿಕೊಟ್ಟರು ಅಲ್ಲದೇ ರೈತರ ತಳಿಗಳನ್ನು ನೊಂದಣಿ ಮಾಡಲು ಹಾಗೂ ನೋಂದಣಿಗೆ ಸಹಕರಿಸುತ್ತೆವೆಂದು ತಿಳಿಸಿದರು.
ಎರಡನೇಯ ತಾಂತ್ರಿಕ ಸಮವೇಶದಲ್ಲಿ ವಿಠಲ ಅವರು ತಮ್ಮ ವಿಷಯದಲ್ಲಿ ಅಡಿಕೆ ಮತ್ತು ತೆಂಗಿನ ಬೆಳೆ ತಳಿಗಳಲ್ಲಿ ಅವಶ್ಯಕ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.
ರೈತರ ತಳಿಗಳಾದ ಉದ್ದ ಗಂಗಾಪಾನಿ ಮತ್ತು ಗಿಡ್ಡ ಗಂಗಾಪಾನಿ ತಳಿಯನ್ನು ನೋಂದಾಯಿಸಲು ತಿಳಿಸಿದರು.
ಮಾಹಿತಿ: ಡಾ. ವಿ. ಮಾಹದೇವ, ತಳಿ ತಜ್ಞರು ವಿ.ಸಿ ಫಾರ್ಮ ಮಂಡ್ಯ ತಮ್ಮ ಭಾಷಣದಲ್ಲಿ ಬತ್ತದ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಸದಾಶಿವ ಮತ್ತು ಡಾ. ದಿನೇಶ್ ಅವರು  ತರಕಾರಿ ಬೆಳೆ, ಮಾವು ಬೆಳೆ ಮತ್ತು ತಳಿಗಳ ನೋಂದಣಿ ಬಗ್ಗೆ ಮಾಹಿತಿ ತಿಳಿಸಿದರು.
ರೈತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರದಲ್ಲಿ ಸುಮಾರು 150 ಕ್ಕು ಹೆಚ್ಚು ರೈತರು ಮತ್ತು ವಿಜ್ಞಾನಿಗಳು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.