ತುಮಕೂರು

ಡಿ.ನಾಗರಾಜಯ್ಯ ಬೆಂಬಲಿತ ಮೂಲ ಜೆಡಿಎಸ್ ಅಭ್ಯರ್ಥಿಗಳು 23 ವಾರ್ಡ್‌ಗಳಲ್ಲಿ ಕಣಕ್ಕೆ

Published On :

ಕುಣಿಗಲ್: ಪಟ್ಟಣದಲ್ಲಿ  ಹಾಲಿ ನಡೆಯುತ್ತಿರುವ ಪುರಸಭೆ ಚುನಾವಣೆಯು ಮೂಲ ಜೆಡಿಎಸ್ ಹಾಗೂ ವಲಸಿಗ ಜೆಡಿಎಸ್ ನಡುವೆ ನಡೆಯುತ್ತಿದೆ. ಡಿ.ನಾಗರಾಜಯ್ಯ ಬೆಂಬಲಿತ ಮೂಲ ಜೆಡಿಎಸ್ ಅಭ್ಯರ್ಥಿಗಳು 23 ವಾರ್ಡ್‌ಗಳಲ್ಲಿ ಕಣಕ್ಕಿಳಿಸಲಾಗಿದ್ದು, ಜಯಬೇರಿ ಬಾರಿಸುವುದರಲ್ಲಿ ಅನುಮಾನವೇ ಬೇಡ ಎಂದು ಜೆಡಿಎಸ್ ಮುಖಂಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ತಿಳಿಸಿದರು.
 ಶನಿವಾರ, ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ಡಿ.ನಾಗರಾಜಯ್ಯನವರ ಅಭಿಮಾನಿಗಳಾದ, ಮೂಲ ಜೆಡಿಎಸ್ ಕಾರ್ಯಕರ್ತರನ್ನು, ಪುರಸಭೆ ಚುನಾವಣೆಯಲ್ಲಿ ಬಂಡಾಯ ಜೆಡಿಎಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಮಾಜಿ ಸಚಿವ ಡಿ.ನಾಗರಾಜಯ್ಯ ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ, ರಾಜಕೀಯ ನಿವೃತ್ತಿ ಹೊಂದುತ್ತಾರೆ ಹೊರತು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ.
 ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ನಾಯಕರ ಭಾವಚಿತ್ರದಡಿಯಲ್ಲೆ ಚುನಾವಣೆಗಳನ್ನು ಎದುರಿಸಲಾಗುವುದು. ಕಳೆದು ನಾಲ್ಕು ದಶಕಗಳಿಂದ ತಾಲೂಕಿನಾದ್ಯಂತ ಹಲವು ರಾಜಕೀಯ ಎಡರು, ತೊಡರುಗಳ ನಡುವೆ ಜೆಡಿಎಸ್ ಪಕ್ಷವನ್ನು ಸದೃಢವಾಗಿ ಡಿ.ನಾಗರಾಜಯ್ಯ ಕಟ್ಟಿ ಬೆಳೆಸಿದ್ದಾರೆ.
 ಗ್ರಾಪಂ ನಿಂದ ಹಿಡಿದು ಹಲವು ಆಯಕಟ್ಟಿನ ಸ್ಥಾನಗಳಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲು ಶ್ರಮಪಟ್ಟಿದ್ದು, ಇಂದು ಬೇರೊಂದು ಪಕ್ಷದಿಂದ ವಲಸೆ ಬಂದಂತಹವರು, ಮೂಲ, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಈಗಾಗಲೆ ಮಾಜಿ ಸಚಿವ ಡಿ.ನಾಗರಾಜಯ್ಯನವರ ಅಭಿಮಾನಿಗಳು, ಮೂಲ ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಪಕ್ಷದಲ್ಲೆ ಉಳಿದು, ಜೆಡಿಎಸ್ ನಾಯಕರಾದ ಕುಮಾರಸ್ವಾಮಿ, ದೇವೇಗೌಡರ ನೇತೃತ್ವದಲ್ಲಿ ಮುಂದಿನ ಚುನಾವಣೆಗಳನ್ನು ಎದುರಿಸಲಿದ್ದಾರೆ ಎಂದರು.
ಪ್ರಸಕ್ತ ಪುರಸಭಾ ಚುನಾವಣೆಗಳಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿ ಮೂಲ ಜೆಡಿಎಸ್ ಕಾರ್ಯಕರ್ತರನ್ನು  ಬಂಡಾಯ ಜೆಡಿಎಸ್ ಅಭ್ಯರ್ಥಿಗಳನ್ನಾಗಿ, ಮಾಜಿ ಸಚಿ.ಡಿ. ನಾಗರಾಜಯ್ಯ ನೇತೃತ್ವದಲ್ಲಿ ಕಣಕ್ಕಿಳಿಸಲಾಗಿದ್ದು, ಜಯಬೇರಿ ಬಾರಿಸುವುದರಲ್ಲಿ ಅನುಮಾನವೇ ಇಲ್ಲವೆಂದ ಅವರು, ಪಕ್ಷಕ್ಕೆ ವಲಸೆ ಬಂದ ಮುಖಂಡರೊಬ್ಬರು ಪ್ರಸಕ್ತ ಸ್ಥಳೀಯ ಚುನಾವಣೆಯಲ್ಲಿ ಬಿ ಫಾರಂ ಹಂಚಿದ ಮಾತ್ರಕ್ಕೆ ಪಕ್ಷದ ನಾಯಕತ್ವ ಅವರೇ ವಹಿಸುತ್ತಾರೆ ಎಂಬುದರಲ್ಲಿ ಅರ್ಥವಲ್ಲ ಎಂದರು.
 ಶನಿವಾರ ಒಟ್ಟಾರೆ 95 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪುರಸಭೆ ಮಾಜಿ ಸದಸ್ಯೆ ಚಂದ್ರಶೇಖರ್, ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್ ಪುತ್ರಿ ನಮೀನ್‌ತಾಜ್ ಇತತರೆ ಪ್ರಮುಖರು ನಾಮಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.