ಸುಂಟರಮೆಳೆ ಕ್ಷೇತ್ರ ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಲು ಸಿದ್ಧತೆ
ತುಮಕೂರು: ಸುಂಟರಮೆಳೆ ಶ್ರೀಗುರು ಸಿದ್ಧರಾಮೇಶ್ವರ ಸ್ವಾಮಿ ದೇವಾಲಯದ ಈ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಾಹಿತಿ ಹಾಗೂ ಶಿಕ್ಷಣ ತಜ್ಞ ಪ್ರೊ. ಮರಿದೇವರು ತಿಳಿಸಿದರು.
ಅವರು ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿಯ ಸುಂಟರಮೆಳೆ ಶ್ರೀ ಗುರುಸಿದ್ಧರಾಮೇಶ್ವರ ಸ್ವಾಮಿ ನೂತನ ದೇವಾಲಯದ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸುಂಟರಮೆಳೆ ಶ್ರೀ ಗುರು ಸಿದ್ಧರಾಮೇಶ್ವರ ಸೇವಾ ಟ್ರಸ್ಟ್ನವರು ಮತ್ತು ಭಕ್ತಾದಿಗಳೆಲ್ಲಾ ಸೇರಿ ವಿಶ್ವ ವಿಭೂತಿ ಪುರುಷರ 101 ಶಿಲಾ ಪ್ರತಿಮೆಗಳನ್ನು ಮಾಡಿಸಿ ಇದನ್ನು ಒಂದು ಸುಂದರ ಶಿಲೋದ್ಯಾನವನ್ನಾಗಿ ಮಾಡಲು ಯೋಜನೆ ರೂಪಿಸಲಿದೆ ಎಂದರು.
ಹೀಗೆ ನಿರ್ಮಿಸುವ ಶಿಲಾ ಪ್ರತಿಮೆಗಳ ಪೀಠ ಭಾಗದಲ್ಲಿ ನಾಲ್ಕು ಕಡೆ ಆಯಾ ವಿಭೂತಿ ಪುರುಷರ, ಆಚಂದ್ರಾರ್ಕವಾಗಿ ನಿಲ್ಲಬಲ್ಲ ಹೇಳಿಕೆಗಳನ್ನು ಶಿಲಾಫಲಕಗಳಲ್ಲಿ ಕೆತ್ತಿಸಿ ಹಾಕಲಾಗುವುದು ಎಂದು ತಿಳಿಸಿದರು.
ಉದಾಹರಣೆಗೆ ಅಮೆರಿಕಾದ ಅಧ್ಯಕ್ಷರಾಗಿದ್ದ ಕೆನಡಿ ಅವರ ಶಿಲಾ ಪ್ರತಿಮೆಯ ಪೀಠ ಭಾಗದಲ್ಲಿ ಅವರ ಸುಪ್ರಸಿದ್ಧ ಹೇಳಿಕೆ ಇದೆ. ಅದೇ ಮಾದರಿಯಲ್ಲಿ ಕನ್ನಡದಲ್ಲೂ ಕೆತ್ತಿಸಲಾಗುವುದು ಎಂದರು.
ದೇಶ ನನಗೇನು ಮಾಡಿದೆ ಎಂದು ಕೇಳುವ ಮುನ್ನ ದೇಶಕ್ಕೆ ನಾನೇನು ಮಾಡಿದ್ದೇನೆ ಎಂಬ ಹೇಳಿಕೆಯನ್ನು ಹಿಂದಿಗೆ ಭಾಷಾಂತರಿಸಿ ಹಿಂದಿಯಲ್ಲೂ ಕೆತ್ತಿಸಲಾಗುವುದು ಎಂದರು.
101 ವಿಶ್ವ ವಿಭೂತಿ ಪುರುಷರ ಪ್ರತಿಮೆಗಳ ಕೆಳಗೆ ಅವರವರ ಪ್ರಸಿದ್ಧ ಧ್ಯೇಯ ವಾಕ್ಯಗಳಿರುತ್ತವೆ. ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ತಾಣ ಇದಾಗಲಿದೆ ಎಂದರು.
ಇಂತಹ ಅಪರೂಪದ ಯೋಜನೆ ಕಾರ್ಯರೂಪಕ್ಕೆ ಬರಲು ದಾನಿಗಳ, ವಿಚಾರವಾದಿಗಳ ಮತ್ತು ರಾಜಕೀಯ ಆಲೋಚನಾ ತಜ್ಞರ ನೆರವು ಅತ್ಯವಶ್ಯಕವಾಗಿ ಬಬೇಕಾಗಿದೆ. ಆ ಕಾರ್ಯ ಕೈಗೆತ್ತಿಕೊಂಡಾಗ ದಾನಿಗಳ ಸಹಾಯವನ್ನು ಅಪೇಕ್ಷಿಸುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

