ರ್ಯಾಗಿಂಗ್: ಸುಪ್ರೀಂ ಆದೇಶ ಉಲ್ಲಂಘಿಸಿದ ಕಾಲೇಜು

Updated on: 

ತುಮಕೂರು: ಸಿದ್ದಾರ್ಥ ಇನ್ಸ್‌ಟಿ ಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ತುಮಕೂರು ಜಿಲ್ಲಾ ಎಸ್‌ಎಫ್‌ಐ ಕಾರ್ಯದರ್ಶಿ ವಿ. ಶಿವಣ್ಣ ಆರೋಪಿಸಿದ್ದಾರೆ.
ಅವರು ರ್ಯಾಗಿಂಗ್‌ಗೆ ಒಳಗಾಗಿರುವ ಕೇರಳ ಮೂಲದ ವಿದ್ಯಾರ್ಥಿ ಮಹಮದ್ ರಫಿ ಅವರ ಚಿಕ್ಕಪ್ಪ ಸಿದ್ದಿಕಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಲೇಜಿನಲ್ಲಿ  ಕಡ್ಡಾಯವಾಗಿ ರ್ಯಾಗಿಂಗ್ ತಡೆಗಟ್ಟುವ ಸಮಿತಿ ರಚಿಸಬೇಕು. ಆದರೆ ಕಾಲೇಜಿನ ಆಡಳಿತ ಮಂಡಳಿಯಾಗಲಿ ಅಥವಾ ಸಂಸ್ಥೆಯ ಮಾಲೀಕರಾಗಲಿ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಹಮದ್ ರಫಿ ರ್ಯಾಗಿಂಗ್‌ಗೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ.
ಕಾಲೇಜಿಗೆ ಸೇರ್ಪಡೆಯಾದ ಎಲ್ಲಾ ವಿದ್ಯಾರ್ಥಿಗಳ ರಕ್ಷಣೆ ಕಾಲೇಜಿನ ಆಡಳಿತ ಮಂಡಳಿಯದ್ದು. ಆದರೆ ಸಂಸ್ಥೆ  ಘಟನೆ ಕಾಲೇಜಿನ ಹೊರಗಡೆ ನಡೆದಿದೆ ಎಂದು ಹೇಳಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದೆ. ಸಂಸ್ಥೆ ಕಾನೂನು ಚೌಕಟ್ಟಿನಿಂದ ತಪ್ಪಿಸಿಕೊಳ್ಳುವಂತಿಲ್ಲ. ಕೂಡಲೇ ರ್ಯಾಗಿಂಗ್ ನಡೆಸಿರುವ ವಿದ್ಯಾರ್ಥಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ರ್ಯಾಗಿಂಗ್‌ಗೆ ಒಳಗಾಗಿರುವ ವಿದ್ಯಾರ್ಥಿ ಮಹಮದ್ ರಫಿಯವರು ಗಂಭೀರ ಸ್ಥಿತಿ ತಲುಪಿದ್ದು ಘಟನೆ ಹಿನ್ನೆಲೆಯಲ್ಲಿ ಕೂಡಲೇ ನ್ಯಾಯ ಒದಗಿಸಬೇಕು. ಮುಂದೆ ಈ ರೀತಿ ಘಟನಾವಳಿಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಿವಣ್ಣ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com