ತುಮಕೂರು

ಗುರುಸ್ಪಂದನ ಕಾರ್ಯಕ್ರಮ ಇಲಾಖೆ ಜತೆ ಸಮನ್ವಯ ಸಾಧಿಸಲು ದಾರಿದೀಪ

Published On :

ಮಧುಗಿರಿ: ಗುರುಸ್ಪಂದನ ಕಾರ್ಯಕ್ರಮ ಇಲಾಖೆ ಜತೆ ಸಮನ್ವಯ ಸಾಧಿಸಲು ದಾರಿದೀಪ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ರಾಮಕೃಷ್ಣಯ್ಯ ಹೇಳಿದ್ದಾರೆ.
ತಾಲೂಕು  ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣ ಕಾರ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ  ದೊಡ್‌ಡೇರಿ ಹೋಬಳಿ ಮಟ್ಟದ ಶಿಕ್ಷಕರ ಗುರುಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಕ್ರಮ ಶಿಕ್ಷಕ ಬಂಧುಗಳಿಗೆ ಸಕಾಲ ಯೋಜನೆ ಇದ್ದಂತೆ ಎಂದರು. ತಾಲೂಕು ನೌಕರರ ಸಂಘದ ಅಧ್ಯಕ್ಷ ವಿ.ಎಚ್. ವೆಂಕಟೇಶ್ 850 ಶಿಕ್ಷಕರ ಗಳಿಕೆ ರಜೆ ನಗದೀಕರಿಸಿ ಕೊಟ್ಟ ಇಲಾಖೆಗೆ ಅಭಿನಂದನೆ ತಿಳಿಸಿ, ಶಿಕ್ಷಕರ ಸೇವಾವಹಿ, ಸ್ಮಾರ್ಟ್ ಕಾರ್ಡ್ ರೂಪದಲ್ಲಿ ರಾಜ್ಯ ಸಂಘದ ವತಿಯಿಂದ ಹೊರ ತಂದಿದ್ದು ಅತಿ ಶೀಘ್ರದಲ್ಲೇ ಶಿಕ್ಷಕರ ಕಾರ್ಯಾಗಾರ ಮಾಡಿ ವಿತರಿಸಲಾಗುವುದು ಎಂದರು. ಕಾರ್ಯದರ್ಶಿ ರಂಗಧಾಮಯ್ಯ, ಉಪಾಧ್ಯಕ್ಷ ವಿರುಪಾಕ್ಷಪ್ಪ, ಖಜಾಂಚಿ ದಾಸಪ್ಪ, ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಸವರಾಜು, ನಿರ್ದೇಶಕರು, ಸಿಆರ್ಪಿಗಳು ಇದ್ದರು. ಸಿಆರ್ಪಿ ಮಂಜುನಾಥ್ ಸ್ವಾಗತಿಸಿ ಶಿವರಾಂ ನಿರೂಪಿಸಿ, ರಾಜಶೇಖರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.