ತುಮಕೂರು

ಧ್ಯಾನದಿಂದ ಕೋಪ ನಿಗ್ರಹಿಸಲು ಸಾಧ್ಯ

Published On :

ತುಮಕೂರು: ಧ್ಯಾನದಿಂದ ಕೋಪವನ್ನು ನಿಗ್ರಹಿಸಲು ಸಾಧ್ಯ ಎಂದು ವಕೀಲ ಹಾಗೂ ತಾಲೂಕು ಕಸಾಪ ಮಾಜಿ  ಅಧ್ಯಕ್ಷ ರವೀಂದ್ರನಾಥ ಠಾಗೂರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಲ್ಲಿನ ವಿದ್ಯಾವಾಹಿನಿ ಕಾಲೇಜಿನಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕೋಪವನ್ನು ಗೆಲ್ಲುವುದು ಹೇಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧ್ಯಾನ ಹಾಗೂ ಪ್ರಾಣಾಯಾಮದಿಂದ ಕೋಪವನ್ನು ಗೆಲ್ಲಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅವಘಡ: ಕೋಪದಿಂದ ಆಗುವ ಅವಘಡಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು ಕೋಪಕ್ಕೆ ಅಸಹನೆ, ಈರ್ಷೆ ಮುಖ್ಯ ಕಾರಣ ಎಂದರು. ಸಿಟ್ಟಿನಿಂದ ಮೂಗು ಕತ್ತರಿಸಿಕೊಂಡರೆ ಮತ್ತೆ ಬೆಳೆಯುವುದಿಲ್ಲ. ಹಾಗಾಗಿ ಸಿಟ್ಟಿನಿಂದ ಆಗುವ ತೊಂದರೆಯಿಂದ ಹೊರಗೆ ಬರಬೇಕೆಂದರೆ ಸಿಟ್ಟನ್ನು ನಿಗ್ರಹಿಸಿಕೊಳ್ಳುವುದೇ ಆಗಿದೆ ಎಂದರು.
ಕೋಪಕ್ಕೆ ನಿರ್ದಿಷ್ಟ ಕಾರಣವೇ ಇರುವುದಿಲ್ಲ. ಆದರೆ ಕೋಪದಿಂದ ಆಗುವ ಅನಾಹುತಗಳು ತುಂಬಾ ಅಪಾಯಕಾರಿ ಎಂದ ಅವರು ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ರಜೆ ನೀಡದ ಕಾರಣಕ್ಕಾಗಿ ಪೇದೆಯೊಬ್ಬ ಎಸ್‌ಐ ಅನ್ನು ಕೊಂದ ಘಟನೆಯನ್ನು  ಉಲ್ಲೇಖಿಸಿದರು. ಉತ್ತಮ ಪರಿಸರ, ಹಿತಮಿತ ಮಾತು, ಒಳ್ಳೆಯ ಚಿಂತನೆಯಿಂದ ಕೋಪವನ್ನು ಸಾಧ್ಯವಾದಷ್ಟು ಮಟ್ಟಿಗೆ ದೂರ ಮಾಡಬಹುದು ಎಂದು ವ್ಯಾಖ್ಯಾನಿಸಿದರು.
ಕಷ್ಟವೇನಲ್ಲ: ಮನುಷ್ಯ ತುಂಬಾ ಸಾಧ್ಯತೆ ಇರುವ ಮನುಷ್ಯ. ಏನೆಲ್ಲಾ ಮಾಡಬಹುದಾದ ಮನುಷ್ಯನಿಗೆ ಕೋಪವನ್ನು ಗೆಲ್ಲುವುದು ಕಷ್ಟವೇನಲ್ಲ ಎಂದ ಅವರು ಬುದ್ಧನ ಕಥೆಯನ್ನು ಉಲ್ಲೇಖಿಸಿದರು. ಶಾಶ್ವತವಾಗಿ ಕೋಪವನ್ನು ಬಿಡಲು  ಸಾಧ್ಯವಾಗದೇ ಇರಬಹುದು. ಆದರೆ ಖಂಡಿತವಾಗಿಯೂ ಕೋಪವನ್ನು ನಿಗ್ರಹಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ ಸಿಟ್ಟನ್ನು ಗೆಲ್ಲಬಹುದು ಎಂದರು.
ಸ್ವಾಗತವನ್ನು ಎಸ್‌ಎಸ್‌ಐಟಿಯ ವೈ.ಎಂ. ರೆಡ್ಡಿ ಮಾಡಿದರು. ಕಾರ್ಯಕ್ರಮದಲ್ಲಿ ಕಥಾ ಕೀರ್ತನಕಾರ ಲಕ್ಷ್ಮಣದಾಸ್, ಕಾರ್ಟೂನ್ ಪ್ರಸನ್ನ, ಶಾಂತಿಲಾಲ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.