ತುಮಕೂರು

'ಮಹಿಳೆಯರು ಆರ್ಥಿಕ ಸ್ಥಿತಿ, ದುಡಿವ ಶಕ್ತಿ ಹೆಚ್ಚಿಸಿಕೊಳ್ಳಲಿ'

Published On :

ಶಿರಾ: ಮಹಿಳೆಯರು ಸ್ವಯಂ ಉದ್ಯೋಗ ಪ್ರಾರಂಭಿಸಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಗರಸಭೆಯಿಂದ ಸಹಾಯಧನವನ್ನು ಪಡೆದು ಅದರ ಪ್ರಯೋಜನ ಪಡೆದುಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಮತ್ತು ದುಡಿಯುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಟಿ.ರಘು ತಿಳಿಸಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನೆಯಡಿ ಯು.ಸಿ.ಡಿ.ಎನ್. ಕಾರ್ಯಕ್ರಮದಡಿ ಒಕ್ಕೂಟ ರಚನೆ ಹಾಗೂ ನಿರಂತರತೆ ಕುರಿತು ಯು.ಡಬ್ಲ್ಯೂ.ಇ.ಪಿ. ಟಿ.ಸಿ.ಜಿ.  ರಚನೆಯಾಗಿರುವ ಹೊಸ ಸದಸ್ಯರುಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರು, ಲೀಡ್ ಬ್ಯಾಂಕ್ಯ್ ವ್ಯವಸ್ಥಾಪಕರ ಸಹಯೋಗದೊಂದಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಶಸ್ವಿಗೊಳಿಸಿ: ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಭಾರತೀ ಆರ್.ಪ ಾಟೀಲ್ ಅವರು ಮಾತನಾಡಿ ಎಸ್.ಜೆ.ಎಸ್.ಆರ್.ವೈ. ಯೋಜನೆಯಲ್ಲಿ ಸಬ್ಸಿಡಿಯಲ್ಲಿ ಸ್ವಯಂ ಉದ್ಯೋಗಕ್ಕೆ ನೀಡುವ ಸಾಲವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಯಂ ಉದ್ಯೋಗ ಅಭಿವೃದ್ಧಿಪಡಿಸಿಕೊಂಡು ಸಾಲ ಮರುಪಾವತಿ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸ್ವಯಂ ಉದ್ಯೋಗ: ನಗರಸಭೆ ಉಪಾಧ್ಯಕ್ಷ ಅಮಾನುಲ್ಲಾ ಖಾನ್ ಮಾತನಾಡಿ ನಗರಸಭೆಯ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಅನೇಕ ರೀತಿಯ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವುಗಳ ಪ್ರಯೋಜನ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸಬೇಕು ಎಂದರು.
ಸಮುದಾಯ ಸಂಘಟನಾ ಅಧಿಕಾರಿ ಪಿ. ಶಿವಪ್ರಸಾದ್ ಮಾತನಾಡಿ ಎಸ್.ಜೆ.ಎಸ್.ಆರ್. ವೈ. ಯೋಜನೆಯಡಿಯಲ್ಲಿ ಇರುವ ಅನುಕೂಲಗಳನ್ನು ವಿವರಿಸಿದರು. ಶಿರಾ ನಗರಸಭೆಯಿಂದ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ 42 ಫಲಾನುಭವಿಗಳಿಗೆ 20 ಲಕ್ಷ ರು.ಗಳನ್ನು ಸ್ವಯಂ ಉದ್ಯೋಗಕ್ಕಾಗಿ ಸಹಾಯ ಧನ ನೀಡಲಾಗಿದೆ. ನಗರ ಮಹಿಳಾ ಸ್ವಸಹಾಯ ಸಂಘ ಕಾರ್ಯಕ್ರಮದಡಿಯಲ್ಲಿ ವೈಯಕ್ತಿಕ ಪ್ರಯತ್ನಕ್ಕೆ ಬದಲಾಗಿ ಸಾಮೂಹಿಕ ಉದ್ಯೋಗ ಸ್ಥಾಪಿಸಲು ನಗರ ಮಹಿಳೆಯರಿಗೆ ವಿಶೇಷ ಪ್ರೋತ್ಸಾಹ ಹಾಗೂ ಗುಂಪುಗಳ ಕೌಶಲ್ಯ ತರಬೇತಿ ನೀಡಲಾಗಿದೆ. ಈ ಕಾರ್ಯಕ್ರಮದಡಿ ಪ್ರತಿ ಗುಂಪಿಗೆ 3 ಲಕ್ಷ ರು.ಗಳನ್ನು ನೀಡಲಾಗಿದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜಯರಾಮಯ್ಯ, ಎಸ್.ಬಿ.ಎಂ. ಬ್ಯಾಂಕ್ ಫೀಲ್ಡ್ ಆಫಿಸರ್ ರಾಕೇಶ್, ಸಿ.ಡಿ.ಎಸ್. ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷೆ ಲಲಿತಮ್ಮ, ಸರಿತಾ, ಸಮುದಾಯ ಸಂಘಟಕರಾದ ನಾಗರಾಜಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.