ನಿವೃತ್ತ ಪೊಲೀಸರ ಕುಟುಂಬ ಪಿಂಚಣಿದಾರರಿಗೆ ಆರ್ಥಿಕ ಸಹಾಯಕ್ಕೆ ಒತ್ತಾಯ
ತುಮಕೂರು: ನಿವೃತ್ತ ಪೊಲೀಸರ ಕುಟುಂಬ ಪಿಂಚಣಿದಾರರಿಗೆ ಆರ್ಥಿಕ ಸಹಾಯ ನೀಡುವಂತೆ ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆಯಲ್ಲಿ ಒತ್ತಾಯಿಸಲಾಯಿತು.
ತುಮಕೂರು ಬಿ.ಹೆಚ್. ರಸ್ತೆಯಲ್ಲಿರುವ ಹೊಯ್ಸಳ ಹೋಟೆಲ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮಾಲೂರಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು.
ಜಿಲ್ಲೆಯ ಎಲ್ಲಾ ನಿವೃತ್ತ ಪೊಲೀಸರನ್ನು ನೋಂದಾಯಿಸುವುದರ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳ ಠಾಣೆಯವಾರು ಪಟ್ಟಿಯನ್ನು ತಯಾರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡಬೇಕು, ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯ ಕುಟುಂಬ ಪಿಂಚಣಿದಾರರಿಗೂ 5 ಸಾವಿರ ರು. ಶವಸಂಸ್ಕಾರದ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಲಾಯಿತು.
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ನಿಯಮಗಳು 2002ರ ನಿಯಮ 9 (ಇ) ಪ್ರಕಾರ ಎರಡನೇ ಹೆಂಡತಿಗೂ ಪಿಂಚಣಿ ಸೌಲಭ್ಯ ನೀಡಬೇಕು, ನಿಯಮ 6 ರಂತೆ ತಂದೆ ತಾಯಿ ಇಬ್ಬರು ಮೃತಪಟ್ಟಿರುವವರ ಅಪ್ರಾಪ್ತ ಮಕ್ಕಳಿಗೆ ನಿವೃತ್ತ ವೇತನ ಸೌಲಭ್ಯ ಜಾರಿಗೊಳಿಸಬೇಕು. ಮತ್ತು ನಿವೃತ್ತಿ ವಯಸ್ಸನ್ನು 55 ರಿಂದ 58 ವರ್ಷಕ್ಕೆ ಹೆಚ್ಚಿಸಿದಾಗ 55 ರಲ್ಲಿ ನಿವೃತ್ತರಾದವರಿಗೆ ನೀಡಿರುವ ವೇತನ ಬಡ್ತಿ 58ನೇ ವಯಸ್ಸಿನಲ್ಲಿ ನಿವೃತ್ತರಾದವರಿಗೂ ವೇತನ ಬಡ್ತಿಯ ಅದಿಕ್ಯ ಮಂಜೂರು ಮಾಡಬೇಕೆಂದು ಸರ್ಕಾರವನ್ನು ಮತ್ತು ಪೊಲೀಸ್ ಇಲಾಖೆಯನ್ನು ಸಭೆಯಲ್ಲಿ ಒತ್ತಾಯಿಸಲಾಯಿತು.
ಕೆ. ಶಿವಣ್ಣನವರಿಂದ ಸ್ವಾಗತ ಮತ್ತು ಎಸ್. ಮಹದೇವಪ್ಪನವರಿಂದ ವಂದನಾರ್ಪಣೆ ಮಾಡಲಾಯಿತು. ಈ ಸಭೆಯಲ್ಲಿ ಎಸ್.ಬಿ ಶಿವಬಸಪ್ಪ, ಎಲ್. ರಂಗಪ್ಪ, ಎಸ್.ಮಹದೇವಪ್ಪ, ಆರ್ ನಾರಾಯಣ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು ಪಾಲ್ಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

