ತುಮಕೂರು

'ಶಿಕ್ಷಕರು ಜಗತ್ತನ್ನೇ ಪರಿವರ್ತಿಸುವ ಪ್ರವರ್ತಕರು'

Published On :

ಕ.ಪ್ರ. ವಾರ್ತೆ ಶಿರಾ ಜು.4
ಶಿಕ್ಷಕರು ಜಗತ್ತನ್ನೇ ಪರಿವರ್ತಿಸುವ ಪ್ರವರ್ತಕರು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ತಿಳಿಸಿದರು.
ಅವರು ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಶಿರಾಕ್ಕೆ ಬಂದ ರಥಯಾತ್ರೆಯಲ್ಲಿ ಪಾಲ್ಗೊಂಡು ಪಟ್ಟಣದ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬೃಹತ್ ತಾಲೂಕು ಶಿಕ್ಷಕರ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಇಂದಿನ ಯುವಕರು, ಮಕ್ಕಳು, ಸಿಂಹಸದೃಶರಾಗಿ ಬಾಳಿ ಶ್ರೇಷ್ಠ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದ ಶ್ರೀಗಳು ಜಗತ್ತಿನಲ್ಲಿ ಯಾರೇ ಶ್ರೇಷ್ಠ ವ್ಯಕ್ತಿಯಾಗಲು ಗುರುವಿನ ನಿರ್ದೇಶನ ಅಗತ್ಯವಿದೆ ಎಂದರು.
ಕಲಿಯಲು ಆಸಕ್ತಿಯುಳ್ಳವರೇ ಕಲಿಸಲು ಯೋಗ್ಯರು ಎಂದು ತಿಳಿಸಿದ ಅವರು ಇಡೀ ಸಮಾಜ ಶಿಕ್ಷಕ ಗುರುವನ್ನು ಅನುಸರಿಸುತ್ತಿದೆ ಎಂದರು.
ವಿಶೇಷ ಪ್ರವಚನ ನೀಡಿದ ತ್ಯಾಗೀಶ್ವರಾನಂದಜೀ ಮಹಾರಾಜ ಅವರು ದೇಶದ ಸ್ವಾಭಿಮಾನವನ್ನು ಇಮ್ಮಡಿಸುವಂತೆ ಮಾಡಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ವಿಶ್ವಮಾನವ ವಿವೇಕಾನಂದರು ಯುವ ಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಬಿತ್ತುವ ಹರಿಕಾರರಾಗಿದ್ದರು ಎಂದರು. ಮಕ್ಕಳಿಗೆ ಸರಸ್ವತಿ ಸಂಸ್ಕಾರ, ಮಾಡಿಸುವ ಶ್ರೇಷ್ಠ ಕಾರ್ಯ ಶಿಕ್ಷಕರ ಮೇಲಿದ್ದು ಶಿಕ್ಷಕರು ತಮ್ಮ ವೈಯಕ್ತಿಕ ಚಿಂತನೆಗಳ ಜೊತೆಗೆ ದೇಶದ ಬಗ್ಗೆ ಸಮಾಜದ ಬಗ್ಗೆ ಜನರ ಬಗ್ಗೆ ಚಿಂತಿಸಬೇಕು ಎಂದರು.
ಶಿಕ್ಷಕರಿಂದಲೇ ಆರಂಭವಾಗಲಿ: ಶಿಕ್ಷಕರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ರವರು 21ನೇ ಶತಮಾನ ಭಾರತೀಯರ ಶತಮಾನವಾಗಿದ್ದು ಮಕ್ಕಳಲ್ಲಿ ಸ್ವಾಭಿಮಾನ ತುಂಬುವ ಕೆಲಸ ಶಿಕ್ಷಕರಿಂದಲೇ ಪ್ರಾರಂಭವಾಗಬೇಕು ಎಂದರು. ವಿವೇಕಾನಂದರ ನಡೆ ನುಡಿ ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕವಾಗಿದ್ದು ಅವರ ವಿಚಾರದಾರೆ ಇಂದಿಗೂ ಪ್ರಸ್ತುತ ಎಂದರು.
ಸಮ್ಮೇಳನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಾಜ್‌ಕುಮಾರ್, ಪ.ಪೂ. ಶಿಕ್ಷಣ ಇಲಾಖೆಯ ಸಹಾಯ ನಿರ್ದೆಶಕ ಅಶೋಕ್‌ಕುಮಾರ್, ತಹಸೀಲ್ದಾರ್ ಕುಲಕರ್ಣಿ, ಇ.ಓ. ಡಾ.ವೇದಮೂರ್ತಿ, ಕನಕ ಬ್ಯಾಂಕ್‌ನ ವ್ಯವಸ್ಥಾಪಕ ಲಕ್ಷ್ಮೀಶ್, ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ನಗರಸಭಾ ಆಯುಕ್ತರಾದ ಬಿ.ಟಿ.ರಂಗಸ್ವಾಮಿ, ಮೂಡಲಗಿರಿಗೌಡ ಮತ್ತಿತರರು ಹಾಜರಿದ್ದರು.
ಶಿರಾ ರಾಮಕೃಷ್ಣ-ಶಾರದಾ ಸತ್ಸಂಗ ಕೇಂದ್ರದ ವತಿಯಿಂದ ನಡೆದ ಈ ಬೃಹತ್ ಸಮ್ಮೇಳನದಲ್ಲಿ ಜಾನಕಿ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.