ತುಮಕೂರು

ಗ್ರಾಮೀಣ ಭಾಗಕ್ಕೆ 12ಗಂಟೆ ವಿದ್ಯುತ್ ನೀಡಲು ಒತ್ತಾಯ

Published On :

ತಿಪಟೂರು: ತೀವ್ರ ಬರಗಾಲಕ್ಕೆ ತುತ್ತಾಗಿರುವ ಕಲ್ಪತರು ನಾಡಿನ ಗ್ರಾಮೀಣ ಭಾಗಕ್ಕೆ ಕನಿಷ್ಠ ಹಗಲು 6 ಗಂಟೆ  ಮತ್ತು ರಾತ್ರಿ 6ಗಂಟೆ ವಿದ್ಯುತ್ ಕೊಡಬೇಕೆಂದು ಎಪಿಎಂಸಿ ಸದಸ್ಯ ಬಿ.ಬಿ. ಸಿದ್ದಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ತಾಲೂಕಿನಲ್ಲಿ ಸುಮಾರು 40ರಷ್ಟು ತೆಂಗು ವಿನಾಶದಂಚಿಗೆ ತಲುಪುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಈ ವರ್ಷವೂ ಇನ್ನೂ ಯಾವ ಕೆರೆಕಟ್ಟೆಗಳು ತುಂಬವಂತಹ ಮಳೆಯಾಗಿಲ್ಲ. ಹಳ್ಳಿಗಳಿಗೆ ಕೇವಲ 2ಗಂಟೆ ವಿದ್ಯುತ್ ನೀಡುವುದರಿಂದ ತೆಂಗಿನ ತೋಟಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ. ನಗರ ಪ್ರದೇಶಕ್ಕೆ ಹಾಗೂ ಕಾರ್ಖಾನೆಗಳಿಗೆ ಹೆಚ್ಚಿನ  ವಿದ್ಯುತ್ ನೀಡುತ್ತಾರೆ. ಆದರೆ ಅನ್ನ ಬೆಳೆಯುವ ರೈತನಿಗೆ ಸರಿಯಾದ ವಿದ್ಯುತ್ ಕೊಡದೆ ತೆಂಗು ಅಳಿವಿನಂಚಿಗೆ ಬಂದು ನಿಂತಿದೆ.
 ಒಂದು ತೆಂಗಿನ ಮರವನ್ನು ಬೆಳೆಸಲು 10ವರ್ಷಗಳಾಗುತ್ತದೆ. ಕಷ್ಟಪಟ್ಟು ಬೆಳೆಸಿದ ತೆಂಗು ಅವಸಾನದ ಅಂಚಿಗೆ ತಲುಪುತ್ತಿದ್ದರೂ ಸರ್ಕಾರ ಯಾವುದೇ ನೆರವು ನೀಡದೆ, ರೈತರನ್ನು ಮತ್ತಷ್ಟು ಸಂಕಷ್ಟಕ್ಕೊಳಪಡಿಸುತ್ತಿದೆ. ಸರ್ಕಾರ ಪದೇ ಪದೇ ತೆಂಗು ಬೆಳೆಗಾರರನ್ನು ತುಳಿಯುತ್ತಿದ್ದು, ಇದರಿಂದ ತೆಂಗು ಬೆಳೆಯುವುದನ್ನೇ ರೈತರು ಕೈಬಿಡುವಂತಹ  ಪರಿಸ್ಥಿತಿ ಎದುರಾಗಿದೆ.
 ಆದ್ದರಿಂದ ಸರ್ಕಾವು ದಿವಸಕ್ಕೆ ಕನಿಷ್ಠ 12ಗಂಟೆಯಾದರೂ ವಿದ್ಯುತ್ ನೀಡಿ ತೆಂಗು ಬೆಳೆಗಾರರಿಗೆ ನೆರವಾಗಬೇಕೆಂದು ಸಿದ್ದಲಿಂಗಮೂರ್ತಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.