ಸುದ್ದಿ ಸಂಕ್ಷೇಪ
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಮಧುಗಿರಿ: ಮಧುಗಿರಿ ಪಟ್ಟಣದ ವಿಪ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಬ್ರಾಹ್ಮಣ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ನಾಗರಾಜಶಾಸ್ತ್ರಿ ಹಾಗೂ ಕಾರ್ಯದರ್ಶಿ ಚಿ.ಸೂ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೌಢಶಾಲೆ ಮತ್ತು ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಿದೆ. ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯವಿದ್ದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವೇದ ಪಂಡಿತರಿಂದ ಉಚಿತವಾಗಿ ವೇದ ಪಾಠ ಹೇಳಿ ಕೊಡಲಾಗುವುದು. ಹಾಗಾಗಿ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದು ಚಿ.ಸೂ. ಕೃಷ್ಣಮೂರ್ತಿ ಕೋರಿದ್ದಾರೆ. ಮಾಹಿತಿಗೆ ನಾಗರಾಜಶಾಸ್ತ್ರಿ 9448174647, ಚಿ.ಸೂ.ಕೃಷ್ಣಮೂರ್ತಿ 9448659872 ಮನವಿ ಮಾಡಿದ್ದಾರೆ.
30 ಮೇಕೆಗಳ ಸಜೀವ ದಹನ
ಗುಬ್ಬಿ: ತಾಲೂಕಿನ ಹತ್ತಿಕಟ್ಟೆಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ಎರಡು ಮನೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 30 ಮೇಕೆಗಳು ಸಜೀವ ದಹನಗೊಂಡು, ಸುಮಾರು 3 ಲಕ್ಷ ರು.ನಷ್ಟ ಸಂಭವಿಸಿದ ಘಟನೆ ನಡೆದಿದೆ. ಹತ್ತಿಕಟ್ಟೆಯ ಗೊಲ್ಲರಹಟ್ಟಿ ಗ್ರಾಮದ ಶಿವಕುಮಾರಚಾರ್ ಮತ್ತು ಶ್ರೀನಿವಾಸಚಾರ್ ಎಂಬುವರ ಮನೆ ಹಾಗೂ ಮನೆ ಪಕ್ಕದಲ್ಲಿದ್ದ ಮೇಕೆ ಕೊಟ್ಟಿಗೆಗೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ನೋಡು ನೋಡುತ್ತಿದ್ದಂತೆಯೇ ದಗದಗನೆ ಉರಿದು ಎರಡು ಮನೆಗಳು ಮತ್ತು ಪಕ್ಕದಲ್ಲಿ ಮೇಕೆ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ದವಸ ಧಾನ್ಯ, ಬೈಸಿಕಲ್, ಟೈಲರಿಂಗ್ ಯಂತ್ರ, ಮನೆ ನಿರ್ಮಾಣಕ್ಕೆಂದು ಸಂಗ್ರಹಿಸಿಟ್ಟಿದ್ದ ಮರ ಮಟ್ಟುಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಸುಟ್ಟು ಕರಕಲಾಗಿದೆ.
ಇಂದು ವಿದ್ಯುತ್ ವ್ಯತ್ಯಯ
ಚಿಕ್ಕನಾಯಕನಹಳ್ಳಿ: ಪಟ್ಟಣದ ಉಪಸ್ಥಾವರದಲ್ಲಿ ದುರಸ್ಥಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸಂಬಂಧ ಪಟ್ಟ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜಶೇಖರ್ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು ಚಿ.ನಾ.ಹಳ್ಳಿ ಉಪಸ್ಥಾವರದಲ್ಲಿ ಜುಲೈ 10ರಂದು ಸ್ಥಾವರದಲ್ಲಿರುವ ಹಳೆಯ ಸ್ವಿಚ್ ಗೇರ್‌ಗಳನ್ನು ಬದಲಾಯಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.ಸದರಿ ದಿನ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00ಗಂಟೆಯವರೆಗೆ ಎಫ್ -1 ಚಿ.ನಾ.ಹಳ್ಳಿ,ಎಫ್-4 ಜೆ.ಸಿ.ಪುರ ಹಾಗು ಎಫ್-3 ಕಾರ್ತಿಕೇಹಾಳ್ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಗ್ರಾಹಕರು ಎಂದಿನಂತೆ ಬೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

