ತುಮಕೂರು

14ಕ್ಕೆ ಶಂಕರರ ತತ್ವಗಳ ಪ್ರಸ್ತುತತೆ

Published On :

ಇಲ್ಲಿನ ಬಿ.ಎಚ್. ರಸ್ತೆಯ ಬ್ರಾಹ್ಮಣ ಸೇವಾ ಸಂಘದಲ್ಲಿ ಇದೇ ತಿಂಗಳ 14 ರಂದು ಸಂಜೆ 4 ಗಂಟೆಗೆ ಶಂಕರಾದ್ವೈತ ಸೇವಾ ಟ್ರಸ್ಟ್ನ ಉದ್ಘಾಟನೆ ನೆರವೇರಲಿದೆ. ಪಾವಗಡ ಪ್ರಕಾಶ್ರಾವ್ ಅವರು ಆಧುನಿಕ ಜಗತ್ತಿಗೆ ಶಂಕರರ ತತ್ವಗಳ ಪ್ರಸ್ತುತತೆ ಕುರಿತು ಮಾತನಾಡಲಿದ್ದಾರೆ. ಶಂಕರತತ್ವ ಪ್ರಚಾರ ಅಭಿಯಾನಂದ ಸಂಚಾಲಕ ಎಂ.ಕೆ. ನಾಗರಾಜರಾವ್ ಉಪಸ್ಥಿತರಿರುವರು.
ಕಟ್ಟಡ ಉದ್ಘಾಟನೆ
ತಿಪಟೂರು: ತಾಲೂಕಿನ ಬುರುಡೇಘಟ್ಟ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸುವರ್ಣ ಮಹೋತ್ಸವದ ಕಟ್ಟಡವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಹಾಪ್ರಬಂಧಕರಾದ ಬಿ.ಎಸ್. ಕುಬೇಂದ್ರನಾಯಕ್ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್. ಮಲ್ಲಿಕಾರ್ಜುನಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಆರಾಧ್ಯ, ತಿಪಟೂರು ಡಿ.ಸಿ.ಸಿ.ಬ್ಯಾಂಕ್ನ ವ್ಯವಸ್ಥಾಪಕರಾದ ಎನ್.ಬಿ. ಮುದ್ದಪ್ಪ, ಮೇಲ್ವಿಚಾರಕರಾದ ಟಿ.ಪಿ. ಉಮಾಶಂಕರ್, ಜಯಣ್ಣ, ಹೊನ್ನಪ್ಪ ಉಪಸ್ಥಿತರಿದ್ದರು.
ನೇಮಕಕ್ಕೆ ಒತ್ತಾಯ
ತಿಪಟೂರು: ತಾಲೂಕಿನ ಸಹಕಾರಿ ಧುರೀಣರು, ಕಾಂಗ್ರೆಸ್ ಹಿರಿಯ ಮುಖಂಡರಾದ ಹಳೇಪಾಳ್ಯದ ಚೌಡೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಎಸ್.ಸೋಮಶೇಖರ್ (ಸೊಗಡು ಸೋಮಣ್ಣ) ರವರನ್ನು ನಗರಸಭೆಗೆ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ನಗರದ ನಾಗರಿಕರ ಹಿತರಕ್ಷಣಾ ಮತ್ತು ಕಲ್ಪತರು ಜನಪರ ಹೋರಾಟ ವೇದಿಕೆಯ ಪದಾಧಿಕಾರಿಗಳು ಶಾಸಕರಾದ ಕೆ.ಷಡಕ್ಷರಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.
ಪ್ರತಿಭಾ ಪುರಸ್ಕಾರ
ಶಿರಾ: ಮಾದಿಗ ಜನಾಂಗದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸರ್ಕಾರಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಿ.ಎಸ್.ಕೃಷ್ಣಮೂರ್ತಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಅರ್ಜಿಗಳನ್ನು ರಾಮಚಂದ್ರಪ್ಪ, ಉಪಪ್ರಾಂಶುಪಾಲರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇಲ್ಲಿ ಪಡೆದು ಜುಲೈ 20 ರೊಳಗಾಗಿ ದಾಖಲಾತಿ ಸಮೇತ ಸಲ್ಲಿಸಬೇಕೆಂದು ತಿಳಿಸಿದ್ದಾರೆ. ತಾಲೂಕಿನ ಎಲ್ಲಾ ಮಾದಿಗ ಸರ್ಕಾರಿ ನೌಕರರುಗಳು ಜುಲೈ 14 ಭಾನುವಾರ ಬೆಳಗ್ಗೆ 9-30 ಕ್ಕೆ ಅಂಬೇಡ್ಕರ್ ಭವನ ಇಲ್ಲಿ ಸಭೆ ಸೇರಬೇಕೆಂದು ಅಧ್ಯಕ್ಷರು ತಿಳಿಸಿದ್ದಾರೆ.
ಮಕ್ಕಳಿಗೆ ತಿಳಿವಳಿಕೆ
ತುಮಕೂರು: ನೊಣವಿನಕೆರೆ ಪೊಲೀಸ್ ಠಾಣಾ  ಸಿಬ್ಬಂದಿಯ ಸಹಕಾರದೊಂದಿಗೆ, ಜನಸ್ನೇಹಿ ಪೋಲಿಸರ ಬಗ್ಗೆ ಶಾಲಾಮಕ್ಕಳಿಗೆ ತಿಳುವಳಿಕೆ ನೀಡುವ ಅರಿವು ಕಾರ್ಯಕ್ರಮವನ್ನು ನೊಣವಿನಕೆರೆ ಪೋಲಿಸ್ ಠಾಣೆಯಲ್ಲಿ ಪರಿಸರ ಪ್ರೇಮಿ ಗುಂಗರಮೆಳೆ ಮುರಳಿಧರ ಅವರು ಚಾಲನೆಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.