ಮಾನವ ಸಂಬಂಧ ಗಟ್ಟಿಗೊಳಿಸುವ ಅನಿವಾರ್ಯತೆ ಇದೆ: ಶೈಲಾ ನಾಗರಾಜ್
ತುಮಕೂರು: ಇಂದು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಅನಿವಾರ್ಯತೆ ಇದೆ ಎಂದು ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ರಾಮಮಂದಿರದಲ್ಲಿ ಜಿಲ್ಲಾ ಮಹಿಳಾ ಸಂಘಟನೆ ಆಯೋಜಿಸಿದ್ದ ವಿಶ್ವ ಸೌಹಾರ್ದತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೌಹಾರ್ದತೆಯನ್ನು ಸಾಧಿಸುವ ಹಾದಿಯಲ್ಲಿ ಮೊದಲು ಮನಸ್ಸುಗಳನ್ನು ಕಟ್ಟಬೇಕು. ಜಾತಿ, ಮತ, ಧರ್ಮಗಳನ್ನು ಮೀರಿದ ಮಾನವೀಯತೆ ಪ್ರತಿಯೊಬ್ಬರ ನಡೆಯಾದಾಗ ಪರಸ್ಪರರಲ್ಲಿ ಸೌಹಾರ್ದ ಮನೋಭಾವ ತಾನೇ ತಾನಾಗಿ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಜನಮುಖಿಯಾಗಿ ಚಿಂತಿಸಬೇಕು ಎಂದರು ರಾಷ್ಟ್ರೀಯ ಭಾವೈಕ್ಯತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ನಮ್ಮ ದಾರ್ಶನಿಕರು, ಕವಿಗಳು ಸಾರಿರುವ ವಿಶ್ವ ಮಾನವ ಸಂದೇಶವನ್ನು ಅನುಸರಿಸಿ ಬದುಕಿದಾ ಸೌಹಾರ್ದತೆ ತಾನೇ ತಾನಾಗಿ ಮೈಗೂಡುತ್ತದೆ ಎಂದರು. ಸಮಾಜ ಸೇವಕಿ ನಾಗರತ್ನ, ಅಭಿದಾ ಸೌಹರ್ದತಾ ಗೀತೆಗಳನ್ನು ಹಾಡಿದರು. ಜತೆಗೆ ಕುವೆಂಪು ಅವರ ವಿಶ್ವ ಮಾನವ ಗೀತೆಯನ್ನು ಹಾಡಿದರು. ಸೌಭಾಗ್ಯ, ಸಾಹಿತ್ಯ ಪರಿಷತ್ನ ಸುಮಶ್ರೀ, ಹರ್ಷ ವೇದಿಕೆಯಲ್ಲಿದ್ದರು. ರಾಧಾ ಸಂಪತ್ ಸಂಗಡಿಗರು. ಲಕ್ಷಮ್ಮ ಸ್ವಾಗತಿಸಿ ಮುತ್ಯಾಲಮ್ಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

