ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ
ತುಮಕೂರು: ಹೇಮಾವತಿ ನಾಲಾ ವಲಯ, ತುಮಕೂರು ವ್ಯಾಪ್ತಿಯಲ್ಲಿನ ತುಮಕೂರು ಶಾಖಾ ನಾಲೆ ಹಾಗೂ ನಾಗಮಂಗಲ ಶಾಖಾ ನಾಲೆಗಳಿಗೆ 2013-14ನೇ ಸಾಲಿಗೆ ಅನ್ವಯಿಸುವಂತೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸುವುದರಿಂದ ನಾಲಾ ವಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರು ಮತ್ತು ರೈತಭಾಂದವರು ಎಚ್ಚರಿಕೆಯಿಂದ ಇರುವಂತೆ ತುರುವೇಕೆರೆ ಹೇಮಾವತಿ ನಾಲಾವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲೆಗಳಲ್ಲಿ ನೀರು ಹರಿಯುವಂತಹ ಸಂದರ್ಭ ಜಾಗರೂಕತೆಯಿಂದ ಇರಲು, ನಾಲೆಗಳಲ್ಲಿ ಹರಿಸುವ ನೀರನ್ನು ಕುಡಿಯುವ ನೀರಿಗೆ ಮಾತ್ರವೇ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆ ಮಾಡಬಾರದೆಂದು, ಒಂದು ವೇಳೆ ಇಲಾಖೆಯ ಅನುಮತಿ ಪಡೆಯದೆ ರೈತರು ಸ್ವಇಚ್ಛೆಯಿಂದ ಬೆಳೆ ಬೆಳೆದಲ್ಲಿ ಈ ಬೆಳೆಗಳಿಗೆ ಈ ಸಾಲಿನಲ್ಲಿ ಯಾವುದೇ ಕಾರಣಕ್ಕೂ ನೀರನ್ನು ಒದಗಿಸಲಾಗುವುದಿಲ್ಲ. ಆದ್ದರಿಂದ ಬೆಳೆ ನಾಶವಾದಲ್ಲಿ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಲೆಗಳಲ್ಲಿ ನೀರು ಹರಿಯುವಾಗ ರೈತರು ಅನಧಿಕೃತವಾಗಿ ಪಂಪ್ಸೆಟ್ಗಳನ್ನು ಮತ್ತು ಸೈಫನ್ಗಳನ್ನು ನಾಲೆಯೊಳಗೆ ಅಳವಡಿಸಿಕೊಂಡು ನೀರನ್ನು ಪಡೆಯಬಾರದೆಂದು ಸೂಚಿಸಿದೆ. ಒಂದು ವೇಳೆ ಈ ಪ್ರಕರಣ ಜರುಗಿದಲ್ಲಿ ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು. ಈ ಸಾಲಿನ ನೀರು ನಿರ್ವಹಣೆಯನ್ನು ಸರಾಗವಾಗಿ ಅನುಷ್ಠಾನಗೊಳಿಸಲು ನೀರಾವರಿ ಇಲಾಖೆಯ ನಾಲಾ ವ್ಯಾಪ್ತಿಯಲ್ಲಿನ ಎಲ್ಲಾ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ. ಮಳೆಯ ಅಭಾವದಿಂದ ಹೇಮಾವತಿ ಜಲಾಶಯಕ್ಕೆ ನೀರಿನ ಒಳ ಹರಿವು ಗಣನೀಯವಾಗಿ ಕಡಿಮೆ ಇದ್ದು, ಮಳೆಯ ಅಭಾವದಿಂದಾಗಿ ಉಂಟಾಗಿರುವ ಬರದ ಪರಿಸ್ಥಿತಿಯನ್ನು ಅವಲೋಕಿಸಿ, ಹೇಮಾವತಿ ಜಲಾಶಯದಲ್ಲಿ ಇಲ್ಲಿಯವರೆಗೂ ಸಂಗ್ರಹವಾಗಿರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರವೇ ಉಪಯೋಗಿಸಲು ನಿರ್ಧರಿಸಲಾಗಿದ್ದು, ಜುಲೈ 7 ರಿಂದಲೇ ಹೇಮಾವತಿ ಜಲಾಶಯದಿಂದ ಹೆಚ್.ಎಲ್.ಬಿ.ಸಿ. ಮೂಲಕ ಹೇಮಾವತಿ ನಾಲಾವಲಯ, ತುಮಕೂರು ವ್ಯಾಪ್ತಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ತುಮಕೂರು ವ್ಯಾಪ್ತಿಯಲ್ಲಿನ ಕುಡಿಯುವ ನೀರಿಗಾಗಿ ಮಾತ್ರ ಕುಡಿಯುವ ನೀರಿನ ಯೋಜನೆಗಳ ಜಲಸಂಗ್ರಹಾಗಾರಗಳಿಗೆ ಮತ್ತು ಅತ್ಯವಶ್ಯಕವಾಗಿ ಕುಡಿಯುವ ನೀರಿನ ಬೇಡಿಕೆ ಇರುವ ಗ್ರಾಮಗಳ ಸಣ್ಣ ನೀರಾವರಿ ಕೆರೆಗಳಿಗೆ ಮಾತ್ರ ಹೇಮಾವತಿ ಜಲಾಶಯದಲ್ಲಿ ಈಗಾಗಲೇ ಸಂಗ್ರಹವಾಗಿರುವ ನೀರನ್ನು ಹೇಮಾವತಿ ನಾಲಾ ವಲಯದ ವ್ಯಾಪ್ತಿಯಲ್ಲಿನ ನಾಲೆಗಳಿಗೆ ನೀರನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

