ಸಾಹಿತ್ಯ ಬದುಕಿನ ಹೂರಣವಾಗಬೇಕು
ಚಿಕ್ಕನಾಯಕನಹಳ್ಳಿ: ಪೂರ್ಣಚಂದ್ರ ತೇಜಸ್ವಿ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಂಶೋಧಕ, ವಿಜ್ಞಾನಿ, ಕೃಷಿಕರಾಗಿ ಬರವಣಿಗೆಯನ್ನು ಬದುಕಿನುದ್ದಕ್ಕೂ ಜೊತೆಯಲ್ಲಿ ಕೊಂಡೊಯ್ದರು ಎಂದು ನವೋದಯ ಪ್ರಥಮದರ್ಜೆ ಕಾಲೇಜಿನ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ನುಡಿದರು.
ಪಟ್ಟಣದ ನವೋದಯ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಯುಜಿಸಿ ಪ್ರಾಯೋಜಿತ ಏರ್ಪಡಿಸಿದ್ದ ಹೊಸಪೀಳಿಗೆಗಾಗಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಎಂಬ ವಿಷಯವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಾಸ್ತವವಾಗಿ ಬದುಕಿನಲ್ಲಿ ತೇಜಸ್ವಿಯವರು ಶಿಸ್ತಿನ, ನೇರನಡೆ, ನುಡಿಯ ಮನುಷ್ಯ. ತಮ್ಮ ತಂದೆಯವರ ಸಮಾಧಿಯನ್ನು ಮಾನಸಗಂಗೋತ್ರಿಯಲ್ಲಿ ಮಾಡಲು ಒಪ್ಪದಿದ್ದಾಗ ಸ್ನೇಹಿತರು ಕೇಳಿದ ಪ್ರಶ್ನೆಗೆ ಮಾನಸಗಂಗೋತ್ರಿಯ ಸುಂದರಪರಿಸರವನ್ನು ಸ್ಮಶಾನವನ್ನಾಗಿ ಮಾಡುವುದು ನನಗೆ ಇಷ್ಟವಿಲ್ಲ ಎಂದು ನೇರವಾಗಿ ಉತ್ತರಿಸಿದವರು. ನೀವೇಕೆ ನಿಮ್ಮ ತಂದೆಯವರಂತೆ ದಪ್ಪದಪ್ಪ ಪುಸ್ತಕಗಳನ್ನು ಬರೆಯುಬಾರದೆಂಬ ಪ್ರಶ್ನೆಗೆ, ಇಂದು ಯಾರಿಗೂ ಸಮಯವಿಲ್ಲ. ದಪ್ಪಪುಸ್ತಕಗಳನ್ನು ಓದಲು, ಚಿಕ್ಕದಿದ್ದರೆ ಓದುವುದು ಸುಲಭ ಎನ್ನುತ್ತಿದ್ದರು. ಜೊತೆಗೆ ನಾನು ಹೊಸದೇನನ್ನು ಬರೆಯುತ್ತಿಲ್ಲ, ಮುಂದಿನ ಪೀಳಿಗೆಗೆ ಸುಲಭವಾಗುವಂತೆ ಅಂತರ್ಜಾಲದಲ್ಲಿರುವುದನ್ನು ದಾಖಲಿಸುತ್ತಿದ್ದೇನೆ ಅಷ್ಟೇ ಎಂಬ ಪ್ರಾಮಣಿಕವಾದ ಮಾತುಗಳನ್ನಾಡುತ್ತಿದ್ದರು.
ಅನ್ವೇಷಣೆ: ತೇಜಸ್ವಿಯವರು ಕೃಷಿಯನ್ನು ಬರೀ ಶೋಕಿಗಾಗಿ ಮಾಡುತ್ತಿರಲಿಲ್ಲ, ಆ ಮೂಲಕ ಅವರು ಸಂಶೋಧನೆ, ಅನ್ವೇಷಣೆ ನಡೆಸುತ್ತಿದ್ದರು. ಅವರು ಯಾವತ್ತು ವೈಭವೀಕರಣವನ್ನು ಬಯಸಲಿಲ್ಲ ಮತ್ತು ತಮ್ಮ ತಂದೆಯ ಹೆಸರನ್ನು ಎಲ್ಲೂ ಬಳಸಿಕೊಳ್ಳಲಿಲ್ಲ. ಐಷಾರಾಮಿ ಸವಲತ್ತುಗಳುಳ್ಳ ಪಟ್ಟಣದಲ್ಲಿ ಹುಟ್ಟಿದರು, ಅವರು ಮಲೆನಾಡನ್ನು ಪ್ರೀತಿಸಿದರು. ಎಲ್ಲಾ ವಿದ್ವತ್ತು ಮತ್ತು ಪಾಂಡಿತ್ಯ ನಗರಕ್ಕೆ ಸೀಮಿತವಲ್ಲ ಎಂಬುದನ್ನು ಮಲೆನಾಡಿನ ಮೂಲೆಯಲ್ಲಿ ಕುಳಿತು ನಿರೂಪಿಸಿದರು. ಬರೆಯುವುದಕ್ಕೆ ಪಾಂಡಿತ್ಯ ಬೇಕಿಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

