ಡಯಾಲಿಸಿಸ್ ಕೇಂದ್ರಕ್ಕೆ ಸ್ವಾಗತ
ಈ ಬಾರಿ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಪ್ರತಿ ತಾಲೂಕಿಗೊಂದರಂತೆ ಡಯಾಲಿಸಿಸ್ ಕೇಂದ್ರ ತೆರೆಯಲು ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದು ತುಮಕೂರು ಜಿಲ್ಲಾ ಜೈ ಭಾರತ್ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಕೆ. ಸಮಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದಿಸಿದ್ದಾರೆ.
ಇನ್ನರ್ವ್ಹೀಲ್ಗೆ ಆಯ್ಕೆ
ತುಮಕೂರಿನ ಇನ್ನರ್ವ್ಹೀಲ್ ಕ್ಲಬ್ನ 2013 -14 ನೇ ಸಾಲಿಗೆ ಅಧ್ಯಕ್ಷೆಯಾಗಿ ಸುಮಪ್ರಸಾದ್ ಕಾರ್ಯದರ್ಶಿಯಾಗಿ ನಾಗಮಣಿ ಪ್ರಭಾಕರ್ ಆಯ್ಕೆಯಾಗಿದ್ದಾರೆ ಎಂದು ಇನ್ನರ್ವ್ಹೀಲ್ ಕ್ಲಬ್ ಪ್ರಕಟಣೆ ತಿಳಿಸಿದೆ.
ಡಿಸಿಸಿ ಬ್ಯಾಂಕ್
ಕಾರ್ಯಾಗಾರ
ತುಮಕೂರಿನ ಗೋಕುಲ ಬಡಾವಣೆಯಲ್ಲಿರುವ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಜಂಟಿ ಭಾದ್ಯತಾ ಗುಂಪಿನ ರಚನೆ ಹಾಗೂ ಸಾಲದ ಜೋಡಣೆ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಆರ್. ನಾರಾಯಣಗೌಡ ಉದ್ಘಾಟಿಸಿದರು. ಬ್ಯಾಂಕಿನ ನಿರ್ದೇಶಕರಾದ ಎಂ.ಸಿ. ಉಮೇಶ್, ಲಕ್ಷ್ಮೀನಾರಾಯಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ವಿ. ನರಸಿಂಹಮೂರ್ತಿ, ಮಹಾ ಪ್ರಬಂಧಕ ಬಿ.ಎಸ್. ಕುಬೇಂದ್ರನಾಯಕ್, ನಬಾರ್ಡ್ ನಿವೃತ್ತ ಅಧಿಕಾರಿಗಳಾದ ವೈ.ಜೆ. ಗುಂಡೂರಾವ್, ತುಮಕೂರು ತಾಲೂಕು ಮೇಲ್ವೀಚಾರಕರಾದ ಮಧೂಸೂಧನ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ
ತುಮಕೂರಿನ ವಾಲ್ಮೀಕಿ ನಗರದಲ್ಲಿರುವ ಶಂಕರಿ ಪತ್ತಿನ ಸಹಕಾರ ಸಂಘದ ವತಿಯಿಂದ ಸದರಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯೂಸಿ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಮುಂದಿನ ಆ. 8 ಸಂಜೆ 5 ಗಂಟೆಯೊಳಗೆ ಸಹಕಾರ ಸಂಘದ ಕಚೇರಿಗೆ ತಲುಪಿಸುವಂತೆ ಕೋರಲಾಗಿದೆ.
ವಿದ್ಯಾರ್ಥಿ ವೇತನ
ಬೆಂಗಳೂರಿನ ಹಳ್ಳಿಕಾರ್ ಸಂಘ, ವಿದ್ಯಾರ್ಥಿನಿಲಯ ಟ್ರಸ್ಟ್ ವತಿಯಿಂದ 2012-13 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯೂಸಿಯಲ್ಲಿ ಪಾಸಾದ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸೇರುವ ಹಳ್ಳಿಕಾರ ಜನಾಂಗದ ವಿದ್ಯಾರ್ಥಿಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸಂಬಂಧಿಸಿದ ವಿವರಗಳನ್ನು ಟಿ.ಎಚ್. ಜಯರಾಮೇಗೌಡ, ಕಾರ್ಯಕಾರಿ ಮಂಡಳಿ ಸದಸ್ಯರು, ಹಳ್ಳಿಕಾರ್ ಸಂಘ, ಬೆಂಗಳೂರು, ಕೆ.ಸಿ. ಪುಟ್ಟಪ್ಪ, ಕಾರ್ಯಕಾರಿ ಮಂಡಳಿ ಸದಸ್ಯರು, ಹಳ್ಳಿಕಾರ್ ಸಂಘ, ಬೆಂಗಳೂರು, ನಂ. 441, ಶ್ರೀ ಸಾಯಿದರ್ಶನ್, 6 ನೇ ಕ್ರಾಸ್, ಎಸ್ಐಟಿ ಬಡಾವಣೆ, ತುಮಕೂರು, 572102, ಮೊ. 9886377015
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

