ತುಮಕೂರು

ಹುಟ್ಟು ಹಬ್ಬ ಹೋರಾಟಗಾರರ ಆಚರಣೆಗಳಲ್ಲ

Published On :

ತುಮಕೂರು: ಹುಟ್ಟು ಹಬ್ಬ ಆಚರಣೆಗಳು ಹೋರಾಟಗಾರರ ಆಚರಣೆಗಳಲ್ಲ ಎಂದು ಕಾರ್ಮಿಕ ಮುಖಂಡ ಹೆಚ್.ವಿ. ಅನಂತಸುಬ್ಬರಾವ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಇಲ್ಲಿನ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಕೆಎಸ್ಆರ್ಟಸಿ ಸ್ಟಾಪ್ ಮತ್ತು ವರ್ಕರ್ ಯೂನಿಯನ್ ತುಮಕೂರು ಜಿಲ್ಲಾ ವಿಭಾಗ, ಘಟಕಗಳಿಂದ ಆಯೋಜಿಸಲಾಗಿದ್ದ ತಮ್ಮ 72ನೇ ಹುಟ್ಟಹಬ್ಬದ ಪ್ರಯುಕ್ತ ನಡೆದ ಕಾರ್ಮಿಕರಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ನಿಮ್ಮ ನಿಜವಾದ ಆಚರಣೆ ಎಂದರೆ ದಿನ ನಿತ್ಯ ಮಾಡುತ್ತಿರುವ ಜನ ಸೇವೆ. ಜತೆ ಜತೆಯಲ್ಲಿ ರಕ್ತದಾನ ಮಾಡುವ ಮೂಲಕ ಶ್ರೇಷ್ಠ ಕೆಲಸವನ್ನು ಕಾರ್ಮಿಕರು ಮಾಡಿದ್ದಾರೆ ಎಂದು ಪ್ರಶಂಸಿಸಿದರು. ಕೆಎಸ್ಆರ್ಟಿಸಿ ಸ್ಟಾಪ್ ಮತ್ತು ವರ್ಕರ್ ಯೂನಿಯನ್ನ ನಾಗರಾಜು ಮಾತನಾಡಿ ಸಾರಿಗೆ ಸಂಸ್ಥೆ 1961 ರಲ್ಲಿ ಜನ್ಮತಾಳಿದ ಸಂಸ್ಥೆ. ಈ ಸಂಸ್ಥೆ ಇನ್ನು ಮುಂದೆ 38 ಸಾರಿಗೆ ಸಂಸ್ಥೆಗಳಲ್ಲಿ ರಕ್ತದಾನದಂತಹ ಶಿಬಿರಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಈ ರಕ್ತದಾನ ಶಿಬಿರವನ್ನು ನಮ್ಮ ಸಂಘಟನೆಯಿಂದ ಮುಂದುವರೆಸಿಕೊಂಡು ಹೋಗಲು ಜಿಲ್ಲಾ ಸಮಿತಿಗೆ ಕರೆ ನೀಡಿದರು. ಈ ಶಿಬಿರದಲ್ಲಿ ಕೆಎಸ್ಆರ್ಟಿಸಿ ಸ್ಟಾಪ್ ಮತ್ತು ವರ್ಕರ್ ಯೂನಿಯನ್ ಅಧ್ಯಕ್ಷ ಕೆ.ಎಂ. ನಾಗರಾಜ್, ಕಾರ್ಯದರ್ಶಿ ರಾಜ್ಗೋಪಾಲ್, ಮಹದೇವಪ್ಪ, ಜಗದೀಶ್ ಮತ್ತು ಗೌರವಾಧ್ಯಕ್ಷ ಗಿರೀಶ್, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಎಐವೈಎಫ್ನ ಜಿಲ್ಲಾ ಕಾರ್ಯದರ್ಶಿ ವಾಸುದೇವಕುಮಾರ್, ಉಪಾಧ್ಯಕ್ಷ ಚಿನ್ನಪ್ಪ, ಅಕ್ಬರ್ ಪಾಷ, ಅಬ್ದುಲ್ ವಾಜಿದ್, ರಾಜಣ್ಣ, ದೇವರಾಜು, ವಿಶ್ವನಾಥ್ ಮುಂತಾದವರು ಇದ್ದರು. ಹಿಪ್ತಾ ಸಂಘಟನೆಯ ವೆಂಕಟರಾಮು, ಗೌಡರಂಗಪ್ಪ ಕ್ರಾಂತಿಗೀತೆ ಮೂಲಕ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.