ಕೆಎಸ್ಆರ್ಟಿಸಿ ವಿಭಾಗವೊಂದೇ ಲಾಭದತ್ತ
ಕ.ಪ್ರ. ವಾರ್ತೆ ಕುಣಿಗಲ್ ಜು.21
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳ ಪೈಕಿ ಕೆಎಸ್ಆರ್ಟಿಸಿ ವಿಭಾಗವೊಂದೆ ಲಾಭದತ್ತ ನಡೆಯುತ್ತಿದ್ದ, ಉಳಿದ ಮೂರು ವಿಭಾಗಗಳು ನಷ್ಟದತ್ತ ಸಾಗುತ್ತಿವೆ. ಸರ್ಕಾರ ನಷ್ಟದಲ್ಲಿನ ಮೂರು ವಿಭಾಗಗಳು, ಲಾಭದತ್ತ ಸಾಗಲು ಕ್ರಮ ಕೈಗೊಂಡು, ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣದ ವಿಷಯ ಕೈಬಿಟ್ಟು, ಸಂಪೂರ್ಣ ರಾಷ್ಟ್ರೀಕರಣಕ್ಕೆ ಮುಂದಾಗಬೇಕೆಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಕೆ.ಎಸ್. ಶರ್ಮ ಆಗ್ರಹಿಸಿದರು.
ಭಾನುವಾರ, ಮಂಡಳದ ತಾಲೂಕು ಘಟಕ ಪಟ್ಟಣದ ಖಾಸಗಿ ಪಾರ್ಟಿಹಾಲ್ನಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ, ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾಮಂಡಳವು ಕಳೆದ 55ವರ್ಷಗಳಿಂದಲೂ, ಸಂಸ್ಥೆಯ ಕಾರ್ಮಿಕರ ಶ್ರೇಯೋಭಿಲಾಷೆಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಾ, ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸಿದಾಗಲೆಲ್ಲಾ ಹೋರಾಟ ನಡೆಸಿ ಕಾರ್ಮಿಕರಿಗೆ ಸೂಕ್ತ ನ್ಯಾಯ, ಸ್ಥಾನಮಾನ ಕೊಡಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ.
ಹಾಗೇ ಉಳಿದ ಬೇಡಿಕೆ: ಕಳೆದ ಸಾಲಿನಲ್ಲಿ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ನಡೆಸಿದ ಎರಡು ದಿನಗಳ ಮುಷ್ಕರದ ಪರಿಣಾಮ 9 ಪ್ರಮುಖ ಬೇಡಿಕೆ ಇಡೇರಿವೆ. ಆದರೆ ಕಾರ್ಮಿಕರ ಹಿತರಕ್ಷಣೆಗೆ ಅಗತ್ಯವಾದ ಇನ್ನು 41ಬೇಡಿಕೆಗಳು ಹಾಗೇ ಉಳಿದಿವೆ. ಪ್ರಮುಖರಾಗಿ ಮಹಿಳಾ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು, ಹೆಚ್ಚುವರಿ ಭತ್ಯ ಮಾಡುವ ಕಾರ್ಮಿಕರಿಗೆ ಸೂಕ್ತ ಭತ್ಯೆ, ದಂಡ, ಅನಗತ್ಯ ವೇತನ ಕಡಿತ, ಅನಿಯಮಿತ ಕಾರ್ಯನಿರ್ವಹಣೆ, ಟ್ರೈನಿಪದ್ಧತಿ ರದ್ದತಿ ಸೇರಿದಂತೆ, ಸಂಸ್ಥೆಯ ನಿವೃತ್ತ ನೌಕರರಿಗೆ ಆರೋಗ್ಯರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಹಾಮಂಡಳ ಶ್ರಮಿಸಿದ್ದು ಸರ್ಕಾರದೊಂದಿಗೆ ನಿರಂತರ ಮಾತುಕತೆಯಲ್ಲಿ ತೊಡಗಿದೆ, ತುಮಕೂರು ವಿಭಾಗ, ಕುಣಿಗಲ್, ತುರುವೆಕೆರೆ, ತಿಪಟೂರು ಡಿಪೋಗಳಲ್ಲಿನ ಕಾರ್ಮಿಕರ ಹಲವಾರು ಸಮಸ್ಯೆಗಳ ಬಗ್ಗೆ ಮನವಿಗಳು ಬಂದಿದ್ದು, ಸಮಸ್ಯೆ ನಿವಾರಣೆ ನಿಟ್ಟಿನಲ್ಲೂ ಶ್ರಮಿಸಲಾಗುವುದೆಂದರು.
ಕಾರ್ಮಿಕ ಮುಖಂಡ ರಾಘವರಾಜು ಪ್ರಾಸ್ತಾವಿಕ ಭಾಷಣ ಮಾಡಿದರು, ಮಹಾಮಂಡಳದ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್, ಯಡೆಯೂರು ದೇವಾಲಯದವರೆಗೂ ಮತ್ತು ನೆಲಮಂಗಲ- ಕುಣಿಗಲ್ನ ಸಂಪರ್ಕ ಸಾರಿಗೆ ಆರಂಭಿಸಿವುದು, ವಿನಾಕಾರಣ ಬಹುತೇಕ ಮಾರ್ಗಗಳನ್ನು ಸ್ಥಗಿತಗೊಳಿಸಿದ್ದು ಆ ಮಾರ್ಗಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಲುವುದು ಸೇರಿದಂತೆ ಡಿಪೋವಿನಲ್ಲಿ ಹೆಚ್ಚುವರಿ ಭತ್ಯೆ ವಿತರಣೆ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ತಾಲೂಕು ಘಟಕದ ವತಿಯಿಂದ ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ್ದ ರಾಜ್ಯಾಧ್ಯಕ್ಷರನ್ನು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಿದರು. ರಾಜ್ಯಮಟ್ಟದ ಪದಾಧಿಕಾರಿಗಳಾದ ಗಂಗಾಧರಯ್ಯ, ಜಯ ದೇವರಾಜೇ ಅರಸ್, ದೇವರಾಜ್ ಅರಸ್, ನಾರಾಯಣ, ಜಿಲ್ಲಾಘಟಕದ ಪುಟ್ಟರಾಜು, ಬಲರಾಮ, ಜಯದೇವ, ತಾಲೂಕು ಘಟಕದ ಪ್ರಕಾಶ್, ವೆಂಕಟೇಶ, ಉಮೇಶ, ನಾರಾಯಣ, ಬಸವರಾಜು, ರೇವಣಸಿದ್ದಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸದಸ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

