ತುಮಕೂರು

ಶಿರಾ ನಿ. ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ರಂಗಪ್ಪ

Published On :

ಕ.ಪ್ರ.ವಾರ್ತೆ ತುಮಕೂರು ಜು. 24
ಶಿರಾ ತಾಲೂಕು ನಿವೃತ್ತ ಪೊಲೀಸ್ ಅಧಿಕಾರಿಗಳ ಸರ್ವ ಸದಸ್ಯರ ಸಭೆ ಇತ್ತೀಚೆಗೆ ಶಿರಾ ಸರ್ಕಾರಿ ನಿವೃತ್ತ ನೌಕರರ ಕಟ್ಟಡದಲ್ಲಿ ಬಿ.ಎನ್. ಲಕ್ಷ್ಮೀನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೇವಾನಿರತ ಪೊಲೀಸರಿಗೆ ಇರುವಂತೆ ನಿವೃತ್ತ ಪೊಲೀಸರಿಗೂ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸುವಂತೆ ಈ ಸಭೆಯಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಮುಖ್ಯಸ್ಥರನ್ನು ಒತ್ತಾಯಿಸಲಾಯಿತು.
ಶಿರಾ ತಾಲೂಕು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿದ್ದ ಬಿ.ಎನ್. ಲಕ್ಷ್ಮೀನರಸಿಂಹಯ್ಯನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಿವೃತ್ತ ಶಾಖಾಧಿಕಾರಿ ಎಲ್. ರಂಗಪ್ಪ ಅವರನ್ನು ತಾಲೂಕು ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಾಲೂಕು ಸಂಘದ ಮಾಸಿಕ ಸಭೆಯನ್ನು ಪ್ರತಿ ತಿಂಗಳು ನಡೆಸಲು ತೀರ್ಮಾನಿಸಲಾಯಿತು. ಸಂಘದ ಎಲ್ಲಾ ಸದಸ್ಯರು ಗುರುತಿನಚೀಟಿ ಹಾಗೂ ಆಶಾಕಿರಣ ನಿಧಿ ಪ್ರಮಾಣ ಪತ್ರವನ್ನು ತಪ್ಪದೇ ಪಡೆಯಲು ಸೂಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಮಾಲೂರಪ್ಪ, ಎಸ್.ಬಿ. ಶಿವಬಸಪ್ಪ, ಮಹದೇವಪ್ಪ, ದೇವೇಗೌಡ, ಲಕ್ಷ್ಮೀನರಸಿಂಹಯ್ಯ, ಎಲ್. ರಂಗಪ್ಪ, ಇಕ್ರಮುಲ್ಲಾಖಾನ್, ಎಸ್.ಎ. ನಾರಾಯಣ್, ನರಸಿಂಹಯ್ಯ, ಪುಟ್ಟಣ್ಣ, ತಾಜ್ ಪಾಷಾ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.