ಬುಕ್ಕಾಪಟ್ಟಣ ಪಿಡಿಓ ವಿರುದ್ಧ ಗ್ರಾಪಂ ಅಧ್ಯಕ್ಷ, ಸದಸ್ಯರ ಪ್ರತಿಭಟನೆ: ವರ್ಗಾವಣೆಗೆ ಆಗ್ರಹ
ಶಿರಾ: ಗ್ರಾಪಂ ಅಭಿವೃದ್ಧಿ ಅಧಿಕಾರಿ ಕರ್ತವ್ಯ ಲೋಪ, ಗೈರು ಹಾಜರಿ ಸೇರಿದಂತೆ ಹತ್ತು ಹಲವು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಖಂಡಿಸಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಂದಲೇ ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಬುಕ್ಕಾಪಟ್ಟಣ ಗ್ರಾಪಂನ ಪಿಡಿಓ ಇಲ್ಲಿಗೆ ಬಂದು ಒಂದು ವರ್ಷ ಉರುಳಿದರೂ ಸದರಿ ಪಂಚಾಯ್ತಿಯಲ್ಲಿ ಸರಿಯಾಗಿ ಕರ್ತವ್ಯವನ್ನೆ ನಿರ್ವಹಿಸುತ್ತಿಲ್ಲ. ವಾರಕ್ಕೊಮ್ಮೆಯೋ ಅಥವಾ ಅವರಿಗೆ ಸರಿಬಂದ ದಿನದಂದು ಪಂಚಾಯ್ತಿಗೆ ಬಂದು ಹೋಗುವ ಅಧಿಕಾರಿಯಿಂದ ಇಲ್ಲಿನ ಸಾರ್ವಜನಿಕರೂ ಬೇಸತ್ತಿದ್ದಾರೆ. ಕೇವಲ ಸಾರ್ವಜನಿಕರಷ್ಟೆ ಅಲ್ಲದೆ ಇಲ್ಲಿನ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳೆ ಈ ಪಿ.ಡಿ.ಓ. ಕರ್ತವ್ಯಲೋಪವನ್ನು ನೋಡಿ ಸಾಕಾಗಿ ಹೋಗಿದೆ ಎನ್ನುತ್ತಾರೆ. ಗ್ರಾಪಂನಲ್ಲಿ ಖಾಲಿ ಇದ್ದ ಸದಸ್ಯ ಕ್ಷೇತ್ರ ಒಂದಕ್ಕೆ ಜುಲೈ 23 ರಂದು ಚುನಾವಣೆ ಇದೆ ಅನ್ನುವ ಅರಿವಿದ್ದರೂ ಪಂಚಾಯ್ತಿಗೆ ಬಂದು ಹೋಗುವ ಸೌಜನ್ಯವನ್ನೂ ತೋರಿಲ್ಲ ಎನ್ನುವ ಪ್ರತಿಭಟನಾಕಾರರು ಸದರಿ ಅಧಿಕಾರಿಯ ಇಂತಹ ವರ್ತನೆಯನ್ನು ಖಂಡಿಸಿ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಪ್ರಭಾಕರ್, ಸದಸ್ಯರಾದ ಲಕ್ಷ್ಮೀನರಸಿಂಹಯ್ಯ, ಕೃಷ್ಣಪ್ಪ ಸೇರಿದಂತೆ ಅನೇಕ ಮಂದಿ ಸಾರ್ವಜನಿಕರೂ ಕೂಡ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ಕೂಡಲೇ ಇವರನ್ನು ಬೇರೆ ಕಡೆ ವರ್ಗಾಯಿಸುವಂತೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

