ದಲಿತರು, ಆದಿವಾಸಿಗಳಿಗೆ ಭೂ ಹಕ್ಕೊತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮಧುಗಿರಿ ಜು. 27
ಭೂಹೀನ ದಲಿತರಿಗೆ ಮತ್ತು ಆದಿವಾಸಿಗಳ ಸಮುದಾಯಕ್ಕೆ ಭೂಮಿ ನೀಡುವಂತೆ ಹಕ್ಕೊತ್ತಾಯಿಸಿ ಕರ್ನಾಟಕ ದಲಿತ ವಿಮೋಚನೆ ಮಾನವ ಹಕ್ಕುಗಳ ಆಶ್ರಯದಲ್ಲಿ ಶುಕ್ರವಾರ ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಬಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಪತ್ರ ಅರ್ಪಿಸಿದರು.
ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆಯಿದ್ದರೂ ದಲಿತ ಸಮುದಾಯದ ಅದೆಷ್ಟೋ ಭೂ ವ್ಯಾಜ್ಯಗಳು ಪಿಟಿಸಿಎಲ್ ಹಾಗೂ ನ್ಯಾಯಾಲಯಗಳಲ್ಲಿ ದಲಿತರಿಗೆ ನ್ಯಾಯ ದೊರಕದೇ ಕೇಸುಗಳು ನೆನೆಗುದಿಗೆ ಬಿದ್ದಿವೆ. ಬಗರ್ ಹುಕುಂ ಸಾಗುವಳಿ, ಗೋಮಾಳ ಹಾಗೂ ಹುಲ್ಲುಗಾವಲು ಪ್ರದೇಶಗಳಿದ್ದು, ದಲಿತರು ಈಗ್ಗೆ 30 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಭೂ ಮಂಜೂರಾತಿ ನೀಡದೇ ಆಳುವ ಸರ್ಕಾರಗಳು ಮೀನಮೇಷ ಏಣಿಸುತ್ತಿವೆ. ಆದ ಕಾರಣ ರಾಜ್ಯದಲ್ಲಿ ತುರ್ತಾಗಿ ಭೂ ಸಮಿತಿ ರಚಿಸಿ ಅಕ್ರಮ-ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಭೂ ಮಾಫಿಯ- ಸುಳ್ಳು ದಾಖಲೆ ಸೃಷ್ಟಿಸಿ ಕೊಂಡಿರುವವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಭೂಮಿ ಹಕ್ಕೊತ್ತಾಯಗಳು: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಂಸಾನಹಳ್ಳಿ ಸರ್ವೆ ನಂ.322ರಲ್ಲಿ ಉಳುಮೆ ಮಾಡುತ್ತಿರುವ ದಲಿತರಿಗೆ ಹಕ್ಕು ಪತ್ರ ಮಂಜೂರು ಮಾಡಬೇಕು. ಸರ್ಕಾರದ ಹೆಚ್ಚುವರಿ ಭೂಮಿಯನ್ನು ಪ.ಜಾತಿ ಭೂ ರಹಿತ ಕುಟುಂಬಗಳಿಗೆ ವಿತರಿಸಬೇಕು. ಮುದ್ದೇನಹಳ್ಳಿ ಸರ್ವೆ ನ.68ರಲ್ಲಿ ಉಳುಮೆ ಮಾಡುವ ವರಿಗೆ ಹಕ್ಕು ಪತ್ರ ನೀಡುವುದು. ಅಕ್ರಮವಾಗಿ ಅನುಭವಿಸುತ್ತಿರುವವರ ಮೇಲೆ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಖಾತೆದಾರರಿಗೆ ರಕ್ಷಣೆ ನೀಡಿ ಜಮೀನು ಬಿಡಿಸಿ ಕೊಡಬೇಕು ಮುಂತಾದ ಹಕ್ಕೊತ್ತಾಯ ಮಾಡಿದರು.
ದಲಿತ ಮುಖಂಡರಾದ ಹನುಮಂತರಾಯಪ್ಪ, ಆರ್.ಕೃಷ್ಣಪ್ಪ, ಗೋವಿಂದರಾಜು, ಡಿ.ಟಿ.ಸಂಜೀವಮೂರ್ತಿ, ತೊಂಡೋಟಿ ರಾಮಾಂಜಿ, ಜಿ.ಸಿ.ತಿಮ್ಮಯ್ಯ, ಕೋಟೆಕಲ್ಲಪ್ಪ, ಕಣಿಮಕ್ಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

