ಉತ್ತರಾಖಂಡದ ಅವಘಡಕ್ಕೆ ದುರಾಸೆ- ನಿರ್ಲಕ್ಷ್ಯವೂ ಕಾರಣ: ಡಾ. ಜಗದೀಶ್
ಕ.ಪ್ರ.ವಾರ್ತೆ ತಿಪಟೂರು ಜು. 29
ಕೇದಾರನಾಥ ಮತ್ತು ಬದರೀನಾಥ್ ಸುತ್ತಣ ಪರ್ವತಗಳ ಇಳಿಜಾರಿನಲ್ಲಿ ಬಿದ್ದ ಭಾರಿ ಪ್ರಮಾಣದ ಕುಂಭದ್ರೋಣ ಮಳೆ ಜೊತೆಗೆ ಬೃಹತ್ ಪ್ರಮಾಣದ ಕಲ್ಲು ಮತ್ತು ಮಣ್ಣಿನ ರಾಶಿ ಹಾಗೂ ಕೇದಾರನಾಥ ಹಿಂದೆ ಇದ್ದ ಗಾಂಧಿಸಾಗರ ಕರಗಿ ಪ್ರವಾಹವಾಗಿ ಮಾರ್ಪಟ್ಟ ಪರಿಣಾಮ ಉತ್ತರಾಖಾಂಡದಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಲು ಕಾರಣ ಎಂದು ಭೂಗೋಳಶಾಸ್ತ್ರದ ಮುಖ್ಯಸ್ಥರಾದ ಡಾ. ಎಸ್.ಸಿ. ಜಗದೀಶ್ ತಿಳಿಸಿದರು.
ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉತ್ತರಾಖಂಡ ಅವಘಡಕ್ಕೆ ಕಾರಣಗಳನ್ನು ಕುರಿತು ಏರ್ಪಡಿಸಿದ್ದ ಕದಳಿ ಬಳಗ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೆಡಿಟರೇನಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಮೇಲೆ ಹಾದುಬಂದ ಮಳೆಯ
ಮಾರುತ ಪರಸ್ಪರ ಹಿಮಾಲಯದಲ್ಲಿ ಸಂಧಿಸಿ ಹತ್ತಾರು ಕಿಲೋ ಮೀಟರ್ ಎತ್ತರದ ಮಳೆಯ ಮೋಡಗಳ ಸೃಷ್ಟಿಯಾಗಿತ್ತು. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವನ್ನೂ ಅನುಸರಿಸದ ಸರ್ಕಾರದ ನಿರ್ಲಕ್ಷ್ಯವೂ ಪ್ರಮುಖ ಕಾರಣವಾಗಿದೆ. ತೀಕ್ಷ್ಣವಾದ ಪರ್ವತದ ಇಳಿಜಾರು, ಕುಸಿದ ಉಷ್ಣಾಂಶ, ಹೆಪ್ಪುಗಟ್ಟಿದ ನೀರು, ದಾರಿಯೇ ಕಾಣದಂತೆ ಹರಡಿದ್ದ ಮಂಜು, ಮಾನವ ದುರಾಸೆಯಿಂದ ಕಡಿಮೆಯಾದ ಅರಣ್ಯ ಪ್ರದೇಶಗಳು, ಅಲ್ಲದೆ ನದಿಯ ಪಾತ್ರದಲ್ಲಿ ನಿರ್ಮಿಸಿದ ಹೊಟೇಲ್‌ಗಳು, ವಸತಿ ಗೃಹಗಳು ಹಾಗೂ ವಾಣಿಜ್ಯ ಕಟ್ಟಡಗಳು ರಸ್ತೆ, ನಿರ್ಮಾಣ, ಜೆ.ಸಿ.ಬಿ.ಗಳ ಅಗೆಯುವಿಕೆ, ನದಿಯ ಪಾತ್ರಕ್ಕೆ ಮಣ್ಣು ಮತ್ತು ಕಟ್ಟಡ ಸಾಮಗ್ರಿಗಳನ್ನು ತಳ್ಳುವುದು, ಬೆಟ್ಟದ ಇಳಿಜಾರಿನಲ್ಲಿ ಕೃಷಿ, ಜಲ ವಿದ್ಯುತ್ ಕೇಂದ್ರಗಳ ಸ್ಥಾಪನೆ ಸಹ ಅವಘಡಕ್ಕೆ ಕಾರಣವಾಗಿವೆ ಎಂದರು.
ಪ್ರಾಚಾರ್ಯ ಸೈಯದ್ ಮುಸ್ತಾಕ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಂ.ಕೆ. ನಿಂಗೇಗೌಡ ಸ್ವಾಗತಿಸಿ, ಕದಳಿ ಬಳಗದ ಅಧ್ಯಕ್ಷೆ ಪ್ರಭಾ ವಿಶ್ವನಾಥ್ ವಂದಿಸಿದರು.
ಛಾಯಾಗ್ರಾಹಕರ ಸಂಘದ ಉದ್ಘಾಟನೆ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಛಾಯಾಗ್ರಾಹಕರ ಸಂಘದ ಉದ್ಘಾಟನೆ ಸಮಾವೇಶ ಹಾಗೂ ಕಾರ್ಯಾಗಾರದ ಉದ್ಘಾಟನೆಯನ್ನು ರಾಜ್ಯ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಬಿ.ಎಸ್. ಶಶಿಧರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಭಕ್ತವತ್ಸಲ, ತಾ.ಅಧ್ಯಕ್ಷ ಲೋಕೇಶ್, ರಾಜ್ಯ ಸಂಘದ ಉಪಾಧ್ಯಕ್ಷ ನಾಗೇಶ್, ನೊಣವಿನಕೆರೆ ಹೋಬಳಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎನ್. ವೆಂಕಟೇಶ್, ಕಾರ್ಯದರ್ಶಿ ಎಲ್.ಎಸ್. ಲೋಕೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

