ತುಮಕೂರು

ಅಮೆರಿಕ ವಿವಿಗಳ ಸಂಶೋಧನಾ ತಂಡ ಭೇಟಿ

Published On :

ತುಮಕೂರು: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ಗೆ ಇತ್ತೀಚೆಗೆ ಅಮೆರಿಕಾದ ವಿವಿಧ ವಿವಿಗಳ ಸಂಶೋಧನಾ ಪ್ರಾಧ್ಯಾಪಕರು ಭೇಟಿ ನೀಡಿದ್ದು, ತುಮಕೂರಿನ ವಿವಿಧ ಕೊಳಗೇರಿಗಳಿಗೆ ಭೇಟಿ ನೀಡಿ ಅಲೆಮಾರಿ ಬುಡಕಟ್ಟು ಜನರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಅಲೆಮಾರಿ ಬುಡಕಟ್ಟು ಸಭಾದ ಅಧ್ಯಕ್ಷ ಹಾಗೂ ನ್ಯಾಷನಲ್ ಲಾ ಸ್ಕೂಲ್ನ ಪ್ರಾಧ್ಯಾಪಕ ಬಾಲ ಗುರುಮೂರ್ತಿ ಅವರೊಂದಿಗೆ ತುಮಕೂರಿನ ವಿವಿಧ ಸ್ಲಂಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದರು. ಇದುವರೆಗೂ ಭಾರತದಲ್ಲಿ ಕಟ್ಟಕಡೆಯ ವ್ಯಕ್ತಿ ದಲಿತರು ಎಂದು ತಿಳಿದುಕೊಂಡಿದ್ದ ಅಮೆರಿಕನ್ನರಿಗೆ ಅಲೆಮಾರಿ ಬುಡಕಟ್ಟು ಜನರ ಸ್ಥಿತಿ ಕಂಡು ಮರುಗಿದರು. ಈ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸುವುದಾಗಿ ನಿಯೋಗ ಭರವಸೆ ನೀಡಿತು. ವಾಷಿಂಗ್ಟನ್ ವಿವಿಯ ಪ್ರೊ.ಚಿತ್ರಲೇಖ ಅವರನ್ನು ಒಳಗೊಂಡ 16 ಜನರ ತಂಡ ತುಮಕೂರು ನಗರದ ಬನಶಂಕರಿ 2ನೇ ಹಂತದ ಕೊಳಗೇರಿಯಲ್ಲಿರುವ ಹಂದಿಜೋಗರ ಗುಡಿಸಲುಗಳಿಗೆ ಭೇಟಿ ನೀಡಿ ಗುಡಿಸಲುಗಳಲ್ಲಿಯೇ ವಾಸಿಸಲು ಇರುವ ಕಾರಣವನ್ನು ಅರಿತರು. ದಿಬ್ಬೂರು, ಮಳೆಪ್ಯಾಕ್ಟರಿ ಇನ್ನೂ ಮುಂತಾದ ಕಡೆ ಇರುವ ಕೊಳಗೇರಿಗಳಿಗೆ ಭೇಟಿ ನೀಡಿ ಅಲೆಮಾರಿ ಬುಡಕಟ್ಟು ಜನರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಅಮೆರಿಕಾದ ವಿವಿಗಳ ಸಂಶೋಧಕರಿಗೆ ಅಲೆಮಾರಿ ಬುಡಕಟ್ಟು ಸಭಾದ ಅಧ್ಯಕ್ಷ ಡಾ.ಬಾಲ ಗುರುಮೂರ್ತಿ, ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ರಾಮಕ್ಕ, ಉಪಾಧ್ಯಕ್ಷ ರಂಗಪ್ಪ ಅವರು ತಮಗೆ ದೊರೆಯುತ್ತಿರುವ ಸರಕಾರಿ ಸವಲತ್ತು, ಅವುಗಳನ್ನು ಪಡೆಯಲು ಪಡುತ್ತಿರುವ ಕಷ್ಟಗಳ ಬಗ್ಗೆ ತಂಡದ ಮುಂದೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.