ತುಮಕೂರು

ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗೆ ಆದ್ಯತೆ

Published On :

ಕ.ಪ್ರ. ವಾರ್ತೆ  ಕೊರಟಗೆರೆ  ಜೂ. 2
ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗೆ ಮಹತ್ತರ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸಲು ನನ್ನ ಹೋರಾಟವಿದ್ದು ಈಗಾಗಲೇ ಸರ್ಕಾರ ಇದಕ್ಕೆ ಸಮ್ಮತಿಸಿರುವುದಾಗಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕು ಸಚಿವ ಟಿ.ಬಿ ಜಯಚಂದ್ರ ತಿಳಿಸಿದರು.
ಅವರು ಭಾನುವಾರ ತಾಲೂಕಿನ ಸುಪ್ರಸಿದ್ಧ ಯಾತ್ರಾಸ್ಥಳ ಗೊರವನಹಳ್ಳಿಯಲ್ಲಿ ಮಹಾಲಕ್ಷ್ಮಿ ವಿದ್ಯಾಮಂದಿರದ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ತುಮಕೂರು ಜಿಲ್ಲೆ ಬರಗಾಲಕ್ಕೆ ಸಿಕ್ಕಿರುವಂತಹ ಪ್ರದೇಶ ಇಲ್ಲಿ ರೈತರ ಶಾಶ್ವತ ಬೆಳೆಗಳು ನಷ್ಟವಾಗಿದ್ದು ಈ ಹಾಳಾಗಿರುವಂತಹ ಬೆಳೆಗೆ ಪರಿಹಾಕ್ಕಾಗಿ ಹಾನಿಗೊಳಗಾಗಿರುವ ರೈತರ ಸಮೀಕ್ಷೆಯನ್ನು ನಡೆಸುತ್ತಿದ್ದು ಎಲ್ಲಾ ರೈತರಿಗೂ ಪರಿಹಾರ ನೀಡಲಾಗುವುದು. ರೈತರ ಪರ ಕಾಂಗ್ರೆಸ್ ಸರ್ಕಾರವಿದ್ದು ರೈತರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.
ಪ್ರತಿಯೊಂದು ಕ್ಷೇತ್ರವು ಅಭಿವೃದ್ಧಿ ಹೊಂದುತ್ತಾ ಹೋದಂತೆ ಅಲ್ಲಿನ ಕ್ಷೇತ್ರದ ಮೂಲ ಪುರಷರನ್ನು ಮರೆತುಬಿಡುತ್ತಾರೆ. ಆದರೆ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಮೂಲಪುರುಷರನ್ನು ಸ್ಮರಿಸಿಕೊಂಡು ಅವರ ಹೆಸರಿನಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶ್ರಮ ಪಟ್ಟಿದ್ದೆ: ಈ ಹಿಂದೆ ಸಿರಾ ತಾಲೂಕಿಗೆ ಕುಡಿಯುವ ನೀರನ್ನು ತರಲಿಕ್ಕಾಗಿ ನಾನು ತೀರಾ ಶ್ರಮ ಪಟ್ಟಿದ್ದೇನೆ. ಸರ್ಕಾರದ ಹಂತದಲ್ಲಿ ಯೋಜನೆಗಳು ರೂಪುಗೊಳ್ಳುತ್ತವೆ. ಆದರೆ ಅದು ಅನುಷ್ಠಾನ ಅಷ್ಟು ಸುಲಭವಾಗಿ ಆಗುವುದಿಲ್ಲ. ಇದಕ್ಕೆ ಶ್ರಮ ಹಾಕಬೇಕು. ಶಿರಾಗೆ ಕುಡಿಯುವ ನೀರಿಗೆ ಹೋರಾಡಿದ ರೀತಿಯಲ್ಲಿ ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗೆ ಶ್ರಮ ಹಾಕಿ ಅನುಷ್ಠಾನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರ ಶುಭ ಸಂಕೇತವಾಗಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಎಲ್ಲೆಡೆಯೂ ಕೆರೆ-ಕಟ್ಟೆಗಳು ತುಂಬಿದ್ದು ರೈತ ಮುಖದಲ್ಲಿ ಹರ್ಷ ಮೂಡಿದೆ, ರೈತರಿಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯವನ್ನು ನೀಡಲು ಸಿದ್ಧರಿರುವುದಾಗಿ ಹೇಳಿದರು.
ಸಾನಿಧ್ಯವನ್ನು ರಾಮಕೃಷ್ಣ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಹಿಸಿಕೊಂಡ್ಡಿದ್ದರು. ಸಂಸದ ಬಸವರಾಜು ಶ್ರೀ ಮಾತೆ ಕಮಲಮ್ಮನವರ ಪುತ್ಥಳಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಯಾಗಿ ಮಧುಗಿರಿ ಉಪವಿಭಾಗಾಧಿಕಾರಿ  ಸಿ. ಅನಿತಾ, ಜಿ.ಪಂ ಅಧ್ಯಕ್ಷೆ ಪ್ರೇಮಾ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ತಾ.ಪಂ ಸಿಇಓ ಎಂ.ಎ ಗೋಪಾಲ್, ಜಿ.ಪಂ ಎಂಜಿನಿಯರ್ ಸೋಮಣ್ಣ, ಟ್ರಸ್ಟ್ ಅಧ್ಯಕ್ಷ ನರಸೀಯಪ್ಪ, ಟ್ರಸ್ಟಿಗಳಾದ ಲಲಿತಮ್ಮ, ಕಮಲಮ್ಮ, ವಿಜಯನರಸಿಂಹ, ರಂಗಪ್ಪ ಪ್ರಧಾನ ಅರ್ಚಕ ಪ್ರಸನ್ನಕುಮಾರ್, ಆಡಳಿತಾಧಿಕಾರಿ ವೆಂಕಟರಂಗಯ್ಯ, ಕಾರ್ಯನಿರ್ವಣಾಧಿಕಾರಿ ಡಿ.ಎನ್. ರಮೇಶ್, ಕೇಶವಮೂರ್ತಿ, ಸಿಪಿಐ ಬಾಲಾಜಿ ಸಿಂಗ್, ಸಮಾಜ ಕಲ್ಯಾಣಾಧಿಕಾರಿ ಸುಬ್ಬಿ ಸಿದ್ದನ್, ಕೃಷಿ ಅಧಿಕಾರಿ ಅಶೋಕ್,  ಮುಖಂಡ ಮಹಾಲಿಂಗಪ್ಪ, ಮಾಜಿ ಪ.ಪಂ ಸದಸ್ಯ ಮಯೂರ ಗೋವಿಂದರಾಜು, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.