ತುಮಕೂರು

'ಮಾನವೀಯ ಮೌಲ್ಯ ಬೆಸೆದ ಸಾಂಸ್ಕೃತಿಕ ರಂಗ ತರಬೇತಿ'

Published On :

ಕ.ಪ್ರ. ವಾರ್ತೆ  ತುಮಕೂರು  ಜೂ. 2
ಬಂಜರು ನೆಲದ ಸಂಸ್ಕೃತಿಗೆ ರಂಗಸಂಸ್ಕೃತಿಯ ಸಂಗಮದ ರಸದೌತಣದ ಬೆಸುಗೆಯನ್ನು ಕರೇಮಾದೇನಹಳ್ಳಿ ಜನತೆ ಸವೆದರು.
ಕ್ಯಾಸೆಟ್ ಸಂಸ್ಕೃಯ ಮಕ್ಕಳ ನೃತ್ಯಕ್ಕೆ ಒಗ್ಗಿಕೊಂಡಿದ್ದ ಹಳ್ಳಿಗರು ಶಿಬಿರದ ಮೂಲಕ ಅರಿವಿನ ಆಳಕ್ಕೆ ಇಳಿದು ಮೂಕವಿಸ್ಮತರಾದರು.
ಮಕ್ಕಳ ರಂಗ ಚಟುವಟಿಕೆಗಳ ಮೂಲಕ ಸಾಂಸ್ಕೃತಿಕ ನೆಲಮೂಲ ಬೀಜಗಳನ್ನು  ಬಿತ್ತುವುದರೊಂದಿಗೆ ಎಳೆ ಮನಸ್ಸುಗಳು ಎಂದಿಗೂ ಮರೆಯದ ಮಾನವೀಯ ಮೌಲ್ಯಗಳು ನೆಲೆಗೊಳ್ಳಲು ಶ್ರೀ ರಂಗರಂಗ ಹವ್ಯಾಸಿ ಕಲಾವಿದರು ಕಾರಣಕರ್ತರಾದರು.
ಶಿರಾ ತಾಲೂಕು ಕರೇಮಾದೇನಹಳ್ಳಿಯಲ್ಲಿ ನಡೆದ ಗ್ರಾಮೀಣ ಮಕ್ಕಳ ರಂಗ ತರಬೇತಿ ಶಿಬಿರ ನಾಟಕ-ನೃತ್ಯ-ಸಂಗೀತ ಸಂಗಮದ ಸಮಾರೋಪ ಸಮಾರಂಭದಲ್ಲಿ ರಂಗಪೋಷಕ, ಅಭಿಮಾನಿ ಎಚ್.ಎಸ್. ರಾಜಶೇಖರಮೂರ್ತಿ ಮಾತನಾಡಿ ಕಳೆದ ಹನ್ನೆರಡು ವರ್ಷಗಳ  ಹಿಂದೆ ಇದೇ ಸಂಸ್ಥೆಯು ಹೊಸಕೆರೆ ಗ್ರಾಮದಲ್ಲಿ 45 ದಿನಗಳ ಕಾಲ ಹಮ್ಮಿಕೊಂಡಿದ್ದ ಜಾನಪದ ಕಲಾಮೇಳದ ಶಿಬಿರಾರ್ಥಿಯಾಗಿ ಭಾಗವಹಿಸಿದ್ದೆ. ಇಂದು ಹಲವಾರು ಹಂತಗಳನ್ನು ದಾಟಿ ಕರೇಮಾದೇನಹಳ್ಳಿಯ ಶಾಲಾವರಣದ ವೇದಿಕೆಯಲ್ಲಿ ನಿರ್ಮಿಸಿದ್ದ ಸರಳ ಹಸಿರು ಚಪ್ಪರದಡಿ ನಿಂತು ಮಾತಮಾಡುತ್ತಿರುವುದು ನನ್ನ ಅದೃಷ್ಟ ಎಂದರು.
ವಿಸ್ಮಿತನಾದೆ: ಸಾಂಸ್ಕೃತಿಕ ಮೌಲ್ಯಗಳು ಮರೆಯಾಗುವ ಮುನ್ನ ಎಲ್ಲ ಮಕ್ಕಳಿಗೂ ಇದು ತಲುಪಬೇಕು ಎಂದರು. ಶಿಬಿರ ಅಂದ ತಕ್ಷಣ ತಾತ್ಸಾರ ಮನೆ ಮಾಡುತ್ತದೆ. ಆದರೆ ಬೆಳಿಗ್ಗೆಯಿಂದ ಸಂಜೆವರೆಗೂ ಸುಮಾರು ಎಪ್ಪತ್ತು ಮುಖವಾಡಗಳನ್ನು ತೊಟ್ಟು, ಬಣ್ಣಬಣ್ಣದ ಕುಂಚಗಳನ್ನು ಹಿಡಿದು ಹುಲಿ, ಸಿಂಹ, ಜಿಂಕೆ, ಎಮ್ಮೆ, ಕೋಣ ಮುಂತಾದ ಸಬ್ಬಂಡಾರು ಪ್ರಾಣಿ-ಪಕ್ಷಿಗಳ ವೇಷದಲ್ಲಿ ಮನಸೋ ಇಚ್ಛೆ ಶಾಲಾ ಆವರಣದ ತುಂಬಾ ಕುಣಿದಾಡುತ್ತಿದ್ದನ್ನು ಮಕ್ಕಳೊಂದಿಗರು ನೋಡಿ ಅನುಭವಿಸಿದ್ದನ್ನು, ಅನುಭವಿಸಿದ್ದನ್ನು ನನ್ನೊಂದಿಗೆ ಹಂಚಿಕೊಂಡಾಗ ಏನೂ ತೋಚದೆ ವಿಸ್ಮಿತನಾದೆ ಎಂದರು.
ಸಂಜೆ ಕಳೆದು ರಾತ್ರಿಯಾದಂತೆ ಮೊದಲೇ ಹಳ್ಳಿಗರು ಹೇಳಿದಂತೆ ಒಂದೊಂದೇ ನಾಟಕ, ಕುಣಿತ, ಹಾಡುಗಳನ್ನು ಹಾಡಿ ರಂಜಿಸಿದರು.
ಇಂತಹ ಶಿಬಿರ ಕೇವಲ ಈ ಶಾಲೆಗಷ್ಟೇ ಸೀಮಿತವಾಗದೆ ಎಲ್ಲಾ ಶಾಲೆಗಳಿಗೂ ಸಿಗುವಂತಾಗಲಿ ಎಂದು ಆಶಿಸಿದರು.
ಉದ್ಘಾಟನೆಯನ್ನು ತಾ.ಪಂ. ಸದಸ್ಯ ಹೊನ್ನೇಶಪ್ಪ ನೆರವೇರಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜು, ಜಯಲಿಂಗೇಗೌಡ, ಸುಮ ನಾಗರಾಜು, ಲೋಕೇಶ್, ಕೃಷ್ಣಮೂರ್ತಿ, ಸಣ್ಣರಂಗಪ್ಪ ಹಾಗೂ ಉಪಾಧ್ಯಾಯ ದೇವರಾಜು ಎಚ್.ಎನ್. ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ನಾಗರಾಜು ಎಲ್. ಸ್ವಾಗತಿಸಿ, ಚನ್ನಯ್ಯನ ಪಾಳ್ಯದ ಶಾಲಾ ಮುಖ್ಯಶಿಕ್ಷಕ ದಯಾನಂದ್ ಆಶಯ ನುಡಿಗಳನ್ನಾಡಿದರೆ, ಸಹಶಿಕ್ಷಕ ಬಿ.ಸಿ. ಶಿವಕುಮಾರ್ ವಂದಿಸಿದರು. ಮಂಜುನಾಥ್ ಎಚ್.ಎನ್. ಕಾರ್ಯಕ್ರಮ ನಿರೂಪಿಸಿ ಶ್ರೀ ರಂಗರಂಗ ಕಲಾವಿದರು ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.