ವಿಶ್ವಶಾಂತಿಗಾಗಿ ಚಂಡಿಕಾ ಯಾಗ: ಚನ್ನಮಲ್ಲಿಕಾರ್ಜುನ ಸ್ವಾಮೀಜಿ
ಚಿಕ್ಕನಾಯಕನಹಳ್ಳಿ: ಜೀವವಿಲ್ಲದ ಜಡ ದೇಹ ಮಣ್ಣುಪಾಲು, ಹೂತಿಟ್ಟ ಧನವು ಧರಣಿಯ ಪಾಲು, ಗಳಿಸಿದ ಸ್ವತ್ತುಗಳೆಲ್ಲಾ ಮುಂದೆ ಕೂತು ಅತ್ತವರ ಪಾಲು, ಮಗನು ಹಾಕುವ ಪ್ರಸಾದ ಕಾಗೆಯ ಪಾಲು, ತಾನು ಮಾಡಿದ ಸೇವೆ, ದಾನ, ಧರ್ಮ ತನ್ನ ಪಾಲು ಎಂಬ ಶರಣರ ದಿವ್ಯ ವಾಣಿಯಂತೆ ಮಾನವನಾಗಿ ಜನಿಸಿದ ಮೇಲೆ ಲೋಕಕಲ್ಯಾಣಾರ್ಥವಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮೋಕ್ಷವನ್ನು ಹೊಂದಬೇಕು ಎಂದು ಮಾದಿಹಳ್ಳಿ ಮಠದ ಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ನುಡಿದರು.
ಜೂನ್ 4ರಂದು ಅವರು ಪಟ್ಟಣದ ಕಲ್ಲತ್ತಿಗಿರಿ ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಇಂತಹ ನಶ್ವರ ಕಾಯವನ್ನು ಹೊಂದಿರುವ ಮನುಜ ಜೀವಿತ ಕಾಲದಲ್ಲಿ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಅನೇಕ ಪಾಪಕರ್ಮಗಳನ್ನು ಮಾಡಿರುತ್ತಾನೆ. ಅದನ್ನು ಉಸಿರು ನಿಲ್ಲುವ ಮುನ್ನ ಅವುಗಳನ್ನು ನಿವಾರಿಸಿಕೊಳ್ಳುಲು ದಾನಧರ್ಮ, ಹೋಮಹವನ ಮುಂತಾದ ಪುಣ್ಯಕಾರ್ಯಗಳಲ್ಲಿ
ತೊಡಗಬೇಕು. ಈ ನಿಟ್ಟಿನಲ್ಲಿ ಮಾದೀಹಳ್ಳಿ ಹಿರೇಮಠದ ಲಿಂಗೈಕ್ಯ ಪರಮಪೂಜ್ಯ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದ ಅಂಗವಾಗಿ ಹಾಗೂ ವಿಶ್ವಶಾಂತಿ, ಲೋಕಕಲ್ಯಾಣಾರ್ಥವಾಗಿ ಚಂಡಿಕಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಧಾರ್ಮಿಕ ಕಾರ್ಯಕ್ರಮವನ್ನು ಸುಪ್ರಸಿದ್ಧ ಬೆಲಗೂರು ವೀರಪ್ರತಾಪ ಆಂಜನೇಯಸ್ವಾಮಿ ಕ್ಷೇತ್ರದ ಶ್ರೀಬಿಂಧುಮಾಧವ ಸ್ವಾಮೀಜಿಗಳು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ಹುಲಿಕೆರೆ ಹಿರೇಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಹೊನ್ನವಳ್ಳಿ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿ, ತಿಪಟೂರಿನ ಷಡಕ್ಷರಿ ಮಠದ ಶ್ರೀರುದ್ರಮುನಿ ಮಹಾಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ, ಬೀರೂರು ಮಠದ ಶ್ರೀರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿಲಿದ್ದಾರೆ. ಪ್ರಾಸ್ತಾವಿಕ ನುಡಿಗಳನ್ನು ಮಾದೀಹಳ್ಳಿ ಹಿರೇಮಠದ ಶ್ರೀಚನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ನುಡಿಯಲಿದ್ದಾರೆ.
ಇದೇ ಸಂದಭಂದಲ್ಲಿ ನೂತನ ಶಾಸಕರಾದ ಸಿ.ಬಿ.ಸುರೇಶ್ಬಾಬು, ಬಿ.ಜಿ.ಗೋವಿಂದಪ್ಪ, ಬೆಂಗಳೂರಿನ ಪ್ರಿಯಕೃಷ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಆರ್.ಈಶ್ವರಯ್ಯ, ರುದ್ರಯ್ಯ, ಸಿದ್ದಲಿಂಗಸ್ವಾಮಿ, ರಾಜಮ್ಮ, ರುದ್ರಮ್ಮ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

