ತುಮಕೂರು

ಸ್ನೇಹ ರಹಿತ ಬದುಕು ಬದುಕಲ್ಲ: ಜಯಣ್ಣ

Published On :

ತುಮಕೂರು: ಸ್ನೇಹ ರಹಿತ ಬದುಕು ಬದುಕಲ್ಲ. ಸ್ನೇಹ ಇಹ ಬಾಳಿನ ಸ್ವರ್ಗ ಎಂದು ವಿದ್ಯಾವಾಹಿನಿ ಸಂಸ್ಥಾಪಕ ಕೆ.ಬಿ. ಜಯಣ್ಣ ಅಭಿಪ್ರಾಯಪಟ್ಟರು.
ನಗರದ ಕ್ಯಾತ್ಸಂದ್ರದಲ್ಲಿನ ಕವಿತಾಕೃಷ್ಣ ಸಾಹಿತ್ಯ ಬಳಗ ಏರ್ಪಡಿಸಿದ್ದ ಹುಟ್ಟು ಹಬ್ಬ ಆಚರಣಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಇಂದಿನ ಬದುಕು ಯಾಂತ್ರಿಕವಾಗಿದೆ. ಧಾವಂತದ ಜೀವನದಲ್ಲಿ
ಜನರಿಗೆ ಜನರೇ ಬೇಡವಾಗಿದ್ದಾರೆ. ಮೂಕ ಪ್ರಪಂಚದಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲವಾಗಿದೆ. ನನಗೆ ಗೆಳೆಯರ ಬಳಗ ಬದುಕುಕೊಟ್ಟಿದೆ ಎಂದರು.
ಹುಟ್ಟು ಹಬ್ಬದ ಗೌರವ ಸ್ವೀಕರಿಸಿದ ಮತ್ತೋರ್ವ ಮಾಯಸಂದ್ರ ಹೋಬಳಿ ಕಸಾಪ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ಎನ್.ಆರ್. ಜಯರಾಮ್ ಮಾತನಾಡಿ ಜಾತಿ ಮತ್ತು ರಾಜಕಾರಣದಿಂದ ಇಂದು ಉಸಿರಾಡುವುದು ಕಷ್ಟವಾಗಿದೆ. ಪ್ರೀತಿ ವಿಶ್ವಾಸ ಐಕ್ಯತೆ, ಶಾಂತಿ ಮಾಯವಾಗಿದೆ. ಹಳ್ಳಿಗಾಡಿನಿಂದ ಬಂದ ನನ್ನ ಹುಟ್ಟು ಹಬ್ಬವನ್ನು ಆಚರಿಸಿ ಕವಿತಾಕೃಷ್ಣ ಸಾಹಿತ್ಯ ಮಂದಿರ ಭಾವೈಕ್ಯತಾ ಕೇಂದ್ರವಾಗಿ ವಿರಾಜಿಸಿದೆ. ನಾನು ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕವಿತಾಕೃಷ್ಣ ರು ಇಬ್ಬರಿಗೂ ಶಾಲು ಹೊದಿಸಿ ಫಲತಾಂಬೂಲದೊಂದಿಗೆ ಗೌರವಿಸಿ ಕೆ.ಬಿ. ಜಯಣ್ಣ ಕಿರಿಯರಿಗೆ ಅಣ್ಣನಿಗೆ, ಹಿರಿಯರಿಗೆ ವಿನಮ್ರಭಾವದ ಶ್ರದ್ಧಾಳುವಾಗಿದ್ದಾರೆ. ಹಾಗೆಯೇ ಎನ್.ಆರ್. ಜಯರಾಂ ರಾಜಕಾರಣದಲ್ಲಿದ್ದು ನಿಜವಾದ ಮಾನವತಾವಾದಿಯಾಗಿದ್ದಾರೆ ಎಂದರು. ಉದ್ಯಮಿ ಶ್ರೀನಿವಾಸ್, ನಗರಸಭಾ ಸದಸ್ಯ ಪ್ರೆಸ್ ರಾಜಣ್ಣ, ಜೆಡಿಯು ಜಿಲ್ಲಾಧ್ಯಕ್ಷ ಕೆ.ಜಿ.ಎಲ್. ರವಿ ಮಾತನಾಡಿದರು. ಮಲ್ಲೇಶ್ ಉಪಸ್ಥಿತರಿದ್ದರು. ಅನು ಅರವಿಂದ್, ಎಂ.ಪಿ. ಉಷಾ ಪ್ರಾರ್ಥಿಸಿದರು. ಬಿಂಬಕುಮಾರ್ ಸ್ವಾಗತಿಸಿದರು. ಎಲ್.ಎನ್. ಸಿಂಗ್ ವಂದಿಸಿದರು. ತೇಜಸ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.