ಅತ್ಯಾಚಾರ ತಡೆಗಟ್ಟುವುದು ರಾಜಕಾರಣಿಗಳ ಜವಾಬ್ದಾರಿ'
ಕ.ಪ್ರ.ವಾರ್ತೆ ಗುಬ್ಬಿ ಜೂ. 9
ನಮ್ಮ ನಾಡು ಸಾಧುಸಂತರು ನಡೆದಾಡಿದ ಪವಿತ್ರ ಪುಣ್ಯ ಭೂಮಿ. ಇಂತಹ ಭೂಮಿಯಲ್ಲಿ ಅತ್ಯಾಚಾರಗಳು ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವುದು ಮಠ, ಮಂದಿರ ಮತ್ತು ರಾಜಕಾರಣಿಗಳ ಜವಾಬ್ದಾರಿಯಾಗಿದೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಗುಬ್ಬಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ಗುಬ್ಬಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುಬ್ಬಿ, ಸಾಮೂಹಿಕ ಪೂಜಾ ಮತ್ತು ನವಜೀವನ ಸಮಿತಿ ಶತಮಾನೋತ್ಸವ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರು ಅತಂತ್ರ ಸ್ಥಿತಿ ತಲುಪಿದ್ದು ರೈತರಿಗೆ ಪರಿಹಾರ
ವ್ಯವಸ್ಥೆ ಮಾಡಬೇಕೆಂದು ತಿಳಿಸಿದ ಅವರು ಈ ದೇಶದಲ್ಲಿ ಧಾರ್ಮಿಕ ಕತೆಗಿಂತಲೂ ನೈತಿಕತೆಯ ಅವಶ್ಯಕತೆ ಇದೆ. ಜಾತಿಗಾಗಿ ನೀತಿಯನ್ನು ಕಳೆದುಕೊಳ್ಳುವ ರಾಜಕಾರಣಿಗಳು ಇಂದಿನ ಯುವಜನಾಂಗಕ್ಕೆ ನಾಗರಿಕತೆಯ ಪ್ರಜ್ಞೆಯನ್ನು ತುಂಬವ ನಿಟ್ಟಿನಲ್ಲಿ ಚಿಂತಿಸಬೇಕೆಂದರು.
ಮಹಿಳೆಯರು ಪಣ ತೊಡಲಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಆರ್. ಶ್ರೀನಿವಾಸ್ ಗ್ರಾಮೀಣ ಭಾಗದ ರೈತರು ಸಂಕಷ್ಟದಲ್ಲಿದ್ದು ಆಡಳಿತ ನಡೆಸುವ ಸರ್ಕಾರ ಮತ ಬ್ಯಾಂಕಗಳಿಗೋಸ್ಕರ ಸುಳ್ಳು ಭರವಸೆಗಳನ್ನು ನೀಡಿ ಅಡಕೆ ಮತ್ತು ತೆಂಗು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ. ಭ್ರಷ್ಟಚಾರ ಮುಕ್ತ ಸಮಾಜಕ್ಕೆ ಸ್ತ್ರೀಯರು ಪಣತೊಟ್ಟು ಮುಂದಾಗಬೇಕು ಎಂದರು.
31 ಸಾವಿರ ಸದಸ್ಯರು: ಪ್ರಾಂಶುಪಾಲರಾದ ಕೆ.ಎಸ್. ಸಿದ್ದಲಿಂಗಪ್ಪ, ಯೋಜನಾದಿಕಾರಿ ಪ್ರವೀಣ್ ಕುಮಾರ್ ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಭಿವೃದ್ಧಿ ನಿರ್ದೇಶಕರಾದ ಪಿ.ಗಂಗಾಧರ್ ರೈ ಮಾತನಾಡಿ 2ವರ್ಷ 6 ತಿಂಗಳಲ್ಲಿ 31ಸಾವಿರ ಸದಸ್ಯರಾಗಿದ್ದು, 10 ರು.ನಂತೆ ಉಳಿತಾಯ ಹಣ 3.5 ಕೋಟಿ ಉಳಿತಾಯವಾಗಿದ್ದು ಗ್ರಾಮೀಣ ಭಾಗದ ನೀರಾವರಿ ಯೋಜನೆಗಳಿಗೆ, ಮಹಿಳಾ ಸಂಘಗಳಿಂದ ಹೈನುಗಾರಿಕೆ ಹೆಚ್ಚು ಒತ್ತು ನೀಡಿದ್ದು ಇದರಿಂದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರನ್ನು ಸರಿಸಮಾನರಾಗಿ ಕಾಣುವಂತೆ ಮಾಡಿರುವುದು ಒಂದೆಡೆಯಾದರೆ ತನ್ನ ಕುಟುಂಬವನ್ನು ತಾಣೆ ಹೊಣೆಹೊತ್ತು ಸಮಾಜದಲ್ಲಿ ಎಲ್ಲರಂತೆ ಬಾಳಲು ಈಯೋಜನೆ ಪೂರಕವಾಗುವ ವ್ಯವಸ್ಥೆ ಕಲ್ಪಿಸಿದೆ ಎಂದರು.
ಪ್ರಾಂಶುಪಾಲರಾದ ಕೆ.ಎಸ್.ಸಿದ್ದಲಿಂಗಪ್ಪ, ಯೋಜನಾದಿಕಾರಿ ಪ್ರವೀಣ್ಕುಮಾರ್, ಗುಬ್ಬಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಸಂಸ್ಥೆಯ ಎಲ್ಲಾ ಮೇಲ್ವಿಚಾರಕರು ಹಾಗೂ ಮಹಿಳಾ ಸಂಘದ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

