ಕನ್ನಡ ಪರ ಕೆಲಸ ಕರವೇ ಮುಂಚೂಣಿಯಲ್ಲಿ
ಕ.ಪ್ರ.ವಾರ್ತೆ ಕುಣಿಗಲ್ ಜೂ. 10
ಕನ್ನಡ ನೆಲ, ಜಲ, ಭಾಷೆ ಸಂರಕ್ಷಣೆ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಕೊಡುಗೆ ಅಘಾದವಾಗಿದ್ದು, ಈ ಪೈಕಿ ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿರುವುದು ಸ್ವಾಗತಾರ್ಹ ಸಂಗತಿ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ತಿಳಿಸಿದರು.
ಸೋಮವಾರ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 47ನೇ ಹುಟ್ಟುಹಬ್ಬದ ಅಂಗವಾಗಿ, ಕುಣಿಗಲ್ ಕರವೇ ಘಟಕ ಪಟ್ಟಣದ ದೊಡ್ಡಪೇಟೆ, ಸಿದ್ಧಾರ್ಥ ಕಾಲೋನಿ ಹಾಗೂ ಬಿಜಿಎಸ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟುಪುಸ್ತಕ ಹಾಗೂ ಲೇಖನಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೇಲ್ವೆಯಲ್ಲಿ ಕನ್ನಡಿಗರಿಗೆ ಸಮಾನ ನೌಕರಿ ಅವಕಾಶ, ಬೆಳಗಾವಿಯಲ್ಲಿ ಕನ್ನಡಿಗರ ಸಮಸ್ಯೆ ನಿವಾರಣೆ ಸೇರಿದಂತೆ ರಾಜ್ಯದ ನೆಲ, ಜಲ, ಭಾಷೆ ಸಂರಕ್ಷಣೆ ನಿಟ್ಟಿನಲ್ಲಿ ಕರವೇ ಹೋರಾಟ ನಿಜಕ್ಕೂ ಅಭಿನಂದನೀಯ. ಯಾವುದೇ ರಾಜಕೀಯ ಸೋಂಕಿಲ್ಲದೆ ನಾಡು, ನುಡಿ ಸೇವೆಗೆ ಕರವೇ ಪದಾಧಿಕಾರಿಗಳು ಶ್ರಮಿಸುತ್ತಿರುವುದು ಇತರರಿಗೂ ಮಾರ್ಗದರ್ಶನ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೂ ಕರವೇ ಕಾರ್ಯಕರ್ತರ ಹೋರಾಟ ನಿಜಕ್ಕೂ ಅಭಿನಂದನೀಯ ಎಂದರು. ಕರವೇ ಗೌರವಾಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದು, ಬಿಆರ್ಸಿ ಗುಲ್ಜಾರ್ ಆಹಮದ್, ಪುರಸಭಾ ಸದಸ್ಯ ಅರುಣ್ಕುಮಾರ್, ಮುಖ್ಯೋಪಾಧ್ಯಾಯ ಗಂಗರಾಜು, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಕಿರಣ್ಕುಮಾರ್, ದಿನೇಶ್, ಪ್ರಶಾಂತ್, ಚೇತನ್, ಮಂಜ ಇತರರು ಉಪಸ್ಥಿತರಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಸಿಹಿ, ನೋಟ್ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

